ಸುದ್ದಿಮೂಲ ವಾರ್ತೆ ಬೆಂಗಳೂರು, ಜ.29:
ರಾಜ್ಯದಲ್ಲಿ ವಿಕಲಚೇತನರಿಗೆ ಉದ್ಯೋೋಗಾವಕಾಶ ಕಲ್ಪಿಿಸಲು ಅಗತ್ಯ ಕ್ರಮ ವಹಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಾಭಿವೃದ್ಧಿಿ ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದರು.
ವಿಧಾನಸಭೆಯ ಕಲಾಪದ ಪ್ರಶ್ನೋೋತ್ತರ ವೇಳೆಯಲ್ಲಿ ಬೈಂದೂರು ವಿಧಾನಸಭಾ ಸದಸ್ಯರಾದ ಗುರುರಾಜ ಶೆಟ್ಟಿಿ ಅವರ ಪ್ರಶ್ನೆೆಗೆ ಉತ್ತರಿಸಿ ದ ಅವರು, ಕರ್ನಾಟಕ ಕೌಶಲ್ಯ ಅಭಿವೃದ್ಧಿಿ ನಿಗಮದ ವತಿಯಿಂದ 2026-27ನೇ ಸಾಲಿಗೆ ರಾಜ್ಯದ ವಿಕಲಚೇತನರಿಗೆ ತಾಂತ್ರಿಿಕ ಜ್ಞಾನದೊಂದಿಗೆ ಆರ್ಥಿಕತೆಯಲ್ಲಿ ಮುನ್ನಡೆಸುವ ಉದ್ದೇಶದಿಂದ ಮಾರುಕಟ್ಟೆೆ ಬೇಡಿಕೆಗೆ ಅನುಗುಣವಾದ ವೃತ್ತಿಿ ತರಬೇತಿಗಳ ಮೂಲಕ 1000 ಅಭ್ಯರ್ಥಿಗಳಿಗೆ 3 ಕೋಟಿ ರೂ. ವೆಚ್ಚದಲ್ಲಿ ಕೌಶಲ್ಯ ತರಬೇತಿ ಜೊತೆಗೆ ಟೂಲ್ ಕಿಟ್ ವಿತರಣೆ ಹಾಗೂ ಉದ್ಯೋೋಗಾವಕಾಶವನ್ನು ಕಲ್ಪಿಿಸಲು ಕ್ರಮ ವಹಿಸಲಾಗುತ್ತಿಿದೆ. ಕರ್ನಾಟಕ ಉದ್ಯಮಶೀಲತಾಭಿವೃಧ್ಧಿಿ ಕೇಂದ್ರ (ಸಿಡಾಕ್)ದಿಂದ ಉದ್ಯಮ ಶೀಲತಾಭಿವೃದ್ಧಿಿ ತರಬೇತಿಗಳನ್ನು ಹಮ್ಮಿಿಕೊಳ್ಳಲಾಗಿದೆ ಎಂದು ತಿಳಿಸಿದರು.
ವಿಕಲಚೇತನರಿಗೆ ಸರ್ಕಾರದ ಆದೇಶದನ್ವಯ ಈ ಹಿಂದಿನ ಸಾಲಿನಲ್ಲಿ ಶೇಕಡ 3 ರಷ್ಟು ಮತ್ತು ಪ್ರಸ್ತುತ ಶೇಕಡ 5 ರಷ್ಟು ಮೀಸಲಾತಿಯನ್ನು ತರಬೇತಿ ಕಾರ್ಯಕ್ರಮಗಳಡಿ ಒದಗಿಸಲಾಗಿದ್ದು, 540 ಅಭ್ಯರ್ಥಿಗಳು ವಿವಿಧ ಜಾಬ್ ರೋಲ್ ಗಳಡಿ ವಿವಿಧ ತರಬೇತಿದಾರರ ಸಂಸ್ಥೆೆಗಳ ಮುಖೇನ ತರಬೇತಿ ನೀಡಲಾಗಿದೆ. 83 ವಿಕಲಚೇತನ ಅಭ್ಯರ್ಥಿಗಳು ಉದ್ಯೋೋಗಾವಕಾಶ ಪಡೆಯಲು ಯಶಸ್ವಿಿಯಾಗಿರುತ್ತಾಾರೆ ಎಂದರು.
ವಿಕಲಚೇತನರಿಗೆ ಉದ್ಯೋಗಾವಕಾಶ ಕಲ್ಪಿಸಲು ಅಗತ್ಯ ಕ್ರಮ ಸಚಿವ ಶರಣಪ್ರಕಾಶ್ ಆರ್ ಪಾಟೀಲ್

