ಸುದ್ದಿ ಮೂಲ ವಾರ್ತೆ
ತಿಪಟೂರು ಮಾ,21: ಗುಡಿಸಲಿಂದ ಮುಕ್ತವಾಗಿ ಎಲ್ಲಾ ಪ್ರಜೆಗಳು ಒಳ್ಳೆಯ ಸೂರು ನಿರ್ಮಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂಬುದೇ ಬಿಜೆಪಿ ಸರ್ಕಾರದ ಉದ್ದೇಶ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದರು.
ನಗರದ ಒಕ್ಕಲಿಗರ ಭವನದಲ್ಲಿ ತಾಲ್ಲೂಕು ಪಂಚಾಯಿತಿಯಿಂದ ಅಯೋಜನೆ ಮಾಡಿದ್ದ ಗ್ರಾಮೀಣ ವಸತಿ ಯೋಜನೆಗಳ ಫಲಾನುಭವಿಗಳಿಗೆ ಕಾಮಗಾರಿ ಆದೇಶ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಜನರು ಉತ್ತಮ ಬದುಕು ಕಟ್ಟಿಕೊಳ್ಳಲು ವಸತಿಯು ತುಂಬಾ ಅವಶ್ಯವಾಗಿರುವುದರಿಂದ ಮೋದಿ ನೇತೃತ್ವದ ಸರ್ಕಾರವು ನುಡಿದಂತೆ ನೆಡೆದುಕೊಂಡು ಆರ್ಹ ಫಲಾನುಭವಿಗಳಿಗೆ ವಸತಿ ಯೋಜನೆಗಳನ್ನು ನೀಡಲಾಗಿದೆ ಆದರಂತೆ ಶೌಚಾಲಾಯ ನಿರ್ಮಾಣಕ್ಕೆ, ಪ್ರಧಾನ ಮಂತ್ರಿಗಳ ಕಿಸಾನ್ ಸನ್ಮಾನ್ ಯೋಜನೆಗಳಿಗೆ ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದಂತೆ ನೇರವಾಗಿ ಅವರ ಖಾತೆಗಳಿಗೆ ಹಣ ಸಂದಾಯ ಮಾಡಲಾಗುತ್ತಿದ್ದು ಆಡಳಿತದಲ್ಲೂ ಪಾರದರ್ಶಕತೆಯನ್ನು ನೋಡಬಹುದಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ದಂಡಾಧಿಕಾರಿ ಪವನ್ಕುಮಾರ್, ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ಆಡಳಿತಾಧಿಕಾರಿ ಟಿ.ಎನ್ ಅಶೋಕ್, ವಸತಿ ನೋಡಲ್ ಅಧಿಕಾರಿ ರುಕೋಧರ್, ಹಾಗೂ ಪರಿಶಿಷ್ಟ ಜಾತಿ 343, ಪಂಗಡ139, ಅಲ್ಪಸಂಖ್ಯಾತ 200 ಸಾಮಾನ್ಯ 1318 ಒಟ್ಟು ಎರಡು ಸಾವಿರ ಫಲಾನುಭವಿಗಳು ಹಾಗೂ 26 ಗ್ರಾಮ ಪಂಚಾಯಿತಿಯ ಪಿಡಿಒ, ಮತ್ತು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಜರಿದ್ದರು.