ಸುದ್ದಿಮೂಲ ವಾರ್ತೆ ಕಲಬುರಗಿ, ಜ.07:
ಜಿಲ್ಲೆಯ ಕಾಳಗಿ ಹಾಗೂ ಯಡ್ರಾಾಮಿಯ 30 ಹಾಸಿಗೆಗಳ ಸಮುದಾಯ ಆರೋಗ್ಯಗಳನ್ನು 50 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನಾಾಗಿ ಹಾಗೂ ಇಜೇರಿ ಹಾಗೂ ಕಲಬುರಗಿ ತಾಲೂಕಿನ ರಹತಾಬಾದ್ ಮತ್ತು ಹಿರೇಸಾವಳಗಿ ಗ್ರಾಾಮಗಳ ಪ್ರಾಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ ಸಮುದಾಯ ಕೇಂದ್ರಗಳನ್ನಾಾಗಿ ಮೇಲ್ದರ್ಜೆಗೇರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆೆ ಪತ್ರಿಿಕಾ ಹೇಳಿಕೆ ನೀಡಿರುವ ಅವರು, ಕಾಳಗಿ ಹಾಗೂ ಯಡ್ರಾಾಮಿ ಗ್ರಾಾಮಗಳು ತಾಲೂಕು ಕೇಂದ್ರಗಳಾಗಿವೆ. ಇಲ್ಲಿ ಪ್ರಸ್ತುತ 30 ಹಾಸಿಗೆಗಳ ಸಮುದಾಯ ಕೇಂದ್ರಗಳಿದ್ದು ಅವುಗಳನ್ನು 50 ಹಾಸಿಗೆಗಳ ಸಮುದಾಯ ಕೇಂದ್ರಗಳನ್ನಾಾಗಿ ಮೇಲ್ದರ್ಜೆಗೇರಿಸಲಾಗಿದೆ.
ಜೊತೆಗೆ ಇಜೇರಿ, ರಹತಾಬಾದ್ ಹಾಗೂ ಹಿರೇಸಾವಳಗಿ ಗ್ರಾಾಮಗಳು ಭವಿಷ್ಯದಲ್ಲಿ ಬೆಳವಣಿಗೆ ಹೊಂದುವ ಗ್ರಾಾಮಗಳಾಗಿದ್ದು ಜನಸಂಖ್ಯೆೆಗೆ ಅನುಗುಣವಾಗಿ ಪ್ರಸ್ತುವ ಇರುವ ಪ್ರಾಾಥಮಿಕ ಆರೋಗ್ಯ ಕೇಂದ್ರಗಳನ್ನು 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನಾಾಗಿ ಮೇಲ್ದರ್ಜೆಗೇರಿಸುವುದು ಅಗತ್ಯ ಹಾಗೂ ಅವಶ್ಯಕವಾಗಿತ್ತು.
ಈ ಹಿನ್ನೆೆಲೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪತ್ರ ಬರೆದು ಕೋರಲಾಗಿತ್ತು. ಅದರಂತೆ ಸ್ಪಂದಿಸಿದ ಸಚಿವರು ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿದ್ದಾರೆ ಎಂದು ಪ್ರಿಿಯಾಂಕ್ ಖರ್ಗೆ ತಿಳಿಸಿದ್ದಾರೆ.

