ಸುದ್ದಿಮೂಲ ವಾರ್ತೆ ಬೀದರ್, ಜ.05:
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆಯಬೇಕಿದ್ದ ಕೆಡಿಪಿ ಸಭೆ ಅಕ್ಷರಶಃ ರಣಾಂಗಣವಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆ ನೇತೃತ್ವದಲ್ಲಿ ನಡೆಯುತ್ತಿಿದ್ದ ಕೆಡಿಪಿ ಸಭೆ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್ ಹಾಗೂ ಚಂದ್ರಶೇಖರ್ ಪಾಟೀಲ್ (ಹುಮನಾಬಾದ್) ಮಧ್ಯೆೆ ದೊಡ್ಡ ಜಗಳ ನಡೆದು ಹೋಗಿದ್ದು, ಜಿಲ್ಲಾ ಪಂಚಾಯತ್ ಕೆಡಿಪಿ ಸಭೆಯ ಇತಿಹಾಸದಲ್ಲಿ ಕಪ್ಪುು ಚುಕ್ಕೆೆಯಾಗಿದೆ.
ಇತ್ತೀಚೆಗೆ ಬಳ್ಳಾಾರಿಯಲ್ಲಿ ಶಾಸಕರಾದ ನಾರಾ ಭರತ್ ರೆಡ್ಡಿಿ ಹಾಗೂ ಜನಾರ್ಧನ್ ರೆಡ್ಡಿಿ ನಡುವೆ ಬ್ಯಾಾನರ್ ಕಟ್ಟುವ ವಿಚಾರಕ್ಕೆೆ ನಡೆದ ಜಗಳ ವ್ಯಕ್ತಿಿಯೊಬ್ಬನ ಸಾವಿನಲ್ಲಿ ಅಂತ್ಯವಾಗಿ ರಾಜ್ಯದಲ್ಲಿ ಕಾಂಗ್ರೆೆಸ್ ಹಾಗೂ ಬಿಜೆಪಿ ಮಧ್ಯೆೆ ದೊಡ್ಡ ಸಮರ ಏರ್ಪಟ್ಟಿಿರುವ ನಡುವೆಯೇ ಗಡಿ ಜಿಲ್ಲೆ ಬೀದರ್ನಲ್ಲೂ ಅಂಥದ್ದೇ ರಾಜಕೀಯ ಪ್ರೇೇರಿತ ಕಲಹ ಏರ್ಪಟ್ಟಿಿದ್ದು, ಪೊಲೀಸ್ರಿಗೆ ತಲೆನೋವಾಗಿ ಪರಿಣಮಿಸಿದೆ. ಸಹೋದರ ಸಂಬಂಧಿಗಳೇ ಆಗಿರುವ ಸಿದ್ದು ಪಾಟೀಲ್ ಹಾಗೂ ಮಾಜಿ ಸಚಿವ ರಾಜಶೇಖರ್ಪಾಟೀಲ್ ಕುಟುಂಬದ ನಡುವೆ ಕಳೆದ ವಿಧಾನ ಸಭೆ ಚುನಾವಣೆಯಿಂದ ಕಲಹ ಹೆಚ್ಚುತ್ತಲೇ ಇದ್ದು, ಮುಂದೊಂದು ದಿನ ಬಳ್ಳಾಾರಿ ರಾಜಕೀಯಲ್ಲಿ ನಡೆದ ಕಹಿ ಘಟನೆಗಳು ಹುಮನಾಬಾದ್ ರಾಜಕೀಯದಲ್ಲೂ ಮರುಕಳಿಸುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿಿವೆ.
ಘಟನೆಗೆ ಏನು ಕಾರಣ ?
ಶಾಸಕ ಸಿದ್ದು ಪಾಟೀಲ್ ಸಚಿವ ಈಶ್ವರ್ ಖಂಡ್ರೆೆಗೆ ಉದ್ದೇಶಿಸಿ ನಗರ ಹೊರವಲಯದ ಚಿಕ್ಕಪೇಟ್ ಸಮೀಪದ ಗುರುನಾನಕ್ ಝೀರಾ ೌಂಡೇಶ್ನಿಂದ ಅಭಿವೃದ್ಧಿಿಪಡಿಸಲಾದ ಬಡಾವಣೆ ಅಕ್ರಮವಾಗಿದ್ದು, ಈ ಬಗ್ಗೆೆ ಕಳೆದ ಕೆಡಿಪಿ ಸಭೆಯಲ್ಲೇ ಕೇಳಲಾಗಿತ್ತು. ಈ ಬಗ್ಗೆೆ ಜಿಲ್ಲಾಡಳಿತದ ಕ್ರಮ ಏನಾಗಿದೆ ? ಎಂದು ಪ್ರಶ್ನಿಿಸಿದ್ದಾರೆ. ಇದಕ್ಕೆೆ ಪ್ರತಿಕ್ರಿಿಯಿಸಿದ ಸಚಿವ ಖಂಡ್ರೆೆ, ಜಿಲ್ಲಾಧಿಕಾರಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ವಿವರಣೆ ಕೇಳಿ ನೋಡೋಣ ಎಂದು ವಿಷಯ ಬದಲಾವಣೆಗೆ ಮುಂದಾದರು. ಆದರೆ, ಇಷ್ಟಕ್ಕೆೆ ಸುಮ್ಮನಾಗದ ಸಿದ್ದು ಪಾಟೀಲ್, ಈ ಬಗ್ಗೆೆ ಈಗಲೇ ಸ್ಪಷ್ಟನೆ ನೀಡಬೇಕು. ಜಿಲ್ಲಾಡಳಿತದಿಂದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಬೇಕು ಎಂದು ಪಟ್ಟು ಹಿಡಿದರು. ಆದರೆ, ಮಧ್ಯೆೆ ಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸಹೋದರ ಚಂದ್ರಶೇಖರ್ ಪಾಟೀಲ್ ಭೀಮರಾವ್ ಪಾಟೀಲ್ ಬೆಂಬಲಕ್ಕೆೆ ಬಂದರು. ಅದೆಲ್ಲಾ ಸರಿಯಾಗಿಯೇ ನಡೆದಿದೆ. ಟ್ರಸ್ಟ್ ನಿಯಮ ಪ್ರಕಾರವಾಗಿಯೇ ಬಡಾವಣೆ ರಚಿಸಿದೆ. ಈ ಬಗ್ಗೆೆ ಸರಿಯಾದ ಮಾಹಿತಿ ಪಡೆದು ಮಾಹಿತಿ ಕೇಳಬೇಕು ಎಂದು ಸಿದ್ದು ಪಾಟೀಲ್ಗೆ ಸಲಹೆ ಮಾಡಿದರು. ಸದರಿ ಬಡಾವಣೆ ನಿಯಮ ಬಾಹಿರವಾಗಿಲ್ಲದಿದ್ದರೆ ನಾನು ಶಾಸಕ ಸ್ಥಾಾನಕ್ಕೆೆ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು. ಭೀಮರಾವ್ ಪಾಟೀಲ್ ಕೂಡ ರಾಜೀನಾಮೆಗೆ ಸಿದ್ದ ಎಂದರು. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿಿತಿ ವಿಕೋಪಕ್ಕೆೆ ಹೋಗಿದೆ. ಭೀಮರಾವ್ ಪಾಟೀಲ್ ಹಾಗೂ ಸಿದ್ದು ಪಾಟೀಲ್ ಮಧ್ಯೆೆ ಅಶ್ಲೀಲ ಬೈಗುಳ ಹರಿದಾಡಿದವು. ತಾಳ್ಮೆೆ ಕಳೆದುಕೊಂಡ ಭೀಮರಾವ್ ಪಾಟೀಲ್ ತಮ್ಮ ಕುರ್ಚಿಯಿಂದ ಎದ್ದು ಸಿದ್ದು ಪಾಟೀಲ್ ಬಳಿಗೆ ಬಂದು ಕೈ ಮಾಡಲು ಮುಂದಾದರು. ಪೊಲೀಸ್ ಅಧಿಕಾರಿಗಳು ಇಬ್ಬರಿಗೂ ಸಮಾಧಾನ ಪಡಿಸಲು ಯತ್ನಿಿಸಿದರೂ ಲ ನೀಡಲಿಲ್ಲ.
ಸಚಿವ ಈಶ್ವರ್ ಖಂಡ್ರೆೆ ವೇದಿಕೆಯಿಂದ ಕೆಳಗೆ ಬಂದು ಸಮಾಧಾನ ಪಡಿಸಲು ಯತ್ನಿಿಸಿದರೂ ಸಾಧ್ಯವಾಗಲಿಲ್ಲ. ಒಂದು ಕ್ಷಣ ಖಂಡ್ರೆೆ ಕೂಡ ಘಟನೆಯಿಂದ ಶಾಕ್ಗೆ ಒಳಗಾದರು. ಕಡೆಗೆ ಸಭೆ ಮುಂದೂಡಲಾಗಿದೆ ಎಂದು ಘೋಷಣೆ ಮಾಡಿದರು.
ಆಗ ಶಾಸಕ ಸಿದ್ದು ಪಾಟೀಲ್, ಭೀಮರಾವ್ ಪಾಟೀಲ್, ಚಂದ್ರಶೇಖರ್ಪಾಟೀಲ್ ಸಭೆಯಿಂದ ಹೊರ ನಡೆದರು. ಇಬ್ಬರ ಜೊತೆಯೂ ಪೊಲೀಸರು ಇದ್ದು, ಪರಿಸ್ಥಿಿತಿ ವಿಕೋಪಕ್ಕೆೆ ಹೋಗದಂತೆ ತಡೆದರು.
ಬಾಕ್ಸ್
ಎಸ್ಪಿಿ-ಡಿಸಿ ಸಮ್ಮುಖದಲ್ಲೇ ಗಲಾಟೆ
ಜಿಲ್ಲಾಧಿಕಾರಿ ಶಿಲ್ಪಾಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಾಧಿಕಾರಿ ಪ್ರದೀಪ್ ಗುಂಟಿ ಸೇರಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯುತ್ತಿಿದ್ದ ಕೆಡಿಪಿ ಸಭೆ ಶಾಸಕರ ನಡುವಿನ ಗಲಾಟೆಯಿಂದಾಗಿ ಸಭೆ ಮೊಟಕುಗೊಂಡಿದೆ.
ರಿಯಲ್ ಎಸ್ಟೇಟ್ ವ್ಯವಹಾರ ಸಂಬಂಧ ನಡೆದ ಮಾತಿನ ಚಕಮಕಿ ಹೊಡೆದಾಟಕ್ಕೆೆ ಬದಲಾಗಿದ್ದೇ ವಿಚಿತ್ರವಾಗಿದೆ. ನೋಡನೋಡುತ್ತಿಿದ್ದಂತೆ ಶಾಸಕರಾದ ಸಿದ್ದು ಪಾಟೀಲ್ ಹಾಗೂ ಭೀಮರಾವ್ ಪಾಟೀಲ್ ಬಾಯಿಗೆ ಬಂದ ಹಾಗೇ ಬೈದಾಡಿಕೊಂಡು ಹೊಡೆದಾಟ ನಡೆದಿರುವುದು ಹಿರಿಯ ಅಧಿಕಾರಿಗಳು ಬೆಚ್ಚಿಿಬೀಳುವಂತೆ ಮಾಡಿದೆ.
ಬಹುತೇಕ ಜಿಲ್ಲಾ ಮಟ್ಟದ ಅಧಿಕಾರಿಗಳೇ ಸಭೆಯಲ್ಲಿ ಉಪಸ್ಥಿಿತರಿದ್ದು, ಮಾಧ್ಯಮಗಳ ಮುಂದೆಯೇ ಬೈದಾಡಿಕೊಂಡು ಬಡಿದಾಟಕ್ಕೆೆ ಮುಂದಾದಾಗ ಸಭೆಯಲ್ಲಿ ಉಪಸ್ಥಿಿತರಿದ್ದವರು ಮೂಕಪ್ರೇೇಕ್ಷಕರಾಗಿದ್ದರು.
ಬಾಕ್ಸ್
ರಾಕಿಂಗ್ ಖಂಡ್ರೆೆ ಶಾಕಿಂಗ್
ಜಿಲ್ಲೆಯಲ್ಲಿ ನಡೆಯುವ ಸಭೆ – ಸಮಾರಂಭಗಳಲ್ಲಿ ಗದ್ದಲ ಉಂಟಾದಾಗ, ಕೆಡಿಪಿ ಸಭೆಗಳಲ್ಲಿ ಶಾಸಕರು ಏರುಧ್ವನಿಯಲ್ಲಿ ಮಾತಾಡಿದರೆ ಗಂಭೀರ ಧ್ವನಿಯಲ್ಲಿ ಸುಮ್ಮನಾಗಿಸುವ ಕಲೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆೆಗೆ ಕರಗತ. ಆಡಳಿತ ಪಕ್ಷದಲ್ಲೇ ಇರಲಿ, ವಿರೋಧ ಪಕ್ಷದಲ್ಲೇ ಇರಲಿ, ಖಂಡ್ರೆೆ ಗತ್ತು ಗೈರತ್ತು ವಿಶಿಷ್ಟ. ಯಾವುದೇ ಸಭೆಗಳಲ್ಲಿ ಖಂಡ್ರೆೆ ಉಪಸ್ಥಿಿತಿಯಿದ್ದರೆ ಬಹುತೇಕ ವಿರೋಧ ಪಕ್ಷದ ಶಾಸಕರು ಕೂಡ ಏರು ಧ್ವನಿಯಲ್ಲಿ ಮಾತಾಡಿದ್ದು ವಿರಳ. ಆ ಮಟ್ಟಿಿಗೆ ಗತ್ತು ಕಾಪಾಡಿಕೊಂಡು ಬಂದಿದ್ದಾರೆ ಈಶ್ವರ್ ಖಂಡ್ರೆೆ.
ಆದರೆ, ಸೋಮವಾರ ನಡೆದ ಘಟನೆಯಿಂದ ಸ್ವತಃ ಈಶ್ವರ್ ಖಂಡ್ರೆೆ ಬೆಚ್ಚಿಿ ಬಿದ್ದಿದ್ದಾರೆ. ವೇದಿಕೆಯಿಂದ ಕೆಳಗಿಳಿದು ಬಂದು ಎರಡೂ ಕಡೆಯ ಶಾಸಕರಿಗೆ ಸಮಾಧಾನ ಪಡಿಸಲು ಯತ್ನಿಿಸಿದರೂ ಯಾರೊಬ್ಬರು ಸೊಪ್ಪುು ಹಾಕಲಿಲ್ಲ. ಕೆಲ ಕಾಲ ಖಂಡ್ರೆೆ ಕೂಡ ಘಟನೆಯಿಂದ ವಿಚಲಿತರಾದಂತೆ ಕಂಡಿದ್ದು, ತಕ್ಷಣ ಸಭೆ ಮುಂದೂಡುವುದಾಗಿ ಘೋಷಿಸಿ ಹೊರನಡೆದರು.
ಬಾಕ್ಸ್
ರಿಯಲ್ ಎಸ್ಟೇಟ್ ವ್ಯವಹಾರದಿಂದ ಗಲಾಟೆ
ನಗರ ಹೊರವಲಯದ ಚಿಕ್ಕಪೇಟ್ ಸಮೀಪದ ಗುರುನಾನಕ್ ೌಂಡೇಶನ್ ಟ್ರಸ್ಟ್ ಹೆಸರಲ್ಲಿ ರಚಿಸಲಾದ ಬಡಾವಣೆ ವ್ಯವಹಾರವೇ ಕೆಡಿಪಿ ಸಭೆಯಲ್ಲಿ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯರ ನಡುವೆ ಗಲಾಟೆ ನಡೆಯಲು ಕಾರಣವಾಗಿದೆ.
ಬಡಾವಣೆ ಅಕ್ರಮವಾಗಿ ರಚಿಸಿ ಮಾರಾಟ ಮಾಡಲಾಗುತ್ತಿಿದೆ ಎಂದು ಸಿದ್ದು ಪಾಟೀಲ್ ಪ್ರಶ್ನಿಿಸಿ, ಈ ಬಗ್ಗೆೆ ಜಿಲ್ಲಾಡಳಿತದ ಕ್ರಮಕ್ಕೆೆ ಒತ್ತಾಾಯಿಸಿದರು. ಇದಕ್ಕೆೆ ವಿಧಾನ ಪರಿಷತ್ ಸದಸ್ಯರಾದ ಭೀಮರಾವ್ ಪಾಟೀಲ್ ಹಾಗೂ ಚಂದ್ರಶೇಖರ್ ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದೇ ಗಲಾಟೆಗೆ ಪ್ರಮುಖ ಕಾರಣವಾಗಿದೆ. ಗುರುನಾನಕ್ ಟ್ರಸ್ಟ್ನಿಂದ ರಚಿಸಲಾದ ಬಡಾವಣೆ ಅಕ್ರಮದ ಕಥೆಯೇ ಗಲಾಟೆಯ ಕೇಂದ್ರ ಬಿಂದುವಾಗಿದ್ದು, ಈ ಬಗ್ಗೆೆ ಇನ್ನಷ್ಟೇ ಹೆಚ್ಚಿಿನ ಮಾಹಿತಿ ಹೊರಬರಬೇಕಿದೆ. ಅಲ್ಪಸಂಖ್ಯಾಾತ ಮಾನ್ಯತೆ ಹೊಂದಿರುವ ಸದರಿ ಟ್ರಸ್ಟ್ ನಿವೇಶನ ಮಾರಾಟ ಮಾಡುವ ಹಾಗಿಲ್ಲ ಎನ್ನಲಾಗಿದೆ. ಇದೇ ಗಲಾಟೆಗೂ ಕಾರಣವಾಗಿದೆ ಎನ್ನಲಾಗಿದೆ.
ಹುಮನಾಬಾದನಲ್ಲಿ ನಿಷೇಧಾಜ್ಞೆ
ಬೀದರ್ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಸಿದ್ದು ಪಾಟೀಲ್ ಹಾಗೂ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಸಹೋದರರ ಮಧ್ಯೆೆ ನಡೆದ ಗಲಾಟೆ ಹಿನ್ನಲೆ ಮುನ್ನಚ್ಚೆೆರಿಕೆ ಕ್ರಮವಾಗಿ ಹುಮ್ನಾಾಬಾದ್ ತಾಲೂಕಾಡಳಿತವು ತಾಲೂಕಿನಾದ್ಯಂತ ನಿಷೇಧಾಜ್ಞೆ ಹೊರಡಿಸಿದೆ.
ಹುಮ್ನಾಾಬಾದ್ ತಹಸೀಲ್ದಾಾರ್ ಅಂಜುಮ ತಬಸ್ಸುಮ ನಿಷೇಧಾಜ್ಞೆ ಹೊರಡಿಸಿ ಆದೇಶ ಹೊರಡಿಸಿದ್ದಾಾರೆ.
ಖಂಡ್ರೆೆ ವೈಲ್ಯ – ಖುಬಾ
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕರಿಬ್ಬರು ಪರಸ್ಪರ ಜಗಳ ಮಾಡಿಕೊಂಡಿರುವುದು ತಲೆ ತಗ್ಗಿಿಸುವ ಘಟನೆಯಾಗಿದೆ. ಈ ಜಗಳದ ಸಂಪೂರ್ಣ ಹೊಣೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆೆಯವರು ಹೊರಬೇಕು ಮತ್ತು ಈ ಘಟನೆ ಕೂಡ ಅವರ ಆಡಳಿತ ವೈಲ್ಯಕ್ಕೆೆ ಮತ್ತೊೊಂದು ಸಾಕ್ಷಿಯೆಂದರೆ ತಪ್ಪಾಾಗಲಾರದು.
– ಭಗವಂತ ಖೂಬಾ
ಮಾಜಿ ಕೇಂದ್ರ ಸಚಿವ.
ಅಸಭ್ಯ ವರ್ತನೆ: ಶಾಸಕರ ವಿರುದ್ಧ ಕ್ರಮಕ್ಕೆೆ ಒತ್ತಾಾಯ
ಬೀದರ್ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯ ವೇಳೆ ಅಸಭ್ಯವಾಗಿ ಕೈಕೈ ಮಿಲಾಯಿಸಿಕೊಂಡು ಸಭೆಯ ಶಿಸ್ತು ಭಂಗಪಡಿಸಿದ ಆರೋಪದ ಮೇಲೆ, ಸಂಬಂಧಪಟ್ಟ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವಕ್ರಾಾಂತಿ ದಿವ್ಯ ಪೀಠ (ರಿ), ಬೀದರ್ ವತಿಯಿಂದ ಪೊಲೀಸ್ ವರಿಷ್ಠಾಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲೇ ಪರಸ್ಪರ ಅವಮಾನಕರವಾಗಿ ವರ್ತಿಸಿದ್ದಾರೆ. ಇದರಿಂದ ಸಭೆಯ ಗೌರವ ಹಾಳಾಗಿದ್ದು, ಸಾರ್ವಜನಿಕ ಸೇವಾ ವ್ಯವಸ್ಥೆೆಗೆ ಕೆಟ್ಟ ಮಾದರಿ ನಿರ್ಮಾಣವಾಗಿದೆ ಎಂದು
ಸಾಮಾಜಿಕ ಚಿಂತಕ ಜಗದೀಶ್ವರ ಬಿರಾದಾರ ಹಾಗೂ ಸಂಘಟನೆಯ ಅಧ್ಯಕ್ಷ ಓಂಪ್ರಕಾಶ ರೊಟ್ಟೆೆ ದೂರಿನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

