ಸುದ್ದಿಮೂಲ ವಾರ್ತೆ
ಮೈಸೂರು, ಜು.16: ಜಗತ್ಪ್ರಸಿದ್ಧ ಮೈಸೂರು ದಸರಾ ಜಂಬೂಸವಾರಿಗೆ ಆನೆಗಳ ಆಯ್ಕೆ ಮತ್ತಿತರ ಸಿದ್ದತೆಗಳ ಬಗ್ಗೆ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಲ್ಲಿ ದಸರಾ ಸಿದ್ಧತೆ ಬಗ್ಗೆ ಮಾತನಾಡಿದ ಸಚಿವರು, ಅಧಿಕಾರಿಗಳ ಸಭೆ ಕರೆದಿದ್ದೇನೆ. ಜಂಬೂಸವಾರಿಗೆ ಆನೆಗಳು ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಗುವುದು ಎಂದು ಹೇಳಿದರು.
ಬೆಂಗಳೂರಿನಲ್ಲಿ ನಡೆಯುವ ಕಾಂಗ್ರೆಸ್ ಮಿತ್ರ ಪಕ್ಷಗಳ ಸಭೆಗೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳು ಆಗಿವೆ. ಇವತ್ತು ದೇಶದಲ್ಲಿ ಜನ ಬದಲಾವಣೆ ಬಯಸುತ್ತಿದ್ದಾರೆ. ಆ ಒಂದು ದೃಷ್ಟಿಯಿಂದ ಎಲ್ಲಾ ಮಿತ್ರ ಪಕ್ಷಗಳು ಒಗ್ಗೂಡಿ. ದೇಶದಲ್ಲಿ ನಡೆಯುತ್ತಿರುವ ದುರಾಡಳಿತ ವಿರುದ್ಧ ಒಂದು ತೀರ್ಮಾನ ಮಾಡುತ್ತಾರೆ.ಮುಂಬರುವ ಲೋಕಸಭಾ ಚುನಾವಣೆ ತಯಾರಿ ನಡೆಯುತ್ತದೆ. ಯಾರು ಸಂವಿಧಾನ,ಪ್ರಜಾಪ್ರಭುತ್ವ ಉಳಿಸಬೇಕು ಅಂತಾರೆ ಅವರೆಲ್ಲರೂ ಭಾಗಿಯಾಗ್ತಾರೆ ಎಂದು ಹೇಳಿದರು.
ಸಿಂಹದ ಮರಿಗಳಿಗೆ ನಾಮಕರಣ:
ಮೈಸೂರು ಮೃಗಾಲಯಕ್ಕೆ ಪ್ರಪ್ರಥಮವಾಗಿ ಭೇಟಿ ನೀಡಿದ್ದ ಸಚಿವರು, ಮೃಗಾಲಯದಲ್ಲಿ 5 ಸಿಂಹಗಳಿವೆ. ಅದರಲ್ಲಿ ರಾಜು ಮತ್ತು ನಿರ್ಭಯ ಎಂಬ ಸಿಂಹಗಳಿಗೆ ಜನಿಸಿದ ಮರಿಗಳಿಗೆ ಸೂರ್ಯ,ಚಂದ್ರ,ಕಬಿನಿ ಎಂದು ನಾಮಕರಣ ಮಾಡಿದರು.
ಅಧಿಕಾರಿಗಳು ಮೃಗಾಲಯವನ್ನ ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ. ಲಕ್ಷಾಂತರ ಜನ ಭೇಟಿ ನೀಡ್ತಿದ್ದಾರೆ. ಈ ಭೂಮಿಯಲ್ಲಿ ಇರುವ ಜೀವರಾಶಿಗಳಿಗೂ ಬದುಕುವ ಹಕ್ಕಿದೆ. ಮೃಗಾಲಯ ಅಭಿವೃದ್ಧಿಗೆ ಅಧಿಕಾರಿಗಳ ಸಭೆ ನಡೆಸಿ, ಇಡೀ ದೇಶದಲ್ಲಿಯೇ ಉತ್ತಮ ಮೃಗಾಲಯ ಮಾಡುವ ನಿಟ್ಟಿನಲ್ಲಿ ಕ್ರಮ ಜರುಗಿಸುತ್ತೇವೆ ಎಂದರು