ಸುದ್ದಿಮೂಲ ವಾರ್ತೆ ಬೀದರ್, ಸೆ.29:
ನಾಲ್ಕು ಬಾರಿ ಗೆದ್ದು ಬೀಗಿದ ಬೀದರ್ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ರಹೀಂ ಖಾನ್ ಈಗ ಪೌರಾಡಳಿತ ಸಚಿವ. ದೊಡ್ಡ ಹುದ್ದೆ ದೊಡ್ಡ ಜವಾಬ್ದಾಾರಿ. ಆದರೆ, ಸಚಿವ ರಹೀಂ ಖಾನ್ ಅಧಿಕಾರದ ಮದದಲ್ಲಿ ಮತ ಹಾಕಿ ಗೆಲ್ಲಿಸಿದ ಮತದಾರರನ್ನೇ ಮರೆತಿರುವುದು ಮಾತ್ರ ವಿಚಿತ್ರವಾಗಿದೆ.
ಸಿದ್ರಾಾಮಯ್ಯ ಸಚಿವ ಸಂಪುಟದಲ್ಲಿ ಕ್ಯಾಾಬಿನೆಟ್ ದರ್ಜೆ ಸಚಿವರಾಗಿರುವ ರಹೀಂ ಖಾನ್ ಗ್ರಾಾಮೀಣ ಭಾಗದ ಕಡೆಗೆ ಸುಳಿಯುವುದೇ ಅಪರೂಪ ಎಂಬಅತಾಗಿದೆ. ಕಳೆದ ಮೂರು ತಿಂಗಳಿಅದ ಸುರಿಯುತ್ತಿಿರುವ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ರೈತರು, ಜನಸಾಮಾನ್ಯರು ಕಂಗಾಲಾಗಿದ್ದಾರೆ. ಬೀದರ್ ತಾಲೂಕಿನ ಪ್ರಮುಖ ಸೇತುವೆಗಳಾದ ಗಾದಗಿ, ಚಿಲ್ಲರ್ಗಿ ರಸ್ತೆೆ ಸಂಚಾರ ಬಂದ್ ಆಗಿ ಜನಸಾಮಾನ್ಯರು ಹೈರಾಣಾಗಿದ್ದಾರೆ.
ಬೀದರ್ ಉತ್ತರ ವಿಧಾನ ಸಭೆ ಕ್ಷೇತ್ರದಲ್ಲಿ ಹರಿಯುವ ಮಾಂಜ್ರಾಾ ನದಿಯಿಂದ ಕ್ಷೇತ್ರದಲ್ಲಿ ಸಾಕಷ್ಟು ಜಮೀನುಗಳು ಜಲಾವೃತಗೊಂಡಿವೆ. ಸಾಲ ಸೋಲ ಮಾಡಿ ಬೆಳೆದ ಬೆಳೆಗಳು ನೀರಲ್ಲಿ ಮುಳುಗಿವೆ. ಸತತ ಮಳೆ ಹಾಗೂ ಪ್ರವಾಹದಿಂದ ರೈತರು ಬೆಳೆದ ಬೆಳೆಗಳಷ್ಟೇ ಮುಳುಗಿಲ್ಲ, ಬದಲಿಗೆ ಜನರ ಬದುಕೂ ಮುಳುಗಿದೆ. ಗಂಟೆ ಮಳೆ ಬಂದರೆ ಗಾದಗಿ ಸೇತುವೆ ಜಲಾವೃತವಾಗುತ್ತಿಿದೆ. ಮಾಂಜ್ರಾಾಗೆ ನೀರಿನ ಹರಿವು ಹೆಚ್ಚಾಾದರೆ ಚಿಲ್ಲರ್ಗಿ ಸೇತುವೆ ಮುಳುಗುತ್ತಿಿದೆ. ಇದರೊಂದಿಗೆ ಅಪಾರ ಪ್ರಮಾಣದ ಜಮೀನುಗಳು ಜಲಾವೃತಗೊಂಡು ರೈತರು ಕಷ್ಟ ಅನುಭವಿಸುವಂತೆ ಮಾಡಿದೆ.
ಆದರೆ, ಕ್ಷೇತ್ರದ ಶಾಸಕರೂ ಆಗಿರುವ ಸಚಿವ ರಹೀಂ ಖಾನ್ ಕಾಟಾಚಾರಕ್ಕೆೆ ಇತ್ತೀಚೆಗೆ ಒಮ್ಮೆೆ ಕ್ಷೇತ್ರದ ಗ್ರಾಾಮಗಳಿಗೆ ಭೇಟಿ ಮಾಡಿ ಹೋಗಿದ್ದು ಬಿಟ್ಟರೆ ಮತ್ತೆೆ ಈ ಕಡೆಗೆ ಸುಳಿವೇ ಇಲ್ಲ.
ಸೇತುವೆಗಳು ಜಲಾವೃತಗೊಂಡರೂ ಬಾರದ ಸಚಿವ
ಗಂಟೆ ಮಳೆಗೆ ಗಾದಗಿ ಸೇತುವೆ ಉಕ್ಕಿಿ ಹರಿಯುತ್ತಿಿದೆ. ಮಳೆ ಬಂದಾಗೊಮ್ಮೆೆ ಇದೇ ಪರಿಸ್ಥಿಿತಿ ಇದೆ. ಈ ಬಗ್ಗೆೆ ಹಲವು ಬಾರಿ ಜನಸಾಮಾನ್ಯರು ಸಂಬಂಧಪಟ್ಟವರ ಗಮನಕ್ಕೆೆ ತಂದರೂ ಯಾವ ಪ್ರಯೋಜನವೂ ಆಗಿಲ್ಲ. ಕ್ಷೇತ್ರದ ಪ್ರಮುಖ ಸೇತುವೆ ಸ್ಥಿಿತಿ ಇದಾಗಿದ್ದು, ಇನ್ನು ಇತರೆಡೆ ಪರಿಸ್ಥಿಿತಿ ಮತ್ತಷ್ಟು ಹದಗೆಟ್ಟಿಿದೆ. ಇನ್ನು ಚಿಮ್ಮಕೋಡ್ನಿಂದ ಚಿಲ್ಲರ್ಗಿಗೆ ಸಂಪರ್ಕ ಕಲ್ಪಿಿಸುವ ಚಿಲ್ಲರ್ಗಿ ಸೇತುವೆ ಕೇವಲ ಎರಡು ಗ್ರಾಾಮಗಳಿಗೆ ಸಂಪರ್ಕ ಕಲ್ಪಿಿಸುವ ರಸ್ತೆೆಯಾಗಿಲ್ಲ. ಬದಲಿಗೆ ನೆರೆಯ ತೆಲಂಗಾಣಕ್ಕೂ ಇದೇ ಮಾರ್ಗವಿದೆ. ಕಳೆದ ಐದಾರು ದಿನಗಳಿಂದ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಅಕ್ಕಪಕ್ಕದ ಜಮೀನುಗಳು ಮುಳುಗಿವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳೂ ಈಕಡೆಗೆ ಸುಳಿಯುತ್ತಿಿಲ್ಲ. ಕ್ಯಾಾಬಿನೆಟ್ ದರ್ಜೆ ಸಚಿವ ರಹೀಂ ಖಾನ್ಗೆ ಈ ಬಗ್ಗೆೆ ಹೇಳೋಣ ಎಂದು ಜನರು ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ಯಾರಿಗೆ ಹೇಳಬೇಕು ? ಸಮಸ್ಯೆೆ ಎನ್ನುತ್ತಿಿದ್ದಾರೆ ಜನರು.
್
ಸಾವಿರಾರು ಎಕರೆ ಜಲಸಮಾಧಿ
ತಾಲೂಕಿನ ಚಾಂಬೋಳ್, ಚಿಲ್ಲರ್ಗಿ, ಚಿಮ್ಮಕೋಡ್ ಗ್ರಾಾಮ ಸಮೀಪ ಹರಿಯುವ ಮಾಂಜ್ರಾಾ ನದಿ ನೀರು ನುಗ್ಗಿಿ ಸಾವಿರಾರು ಎಕರೆ ಜಮೀನುಗಳು ಜಲಸಮಾಧಿಯಾಗಿವೆ. ಬೆಳೆ, ಕಟ್ಟೆೆ, ರಸ್ತೆೆಗಳು ಜಲಾವೃತಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈಕಡೆಗೆ ಸುಳಿಯುತ್ತಿಿಲ್ಲ. ಅಧಿಕಾರಿಗಳಿಗೆ ಕರೆ ಮಾಡಿ ಪರಿಶೀಲನೆ ಮಾಡುವಂತೆ ಹೇಳುವಷ್ಟು ಪುರಸೊತ್ತು ಸಚಿವ ರಹೀಮ್ ಖಾನ್ಗೆ ಇಲ್ಲವೇ? ಮತ ಹಾಕಿದ ಪ್ರಭುಗಳಿಗೆ ಕೊಡುವ ಕೊಡುಗೆ ಇದೇನಾ? ಪ್ರಶ್ನಿಿಸುತ್ತಿಿದ್ದಾರೆ ಕ್ಷೇತ್ರದ ಜನ. ಉತ್ತರಿಸಬೇಕು ಸಚಿವ ರಹೀಮ್ ಖಾನ್.