ರಾಯಚೂರು.ಜೂ.05:ಕಳೆದ 23 ವರ್ಷಗಳಿಂದ ನಿರಂತರವಾಗಿ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಮುನ್ನೂರು ಕಾಪು ಸಮಾಜ ಆಚರಣೆ ಮಾಡುತ್ತಾ ಬಂದಿರುವುದು ಶ್ಲಾಘನೀಯ ಈ ಹಬ್ಬವನ್ನು ಸರಕಾರದಿಂದ ಆಯೋಜನೆ ಮಾಡಲು ನಾನು ಹಾಗೂ ಲೋಕಸಭಾ ಸಂಸದ ಅಮರೇಶ ನಾಯಕ ಪ್ರಯತ್ನ ಮಾಡುತ್ತೇವೆ ಎಂದು ರಾಜ್ಯ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಎನ್.ಎಸ್ .ಬೋಸರಾಜ ಅವರು ಹೇಳಿದರು.
ಅವರಿಂದು ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಮುನ್ನೂರು ಕಾಪು ಸಮಾಜದಿಂದ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ನಿಮಿತ್ತ ಮೂರನೇ ದಿನವಾದ ಇಂದು ಎತ್ತುಗಳಿಂದ ಎರಡುವರೇ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆ ಗೆ ಉದ್ಘಾಟಿಸಿ ಮಾತನಾಡಿದರು.ಮುನ್ನೂರು ಕಾಪು ಸಮಾಜ ಕಳೆದ 23 ವರ್ಷಗಳಿಂದ ಈ ಹಬ್ಬವನ್ನು ಆಯೋಜಿಸುತ್ತಿರುವುದು ಸಂತೋಷದ ಸಂಗತಿ ಎಂದರು.ಮುಂಗಾರು ಬಂದಂತ ಸಂದರ್ಭದಲ್ಲಿ ರೈತರಿಗೆ ಸಂತೋಷ ಉಂಟು ಮಾಡುವ ಸಮಾಜ ಯಾವುದಾದರೂ ಇದ್ದರೆ ಅದು ಮುನ್ನೂರು ಕಾಪು ಸಮಾಜ ಮಾತ್ರರೈತ ಸಮುದಾಯಕ್ಕೆ ಉತ್ತಮವಾದ ಸಂತೋಷಕರ ಬದುಕನ್ನು ಕೊಡುವ ಕೆಲಸ ಮುನ್ನೂರು ಕಾಪು ಸಮಾಜ ಮಾಡುತ್ತಿದೆ ಸರಕಾರ ಪರವಾಗಿ ಅಭಿನಂದನೆ ಹಾಗೂ ಧನ್ಯವಾದಗಳು ತಿಳಿಸಿದರು. ಈ ರೀತಿ ಹಬ್ಬಗಳನ್ನು ಬೇರೆ ಯಾವ ಜಿಲ್ಲೆಗಳಲ್ಲಿ ಕೂಡ ಜರುಗುವುದಿಲ್ಲ. ಸರ್ಕಾರದಿಂದ ಒಂದು ರೂ.ಕೂಡ ಪಡೆಯದೆ ಕೇವಲ ಸಮಾಜದ ವತಿಯಿಂದ ಇಷ್ಟೊಂದು ಅದ್ದೂರಿಯಾಗಿ ಮಾಡುತ್ತಿರುವುದು ಸಾಮಾನ್ಯದ
ವಿಷಯವಲ್ಲ ಎಂದರು.ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಹಬ್ಬದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ ಅವರು ಮುನ್ನೂರು ಕಾಪು ಸಮಾಜವನ್ನು ಬಲಿಷ್ಠಗೊಳಿಸಿದರ ಜೊತೆಗೆ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ರಾಜ್ಯವೇ ಗುರುತಿಸುವಂತೆ ಅತ್ಯಂತ ವೈಭವೀಕರಣದಿಂದ ಆಚರಣೆ ಮಾಡುತ್ತಿದ್ದಾರೆ ಎಂದರು. ಮುನ್ನೂರು ಕಾಪು ಸಮಾಜ
ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಮುನ್ನೂರು ಕಾಪು ಸಮಾಜದ ಬಲಿಷ್ಠವಾಗಿದೆ. ಮುನ್ನೂರು ಕಾಪು ಆಯೋಜಿಸುವ ಮುಂಗಾರು ಸಾಂಸ್ಕೃತಿಕ ಹಬ್ಬ ರಾಯಚೂರು ಜಿಲ್ಲೆಗೆ ಉತ್ತಮ ನಿರ್ದೇಶನ,
ಜಾತಿ ಭೇದ ಭಾವವಿಲ್ಲದೆ ಪಕ್ಷಪಾತವಾಗಿ ಎಲ್ಲ ಸಮುದಾಯದ ಅವರನ್ನು ಒಗ್ಗೂಡಿಸುವುದರ ಮೂಲಕ ರಾಯಚೂರು ಜಿಲ್ಲೆ ಸಮಗ್ರ ಅಭಿವೃದ್ಧಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಲೋಕಸಭಾ ಸಂಸದ ಅಮರೇಶ ನಾಯಕ ಮಾತನಾಡಿ ದೇಶ ಹಾಗೂ ರಾಜ್ಯಕ್ಕೆ ಚಿನ್ನ ಮತ್ತು ಅನ್ನ ಕೊಡುವುದರಲ್ಲಿ ರಾಯಚೂರು ಜಿಲ್ಲೆ ಮುಂಚಣಿ ಕೃಷಿ ಪ್ರಧಾನವಾಗಿ ಮುಂಗಾರು ಸಾಂಸ್ಕೃತಿಕ ಹಬ್ಬ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಬಸವಣ್ಣ ಶಕ್ತಿಯ ಸಂಕೇತ.
ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಉದ್ಘಾಟನೆ ವೇಳೆ ನಾಂದಿಯ ಸಂಗೋಲ್ ಪ್ರತಿಷ್ಠಾಪನೆ ಮಾಡಿದರು.
ಹಬ್ಬದ ರೂವಾರಿ ಮಾಜಿ ಶಾಸಕ ಎ ಪಾಪಾರೆಡ್ಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಸಿದ್ದಲಿಂಗ ಮಹಾಸ್ವಾಮಿಗಳು ಚಿಕ್ಕಸೂಗೂರು ಚೌಕಿ ಮಠ, ಹಬ್ಬದ ರೂವಾರಿ ಮಾಜಿ ಶಾಸಕ ಎ ಪಾಪಾರೆಡ್ಡಿ, ಮುನ್ನೂರು ಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ,ರೈಸ್ ಮಿಲ್ ಅಸೋಸಿಯಶನ್ ರಾಜ್ಯಾಧ್ಯಕ್ಷರಾದ ಪುರುಷೋತ್ತಮ, ಪ್ರಧಾನಿ ಕಾರ್ಯದರ್ಶಿ
ತಿಪ್ಪಣ್ಣ, ಕೃಷ್ಣಮೂರ್ತಿ, ಎಂ ವೀರಣ್ಣ, ಜಯವಂತರಾವ್ ಪತಂಗಿ,ಗದರ್ ಬೆಟ್ಟಪ್ಪ, ಉದಯಕುಮಾರ, ರಾಜುಕುಮಾರ,
ವೆಂಕಟೇಶ ಸಿಂಗ್, ಲಕ್ಷ್ಮಿರೆಡ್ಡಿ ಮುನ್ನೂರು ಕಾಪು ಸಮಾಜದ ಮುಖಂಡರು ಪಾಲ್ಗೊಂಡಿದ್ದರು.