ಜಗತಿಯಾಲ, ನ.19: ಧರ್ಮಪುರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಕುಮಾರ್ ಪರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ಭಾನುವಾರ ಮತಯಾಚನೆ ಮಾಡಿದರು.
ಕರ್ನಾಟಕ ರಾಜ್ಯದಲ್ಲಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರ ನೇತೃತ್ವದ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರ ಅಭಿವೃದ್ಧಿಗೆ ಪ್ರಮುಖವಾಗಿ ಪಾತ್ರವಹಿಸುತ್ತಿದೆ ಎಂದು ಹೇಳಿದರು.
ಅದೇ ರೀತಿ ತೆಲಂಗಾಣ ರಾಜ್ಯದಲ್ಲಿಯೂ ನಮ್ಮ ಕಾಂಗ್ರೆಸ್ ಪಕ್ಷವು 6 ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ನೀಡಿದ್ದು ತೆಲಂಗಾಣದ ಜನತೆ ಸ್ಪಷ್ಟ ಬಹುಮತವನ್ನು ನೀಡಿದರೆ ಇಲ್ಲಿಯೂ ಈ 6 ಗ್ಯಾರಂಟಿ ಗಳನ್ನು ಈಡೇರಿಸಿ ರೈತರ, ಬಡವರ ,ಮಹಿಳೆಯರ ನಿರುದ್ಯೋಗಿಗಳ,ಹಾಗೂ ಎಲ್ಲಾ ವರ್ಗದವರ ಅಭಿವೃದ್ಧಿಗೆ ಸಹಕಾರವಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದರು.