ಸುದ್ದಿಮೂಲ ವಾರ್ತೆ ಗಂಗಾವತಿ, ಡಿ.02:
ಸಿಎಂ ಬದಲಾವಣೆ ವಿಚಾರ ರಾಜ್ಯದ ಹಂತದಲ್ಲಿಲ್ಲ. ಎಐಸಿಸಿ ಮಟ್ಟದ ಹೈಕಮಾಂಡ್ ನಿರ್ಧಾರಕ್ಕೆೆ ನಾನು ಬದ್ಧ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಾಣ, ಜಿಲ್ಲಾಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಿಗಳು, ಡಿ.ಕೆ.ಶಿವಕುಮಾರ ಅವರು ಕೆಪಿಸಿಸಿ ಅಧ್ಯಕ್ಷರು ಅವರಿಬ್ಬರೂ ಉನ್ನತ ಸ್ಥಾಾನದಲ್ಲಿರುವವರು. ಅವರ ಪರಸ್ಪರ ಬ್ರೇೇಕ್ ಾಸ್ಟ್ ಬಗ್ಗೆೆ ಮಾತನಾಡಲು ಅವರಷ್ಟು ದೊಡ್ಡ ವ್ಯಕ್ತಿಿ ನಾನಲ್ಲ. ಸಿಎಂ ಬದಲಾವಣೆ ವಿಚಾರದಲ್ಲಿ ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಖುದ್ದು ಸಿಎಂ ಸಿದ್ಧರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರೇ ಜಂಟಿಯಾಗಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾಾರೆ ಎಂದರು.
ನಮ್ಮ ರಾಜ್ಯದವರಾದ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಿದ್ದಾಾರೆ. ಪಕ್ಷದ ಹೈಕಮಾಂಡ್ ಆದ ಸೋನೀಯಾ ಗಾಂಧಿ, ರಾಹುಲ್ ಗಾಂಧಿ, ಸುರ್ಜೇವಾಲ, ವೇಣುಗೋಪಾಲ ಅವರಿದ್ದಾಾರೆ. ಅವರ ಸೂಚನೆಯನ್ನು ಚಾಚು ತಪ್ಪದೇ ನಾವು ಪಾಲಿಸುತ್ತೇವೆ ಎಂದರು.
ಮುಖಭಂಗ : ಬೆಳಗಾವಿ ಅಧಿವೇಶದಲ್ಲಿ ಬಿಜೆಪಿ ಅವಿಶ್ವಾಾಸ ಗೊತ್ತುವಳಿ ಮಂಡನೆ ಬಗ್ಗೆೆ ಚಿಂತನೆ ನಡೆಸಿದೆ. ಈಗ ನಮ್ಮ ಸರ್ಕಾರದ ಮತ್ತು ಪಕ್ಷದ ಬಗ್ಗೆೆ ಮಾತನಾಡಲು ಯಾವ ವಿಷಯಗಳೇ ಇಲ್ಲ. ಮತ್ತು ಸರ್ಕಾರದ ಬಗ್ಗೆೆ ಹಾಗೂ ಪಕ್ಷದ ಬಗ್ಗೆೆ ಮಾತನಾಡುವ ನೈತಿಕತೆಯೂ ಇಲ್ಲ. ಬಿಜೆಪಿ-ಜೆಡಿಎಸ್ ಸೇರಿದರೆ 82 ಶಾಸಕರಿದ್ದಾಾರೆ. ಒಂದು ವೇಳೆ ಅವಿಶ್ವಾಾಸ ಗೊತ್ತುವಳಿ ಮಂಡನೆಗೆ ಮುಂದಾದರೆ ಅವರು ಮುಖಭಂಗಕ್ಕೀಡಾಗುವುದು ನಿಶ್ಚಿಿತ ಎಂದರು.
ತಿರುಗೇಟು : ತುಂಗಭದ್ರಾಾ ಜಲಾಶಯ ವ್ಯಾಾಪ್ತಿಿಯಲ್ಲಿ ಎರಡನೇ ಬೆಳೆಗೆ ನೀರು ಕೊಡಿ, ಇಲ್ಲವೇ ಸರ್ಕಾರದಿಂದ ರೈತರಿಗೆ ಪರಿಹಾರ ನೀಡಿ ಎಂದು ಬಿಜೆಪಿಯವರು ಹೋರಾಟ ನಡೆಸಿದ್ದಾಾರೆ. ಅಣೆಕಟ್ಟಿಿನ ಗೇಟ್ಗಳು ಶಿಥಿಲಾವಸ್ಥೆೆಯಲ್ಲಿರುವ ಕಾರಣ ಪ್ರಸಕ್ತ ಸಾಲಿನಲ್ಲಿ ಸುಗ್ಗಿಿ ಬೆಳೆಗೆ ನೀರು ಪೂರೈಕೆಯೊಳಗೆ ಜಲಾಶಯದಲ್ಲಿ 80 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿಟ್ಟುಕೊಂಡು ಉಳಿದ ನೀರನ್ನು ನದಿಗೆ ಹರಿ ಬಿಡುವುದಾಗಿ ಕೇಂದ್ರ ಸರ್ಕಾರವೇ ಆದೇಶ ನೀಡಿದೆ. ಇಲ್ಲಿ ಹೋರಾಟ ಮಾಡುವ ರಾಜ್ಯದ ಬಿಜೆಪಿಯವರು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಮುಂದೆ ನೃತ್ಯ ಮಾಡಲಿ, ಮೈಕೈ ನೋವಾದರೆ ಕನಿಷ್ಟ ಝಂಡುಬಾಮ್ ನೀಡುತ್ತಾಾರೆ ಎಂದು ತಂಗಡಗಿ ವ್ಯಂಗ್ಯವಾಡಿದರು.
ಐಸಿಸಿ ಸಭೆಯಲ್ಲಿಯೇ ಈ ಭಾಗದ ರೈತ ಮುಖಂಡರು ನಮಗೆ ಒಂದು ಬೆಳೆಗಿಂತ ಅಣೆಕಟ್ಟು ಮುಖ್ಯ ಮೊದಲು ನೂತನ ಗೇಟ್ ಅಳವಡಿಸಿ ಎಂದು ಸಲಹೆ ನೀಡಿದ್ದಾಾರೆ. ಆದರೆ ಬಿಜೆಪಿಯವರು ರೈತರ ಪರ ಮೊಸಳೆ ಕಣ್ಣೀರು ಸುರಿಸಿ ಅವರನ್ನು ದಾರಿ ತಪ್ಪಿಿಸಲು ರಸ್ತೆೆಯಲ್ಲಿ ನಿಂತು ಹೋರಾಟ ಮಾಡುತ್ತಾಾರೆ. ಇವರಿಗೆ ನಾಚಿಕೆ, ಮಾನ, ಮರ್ಯಾದೆ ಏನೂ ಇಲ್ಲ ಎಂದು ತಂಗಡಗಿ ತಿರುಗೇಟು ಕೊಟ್ಟರು.
ಸಿಎಂ ಬದಲಾವಣೆ ವಿಚಾರ : ಹೈಕಮಾಂಡ್ ನಿರ್ಧಾರಕ್ಕೆ ಬದ್ಧ – ಸಚಿವ ತಂಗಡಗಿ

