ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಜೂ.25: ಉತ್ತಮ ಅಂಕಗಳನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ಈ ರೀತಿಯ ಪ್ರತಿಭಾ ಪುರಸ್ಕಾರವನ್ನು ನೀಡುವುದರಿಂದ ಅವರಿಗೆ ಮುಂದಿನ ಕಲಿಕೆಗೆ ಹೆಚ್ಚು ಸಹಾಯವಾಗುತ್ತದೆ ಮತ್ತು ಬೇರೆ ವಿದ್ಯಾರ್ಥಿಗಳಿಗು ಮಾದರಿಯಾಗುತ್ತದೆ ಎಂದು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಬೂದಿಗೆರೆ ಗ್ರಾಮದಲ್ಲಿ ಶ್ರೀ ಕೃಷ್ಣ ಧರ್ಮರಾಯ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಮತ್ತು ಯಜ್ಙ ಸೇನಾ ಕರಗ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಶೇಕಡಾ 85 ಕ್ಕೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಒತ್ತು ನೀಡಬೇಕು. ಸರಕಾರ ಮಾಡುವಂತಹ ಕೆಲಸವನ್ನು ಸಂಘ ಸಂಸ್ಥೆ ಮಾಡುತ್ತಿದೆ. ಅದರಂತೆಯೇ ತಿಗಳ ಜನಾಂಗದ ಈ ಸಮುದಾಯವು ಎಸ್ಎಸ್ಎಲ್ಸಿ ಮತ್ತು ಪಿಯುಸಿ ತರಗತಿಯಲ್ಲಿ ಹೆಚ್ವು ಅಂಕಗಳನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುತ್ತಿರುವು ಶ್ಲಾಘನೀಯ ಎಂದರು.
ಒಂದು ರೀತಿಯಲ್ಲಿ ನನ್ನ ಈ ಗೆಲುವಿಗೆ ತಿಗಳ ಜನಗದವರು ಹೆಚ್ಚು ಸಹಕಾರ ಮಾಡಿದ್ದಾರೆ. ನಿಮ್ಮ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುತ್ತೇನೆ. ಸಮುದಾಯ ಭವನಕ್ಕೆ ಸರಕಾರದಿಂದ ಸಿಗುವಂತಹ ಅನುದಾನವನ್ನು ನಾನು ತಂದು ಕೊಡುವೆ. ನಿಮ್ಮ ಎಲ್ಲಾ ಕೆಲಸಕ್ಕೆ ನಾನು ನಿಮ್ಮ ಜೊತೆ ನಿಲ್ಲುವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣ ಧರ್ಮರಾಯ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಮತ್ತು ಯಜ್ಙ ಸೇನಾ ಕರಗ ಸೇವಾ ಟ್ರಸ್ಟ್ ಅಧ್ಯಕ್ಷ ಮುನಿರಾಜ್ ಮಂದಾರ ಅವರು ಮಾತನಾಡಿ ಹಿಂದುಳಿದ ಜನಾಂಗದಲ್ಲಿ ನಮ್ಮ ಜನಾಂಗವು ಒಂದು. ಶಿಕ್ಷಣದಲ್ಲಿ ಬಹಳ ಹಿಂದೆ ಉಳಿದಿದ್ದು ಮುಂದೆ ಶುಕ್ಷಣ ಕ್ಷೇತ್ರದಲ್ಲಿ ಮುಂದೆ ಬರಬೇಕು ಹಾಗೂ ಈ ನಮ್ಮ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಈ ಸ್ಥಾಪಿಸಲಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ಆರ್. ರಮೇಶ್ ಮಾತನಾಡಿ, ಇದು ಎರಡನೇ ವರ್ಷದ ಆಚರಣೆ.
ಹಿಂದೆ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡುತ್ತಿರಲಿಲ್ಲ. ಆದರೀಗ ನಮ್ಮ ಜನಾಂಗದವರು ಶಿಕ್ಷಣಕ್ಕೆ ಹೆಚ್ಚು ಮಹತ್ವವನ್ನು ಕೊಡುತ್ತಿರಿವುದು ಸಂತಸದ ವಿಷಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಸಂಯೋಜಕ ಎಲ್.ಎ ಮಂಜುನಾಥ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಬೆಂಗಳೂರು ಗ್ರಾಮಾಂತರ ಅಧ್ಯಕ್ಷ ಸಿ ಮುನಿರಾಜ್, ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಲಕ್ಷ್ಮೀ ನಾರಾಯಣಪ್ಪ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಣ್ಣ,ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಲಕ್ಷ್ಮಣ್ ಗೌಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಲೋಕೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾ ಆನಂದ್, ಮಾಜಿ ಅಧ್ಯಕ್ಷ ಶ್ರೀನಿವಾಸ್ ಗೌಡ,ಲಕ್ಷ್ಮಣ್ ಮೂರ್ತಿ,ಉಪಾಧ್ಯಕ್ಷ ರಿಜ್ವಾನ್ ನಜೀರ್ ಅಹಮದ್,ಸದಸ್ಯರಾದ ಮೋಹನ್,ಶ್ರೀನಿವಾಸ್, ಮಂಜುನಾಥ್, ಶ್ರೀನಿವಾಸ್, ವೆಂಕಟೇಶ್, ಮಂಜುನಾಥ್ ,ರಾಮ ಚಂದ್ರಪ್ಪ,ಶಿವರಾಮಣ್ಣ, ವೆಂಕಟೇಶ, ಮುನಿಕೃಷ್ಣ, ಇನ್ನೂ ಅನೇಕ ತಿಗಳ ಸಮುದಾಯದವರು ಹಾಜರಿದ್ದರು