ಸುದ್ದಿಮೂಲ ವಾರ್ತೆ
ಆನೇಕಲ್,ಅ.27:ಸರ್ಜಾಪುರದ ಸುಕೃತಿ ಕಲ್ಚರಲ್ ಅಸೋಸಿಯೇಶನ್ ವತಿಯಿಂದ 8 ನೇ ವರ್ಷದ ದುರ್ಗಾ ಪೂಜಾ ಕಾರ್ಯಕ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಸರ್ಜಾಪುರ ಗ್ರಾಮದಲ್ಲಿರುವ ರಾಜ್ ಗೋಪಾಲ್ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದುರ್ಗಾ ಪೂಜೆಯು ಉತ್ತರ ಭಾರತ ಭಾಗದಲ್ಲಿ ಅತೀ ಹೆಚ್ಚಾಗಿ ಆಚರಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮತ್ತು ಬೆಂಗಳೂರು ಹೊರವಲಯ ಪ್ರದೇಶದಲ್ಲಿ ಉದ್ಯೋಗ ಮತ್ತು ಶಿಕ್ಷಣವನ್ನು ಅರಿಸಿ ಬಂದು ಇಲ್ಲೇ ನೆಲೆಸಿರುವವರು ಅವರ ಅಚಾರ-ವಿಚಾರ, ಸಂಸ್ಕೃತಿಯನ್ನು ಸಹ ಮುಂದುವರೆಸಿಕೊಂಡು ಆಚಾರಿಸುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಸ್ಥಳೀಯ ಜನರನ್ನು ಒಟ್ಟುಗೊಡಿಸಿಕೊಂಡು ಇಂತಹ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಿದಲ್ಲಿ ಇಂತಹ ಕಾರ್ಯಗಳಿಗೆ ಇನ್ನಷ್ಟು ಮೆರಗು ಸಿಗಲಿದೆ ಎಂದರು.
ಇದೇ ವೇಳೆ ಸರ್ಜಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು. ದುರ್ಗಾ ಪೂಜಾ ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಅಸೋಸಿಯೇಶನ್ ಅಧ್ಯಕ್ಷ ಸುಮಾಂತ್ ಬಾಸು, ಕಾರ್ಯದರ್ಶಿ ಅಭಿಷೇಕ್, ಸರ್ಜಾಪುರ ಸಿಟಿಜನ್ ಪೋರಂ ಅಧ್ಯಕ್ಷ ಎಸ್.ವಿ ಭರತ್ ಗೌಡ, ಸರ್ಜಾಪುರ ಗ್ರಾ. ಪಂ ಸದಸ್ಯ ಕಿಟಿಕಿ ಶ್ರೀನಿವಾಸ್, ಪಧಾಧಿಕಾರಿಗಳಾದ ರಾಜೀವ್, ರಾಜೇಶ್, ಅಯ್ಯನ್, ಪ್ರಸೂನ್, ಜ್ಯೋತಾ, ಸಮೀರ್, ಪೂಜಾ ಚಂದ್ರ ಮತ್ತಿತರರು ಹಾಜರಿದ್ದರು