ಸುದ್ದಿಮೂಲ ವಾರ್ತೆ ಕೊಪ್ಪಳ , ಜ.06:
ಕೊಪ್ಪಳದ ಗವಿ ಮಠದ ಜಾತ್ರೆೆಯಲ್ಲಿ ಇಂದು ಮಿರ್ಚಿ ಘಮಲು ಕೊಪ್ಫಳದ ಸಮಾನ ಮನಸ್ಕರ ಗೆಳೆಯರ ಬಳಗ ಜಾತ್ರೆೆಗೆ ಬಂದ ಭಕ್ತರಿಗೆ ಮಿರ್ಚಿ ದಾಸೋಹ ಸೇವೆ ಒದಗಿಸಿದ್ದಾಾರೆ.
ಸುಮಾರು 6 ರಿಂದ 8 ಲಕ್ಷ ಖರ್ಚು ಮಾಡಿ ಜಾತ್ರೆೆಗೆ ಬಂದ ಭಕ್ತರಿಗೆ ಮಿರ್ಚಿಯನ್ನ ಉಣ ಬಡಿಸುತ್ತಿಿದ್ದಾಾರೆ,ಬಿಸಿ ಬಿಸಿ ಮಿರ್ಚಿ ಹಾಕೋದನ್ನ ನೋಡೋದಕ್ಕೆೆ ಎರಡು ಕಣ್ಣು ಸಾಲದಾಗಿದೆ.
ಇಂದು ಬೆಳಗ್ಗೆೆಯಿಂದ ಸುಮಾರು 400 ರಿಂದ 500 ಬಾಣಸಿಗರು ಮಿರ್ಚಿ ಹಾಕೋ ಕೆಲಸ ಮಾಡತೀದಾರೆ.ಯಾವುದೇ ಪ್ರತಿಲಾಕ್ಷೆಯಿಲ್ಲದೆ ಅಜ್ಜನ ಸೇವೆಗೆ 25 ಕ್ಕೂ ಹೆಚ್ಚು ಗ್ರಾಾಮದಿಂದ ಬಂದು ಮಿರ್ಚಿ ಹಾಕೋದರ ಮೂಲಕ ಅಜ್ಜನ ಸೇವೆ ಮಾಡತಿದ್ದಾಾರೆ. ಇನ್ನು ಈ ಬಾರಿ ಮಿರ್ಚಿಗೆ ಸುಮಾರು 25 ಕ್ವಿಿಂಟಾಲ್ ಹಸೆಹಿಟ್ಟು,22 ಕ್ವಿಿಂಟಾಲ್ ಹಸಿ ಮೆಣಸಿನಕಾಯಿ,25 ಕೆಜಿ ಅಜವಾನ,25 ಕೆಜಿ ಸೋಡಾಪುಡಿ,75 ಕೆಜಿ ಉಪ್ಪುು,60 ಸಿಲಿಂಡರ್,12 ಬ್ಯಾಾರೆಲ್ ಒಳ್ಳೆೆಎಣ್ಣಿಿ,ಬಳಕೆ ಮಾಡಿಕೊಂಡು ಮಿರ್ಚಿ ತಯಾರಿಕೆ ಮಾಡುತ್ತಿಿದ್ದಾಾರೆ.ಜಾತ್ರೆೆಗೆ ಬಂದ ಭಕ್ತರಿಗೆ ಬೆಳಗ್ಗೆೆಯಿಂದ ಮಿರ್ಚಿಯನ್ನು ಉಣಬಡಿಸುತ್ತಿಿದ್ದಾಾರೆ.
ಕಳೆದ 11 ವರ್ಷಗಳಿಂದ ಸಮಾನ ಮನಸ್ಕರ ಬಳಗದ ತಂಡದಿಂದ ಮಿರ್ಚಿ ಸೇವೆಯನ್ನ ಮಾಡಲಾಗ್ತಿಿದೆ.
ಕೊಪ್ಪಳದ ಗವಿ ಸಿದ್ದಪ್ಪಜ್ಜನ ಜಾತ್ರೆೆಯ ದಾಸಸೋಹದ ತುಂಬೆಲ್ಲ ಮಿರ್ಚಿ ಘಮಲು ಜೋರಾಗಿದೆ.ಕಳೆದ ಕೆಲ ವರ್ಷಗಳ ಹಿಂದೆ ಅಜ್ಜನ ಜಾತ್ರೆೆ ಅಂದರೆ ರೊಟ್ಟಿಿ ಜಾತ್ರೆೆ ಅಂತಿದ್ರು,ಇದೀಗ ಅಜ್ಜನ ಜಾತ್ರೆೆಯನ್ನ ಮಿರ್ಚಿ ಜಾತ್ರೆೆ ಅಂತಾಲೂ ಕರೆಯುವಂತಾಗಿದೆ,ದಾಸೋಹದ ಮಿರ್ಚಿ ಅಷ್ಟೊೊಂದು ಹೆಸರುವಾಸಿಯಾಗಿದೆ.
ಇದೇ ವೇಳೆ ಇಂದು ಮುಂಜಾನೆ ವೇಳೆ ಮಿರ್ಚಿ ತಯಾರಿಸುವ ಸ್ಥಳಕ್ಕೆೆ ಆಗಮಿಸಿದ ಗವಿಮಠದ ಈಗಿನ ಸ್ವಾಾಮೀಜಿಗಳು ಮಿರ್ಚಿ ಹಾಕುವ ಮೂಲಕ ಮಿರ್ಚಿ ಮಾಡುವವರಿಗೆ ಹುರಿದುಂಬಿಸಿದರು.
ಜಾತ್ರೆಯ ದಾಸೋಹದಲ್ಲಿ ಮಿರ್ಚಿ ಘಮ ಘಮ

