ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.28:
ಕಾಂಗ್ರೆೆಸ್ನಲ್ಲಿ ಯಾವುದೇ ಗೊಂದಲಗಳಿಲ್ಲ. ನಾಯಕತ್ವದ ಬಗ್ಗೆೆ ಹೈಕಮಾಂಡ್ ಮತ್ತು ಸಿಎಲ್ಪಿಿ ಸಭೆಯಲ್ಲಿ ತೀರ್ಮಾನವಾಗಲಿದೆ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಾಪುರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿಿರುವ ಮುಖ್ಯಮಂತ್ರಿಿ ಬದಲಾವಣೆ ಚರ್ಚೆಗಳ ಕುರಿತು ಪ್ರತಿಕ್ರಿಿಯಿಸಿ.
ಸಿಎಂ ಮಾಡೋನು ನಾನಲ್ಲ, ಆಗೋನು ನಾನಲ್ಲ. ಶಾಸಕರಿಗೆ ಹಾಗೂ ಅಭಿಮಾನಿಗಳಿಗೆ ತಮ್ಮ ನಾಯಕರು ಮುಖ್ಯಮಂತ್ರಿಿ ಆಗಬೇಕೆಂಬ ಆಸೆ ಇರುವುದು ಸಹಜ.
ಅಭಿಮಾನಿಗಳು ಪ್ರೀೀತಿಯಿಂದ ತಮ್ಮ ನಾಯಕರ ಪರವಾಗಿ ಮಾತನಾಡುತ್ತಾಾರೆ ಅಷ್ಟೆೆ. ಆದರೆ, ಅಂತಿಮವಾಗಿ ಹೈಕಮಾಂಡ್ ಎಲ್ಲವನ್ನೂ ನಿರ್ಧರಿಸಲಿದೆ ಎಂದರು.
ಬಿಜೆಪಿ ವಿರುದ್ಧ ವಾಗ್ದಾಾಳಿ : ಈಗ ಎಲೆಕ್ಷನ್ ನಡೆದರೆ ಬಿಜೆಪಿ ಅಧಿಕಾರಕ್ಕೆೆ ಬರುತ್ತದೆ ಎಂಬ ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು, ಮೊದಲು ಅವರ ಪಕ್ಷದವರೇ ಅವರನ್ನು ಅಧ್ಯಕ್ಷ ಎಂದು ಒಪ್ಪಿಿಕೊಂಡಿದ್ದಾರೆಯೇ ಎಂಬುದು ಖಾತರಿಯಾಗಲಿ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಮೂವರು ಮುಖ್ಯಮಂತ್ರಿಿಗಳನ್ನು ಬದಲಿಸಿದ್ದನ್ನು ನೋಡಿದ್ದೇವೆ. ತಮ್ಮ ಪಕ್ಷದ ಒಳಗಿನ ಕಿತ್ತಾಾಟ ಬಿಡಿಸಿಕೊಳ್ಳಲಾಗದ ಇವರು, ಇನ್ನು ಅಧಿಕಾರಕ್ಕೆೆ ಬಂದರೆ ಆಡಳಿತ ನಡೆಸಲು ಸಾಧ್ಯವೇ.? ಎಂದು ವ್ಯಂಗ್ಯವಾಡಿದರು.
ಅಭಿವೃದ್ಧಿಿ ಮತ್ತು ಮಹದಾಯಿ ವಿವಾದ : ಉತ್ತರ ಕರ್ನಾಟಕದ ಅಭಿವೃದ್ಧಿಿ ಕುರಿತು ಮಾತನಾಡಿದ ಅವರು, ಕೃಷ್ಣಾಾ ಮೇಲ್ದಂಡೆ ಯೋಜನೆಯ ಸಂತ್ರಸ್ತರಿಗೆ ಎಕರೆಗೆ 40 ಲಕ್ಷ ರೂ. ಪರಿಹಾರ ಘೋಷಿಸಿದ್ದೇವೆ. ಜನವರಿ ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರೇ ಪರಿಹಾರ ವಿತರಿಸುವ ನಿರೀಕ್ಷೆ ಇದೆ. ಆದರೆ, ಮಹದಾಯಿ ಯೋಜನೆಯ ಪರಿಸರ ಅನುಮತಿ ನೀಡಲು ಕೇಂದ್ರ ಸರಕಾರ ವಿಳಂಬ ಮಾಡುತ್ತಿಿದೆ. ಸದನದಲ್ಲಿ ಚರ್ಚೆಗೆ ನಾವು ಸದಾ ಸಿದ್ಧರಿದ್ದೇವೆ, ಆದರೆ ವಿರೋಧ ಪಕ್ಷದವರು ಸರಿಯಾದ ವಿಷಯಗಳ ಮೇಲೆ ಆದ್ಯತೆ ನೀಡಿ ಪ್ರಶ್ನೆೆ ಮಾಡುತ್ತಿಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊಸ ವರ್ಷಕ್ಕೆೆ ಮಾರ್ಗಸೂಚಿ : ಹೊಸ ವರ್ಷದ ಆಚರಣೆಯ ಬಗ್ಗೆೆ ಮಾತನಾಡಿದ ಸಚಿವರು, ಸದ್ಯಕ್ಕೆೆ ರಾಜ್ಯ ಸರ್ಕಾರದಿಂದ ಯಾವುದೇ ಹೊಸ ಮಾರ್ಗಸೂಚಿ ಜಾರಿಯಾಗಿಲ್ಲ. ಆಯಾ ಜಿಲ್ಲೆಗಳ ಪರಿಸ್ಥಿಿತಿಗೆ ಅನುಗುಣವಾಗಿ ಸ್ಥಳೀಯ ಜಿಲ್ಲಾಡಳಿತವೇ ಅಗತ್ಯ ಕ್ರಮ ಮತ್ತು ಮಾಹಿತಿ ನೀಡಲಿದೆ ಎಂದು ತಿಳಿಸಿದರು.

