ತಪ್ಪಿದ ಭಾರಿ ದುರಂತ:ಬಿ.ಎಸ್.ವೈ ಪಾರು
ಜೇವರ್ಗಿ:ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬಿಎಸ್ ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆಯಲ್ಲಿ ಘಟಿಸಬಹುದಾದ ಭಾರಿ ದುರಂತವನ್ನು ಪೈಲೆಟ್ ಚಾಣಕ್ಯತನದಿಂದ ತಪ್ಪಿಸಿ ಬಿ.ಎಸ್.ವೈ ಅವರನ್ನು ಪ್ರಾಣಾಪಯದಿಂದ ಪಾರು ಮಾಡಿರುವ ಘಟನೆ ಇಂದು ನಡೆದಿದೆ.
ಜೇವರ್ಗಿ ಪಟ್ಟಣದ ಹೊರವಲಯದಲ್ಲಿ ನಿರ್ಮಿಸಲಾಗಿರೂ ಹೆಲಿಪ್ಯಾಡನಲ್ಲಿ ಹೆಲಿಕ್ಯಾಪ್ಟರ್ ಲ್ಯಾಂಡಿಂಗ್ ವೇಳೆ ಅಪಾರ ಪ್ರಮಾಣದ ಪ್ಯಾಸ್ಟೀಕ ಚಿಲಗಳು ಹಾರಿಬಂದು ಹೇಲಿಕ್ಯಾಪ್ಟರ್ ಬಳಿ ಸುಳಿದಾಡುತಿರುವುದನ್ನು ಗಮನಿಸಿದ ಪೈಲೆಟ್ ಆಗಬಹುದಾದ ಘಟನೆಯನ್ನು ತಪ್ಪಿಸಿದ್ದಾರೆ.
ಹೆಲಿಪ್ಯಾಡ್ ಸುತ್ತ ಇರುವ ಕೃಷಿ ಜಮೀನಿನಲ್ಲಿ ಹಾಕಲಾಗಿರುವ ಪ್ಯಾಸ್ಟೀಕ ಚಿಲಗಳು ಹೇಲಿಕ್ಯಾಪ್ಟರಿನ ಭಾರಿ ಗಾಳಿಗೆ ಹಾರಿಬಂದ ಪ್ರಯುಕ್ತ ತಕ್ಷಣ ಎಚ್ಚೆತ್ತು ಹೇಲಿಕ್ಯಾಪ್ಟರನ್ನು ಬೇರೆಡೆ ತೆಗೆದುಕೊಂಡು ಹೋಗಿ ಆಕಾಶದಲ್ಲಿಯೇ ನಾಲ್ಕೈದು ಸುತ್ತು ಹಾರಾಟ ನಡೆಸಿದ ನಂತರ ಸ್ಥಳದಲ್ಲಿದ್ದ ಪೋಲಿಸರಿಂದ ಪ್ಲಾಸ್ಟೀಕ ಚಿಲಗಳು ತೆರವುಗೊಳಿಸಿದ ನಂತರ ಹೇಲಿಕ್ಯಾಪ್ಟರ್ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು.
ಹೇಲಿಕ್ಯಾಪ್ಟರ್ ಮೇಲೆ ಪ್ಲಾಸ್ಟೀಕ ಚಿಲಗಳು ತುರಿಬಂದಿದ್ದರಿಂದ ಅಧಿಕಾರಿಗಳು ಮತ್ತು ಪೊಲೀಸರು ಕೆಲ ಕಾಲ ಕಕ್ಕಾಬಿಕ್ಕಿಯಾದ ಘಟನೆ ಇಂದು ಜೇವರ್ಗಿ ಪಟ್ಟಣದಲ್ಲಿ ಜರುಗಿತ್ತು.ಇದಕ್ಕೆ ಭದ್ರತಾಲೋಪವಾಗಿದೆ ಎಂದು ಕೆಲವರು ಗೊಣಗುತ್ತಿದ್ದರು.