ಸುದ್ದಿಮೂಲ ವಾರ್ತೆ ಬೆಂಗಳೂರು, ನ.14:
ಪ್ರಾಾಥಮಿಕ ಹಾಗೂ ಪ್ರೌೌಢಶಾಲೆಗಳಿಗೆ ಶೀಘ್ರದಲ್ಲೇ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.
ಮಕ್ಕಳ ದಿನಾಚರಣೆಯ ಅಂಗವಾಗಿ ವಿಧಾನ ಸೌಧದ ಬ್ಯಾಾಂಕ್ವೆೆಟ್ ಹಾಲ್ನಲ್ಲಿ ನಡೆದ ಬೃಹತ್ ಪೋಷಕ-ಶಿಕ್ಷಕರ ಸಭೆಯ ಉದ್ಘಾಾಟನಾ ಸಮಾರಂಭದಲ್ಲಿ ರಾಜ್ಯದ ವಿವಿಧ ಭಾಗಗಳ ಸರ್ಕಾರಿ ಶಾಲೆ ಮತ್ತು ಪಿಯುಸಿ ವಿದ್ಯಾಾರ್ಥಿಗಳೊಂದಿಗೆ ಆನ್ಲೈನ್ ಹಾಗೂ ನೇರವಾಗಿ ಸಂವಾದ ನಡೆಸಿ ಮಾತನಾಡಿದರು.
ಇಲಾಖೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡುತ್ತಿಿದೆ. ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ನೇಮಕಾತಿ ನಡೆಯುತ್ತಿಿದೆ. ಈಗಾಗಲೇ 13 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಶೀಘ್ರದಲ್ಲೇ ಮತ್ತೆೆ 12,000 ಶಿಕ್ಷಕರನ್ನು ಹಾಗೂ ಅನುದಾನಿತ ಸಂಸ್ಥೆೆಗಳಲ್ಲಿ 6,000ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ, ಬೇಡಿಕೆಯ ಅನುಗುಣವಾಗಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿಿನ ಪ್ರೋೋತ್ಸಾಾಹ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಬೈಲಹೊಂಗಲದ ಸರ್ಕಾರಿ ಪಿಯುಸಿ ವಿದ್ಯಾಾರ್ಥಿ ರಾಕೇಶ್ ಅವರು, ಶಾಲೆ 10 ಗಂಟೆಗೆ ಆರಂಭವಾಗಿ 4 ಗಂಟೆಗೆ ಮುಗಿಯುವುದರಿಂದ ತಾವು ಬೆಳಗ್ಗೆೆ 7:45ಕ್ಕೆೆ ಮನೆ ಬಿಡಬೇಕಾಗುತ್ತದೆ. ಹೀಗಾಗಿ ಪಿಯುಸಿ ವಿದ್ಯಾಾರ್ಥಿಗಳಿಗೂ ಮಧ್ಯಾಾಹ್ನದ ಉಪಹಾರ ಯೋಜನೆ ವಿಸ್ತರಿಸುವಂತೆ ಕೋರಿದರು.
ಸಿಎಂ ಜತೆ ಚರ್ಚಿಸಿ ಪಿಯುಸಿಗೂ ಮಧ್ಯಾಾಹ್ನದ ಬಿಸಿಯೂಟ:
ಇದಕ್ಕೆೆ ಸ್ಪಂದಿಸಿದ ಸಚಿವರು, ಈ ಹಿಂದೆ 8ನೇ ತರಗತಿಯವರೆಗೆ ಇದ್ದ ಯೋಜನೆಯನ್ನು ಈಗ 10ನೇ ತರಗತಿಯವರೆಗೆ ವಿಸ್ತರಿಸಲಾಗಿದೆ. ಜೊತೆಗೆ, ವಾರದಲ್ಲಿ ಆರು ದಿನ ಮೊಟ್ಟೆೆ ಅಥವಾ ಬಾಳೆಹಣ್ಣು ಮತ್ತು ಐದು ದಿನ ಸಾಯಿ ಶ್ಯೂರ್ ಮಿಶ್ರಣವನ್ನು ನೀಡಲಾಗುತ್ತಿಿದೆ. ಮೊಟ್ಟೆೆ, ಬಾಳೆಹಣ್ಣು ವಿಸ್ತರಣೆಗೆ 1500 ಕೋಟಿ ಅನುದಾನ ನೀಡಿದ ಅಜೀಂ ಪ್ರೇೇಮ್ಜಿಿ ೌಂಡೇಶನ್ಗೆ ಅವರು ಧನ್ಯವಾದ ತಿಳಿಸಿದರು. ರಾಜ್ಯದ ಎಲ್ಲ ಪಿಯುಸಿ ವಿದ್ಯಾಾರ್ಥಿಗಳಿಗೂ ಇದನ್ನು ವಿಸ್ತರಿಸುವ ಕುರಿತು ಮುಖ್ಯಮಂತ್ರಿಿಯವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ಪೊಲೀಸ್ ಕಾಲೋನಿಯ ಸರ್ಕಾರಿ ಪ್ರೌೌಢಶಾಲಾ ವಿದ್ಯಾಾರ್ಥಿನಿ ತನುಜಾ ಬಿ.ವಿ. ಅವರು ಭವಿಷ್ಯದ ಉದ್ಯೋೋಗಾವಕಾಶಗಳ ಬಗ್ಗೆೆ ಪ್ರಶ್ನಿಿಸಿದರು. ಇದಕ್ಕೆೆ ಉತ್ತರಿಸಿದ ಸಚಿವರು, ಉತ್ತೀರ್ಣ ಅಂಕವನ್ನು ಶೇ. 35 ರಿಂದ 33ಕ್ಕೆೆ ಇಳಿಸುವ ಇಲಾಖೆಯ ನಿರ್ಧಾರ ಪುನರುಚ್ಚರಿಸಿದರು. ಇದರಿಂದ ಲಕ್ಷಾಂತರ ವಿದ್ಯಾಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಜೊತೆಗೆ, ಕೆಪಿಎಸ್ ಶಾಲೆಗಳಲ್ಲಿ ಸ್ಕಿಿಲ್ ಅಟ್ ಸ್ಕೂಲ್’ ಕಾರ್ಯಕ್ರಮ ಮತ್ತು 1ನೇ ತರಗತಿಯಿಂದಲೇ ಕಂಪ್ಯೂೂಟರ್ ಕಲಿಕೆ ಜಾರಿಗೆ ತರುವುದರಿಂದ ವಿದ್ಯಾಾರ್ಥಿಗಳಿಗೆ ಉದ್ಯೋೋಗ ಪಡೆಯಲು ನೆರವಾಗಲಿದೆ ಎಂದು ತಿಳಿಸಿದರು.
ಶಿವಮೊಗ್ಗದ ಸರ್ಕಾರಿ ಪ್ರೌೌಢಶಾಲಾ ವಿದ್ಯಾಾರ್ಥಿನಿ ಬೃಂದಾ ಅವರು ದ್ವಿಿಭಾಷಾ ಶಿಕ್ಷಣದ ಕುರಿತು ಕೇಳಿದಾಗ, ದ್ವಿಿಭಾಷಾ ಮಾಧ್ಯಮವಿದ್ದರೂ ಕನ್ನಡ ಭಾಷೆಗೆ ಸದಾ ಆದ್ಯತೆ ನೀಡಬೇಕು ಮತ್ತು ಅದನ್ನು ಪ್ರೀೀತಿಯಿಂದ ಅಪ್ಪಿಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಸಚಿವರು ವಿದ್ಯಾಾರ್ಥಿಗಳಿಗೆ ಉಚಿತ ಹಾಸ್ಟೆೆಲ್ ಸೌಲಭ್ಯಗಳು ಮತ್ತು ಬಾಲಕರಿಗೆ ಉಚಿತ ಸಾರಿಗೆ ಸೌಲಭ್ಯಗಳ ಕುರಿತು ಸಹ ಪ್ರತಿಕ್ರಿಿಯಿಸಿದರು. ಶೈಕ್ಷಣಿಕ ವರ್ಷಗಳಿಂದ ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾಾರ್ಥಿಗಳಿಗೆ (ಕಾನೂನು, ಸಿಎ ಸೇರಿದಂತೆ) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರಿ ಸಂಸ್ಥೆೆಗಳನ್ನು ಇನ್ನಷ್ಟು ಬಲಪಡಿಸಲು ಹಳೆಯ ವಿದ್ಯಾಾರ್ಥಿಗಳು ತಮ್ಮ ಶಾಲೆಗಳು ಮತ್ತು ಕಾಲೇಜುಗಳ ಅಭಿವೃದ್ಧಿಿಗೆ ದೇಣಿಗೆ ನೀಡುವಂತೆ ಅವರು ಮನವಿ ಮಾಡಿದರು.
ಮಕ್ಕಳ ದಿನಾಚರಣೆ ಅಂಗವಾಗಿ ವಿದ್ಯಾಾರ್ಥಿಗಳ ಜತೆ ಸಂವಾದ ನಡೆಸಿದ ಸಚಿವ ಮಧು ಬಂಗಾರಪ್ಪ ಶೀಘ್ರದಲ್ಲೇ 12 ಸಾವಿರ ಶಿಕ್ಷಕರ ನೇಮಕ

