ಸುದ್ದಿಮೂಲ ವಾರ್ತೆ ಮಸ್ಕಿ, ಜ.14:
ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಗಟ್ಟಿಿಗೊಳಿಸುವ ದಿಸೆಯಲ್ಲಿ ತಾಲೂಕಿನ ಎಲ್ಲ ಸಂಘ ಸಂಸ್ಥೆೆಗಳು, ಕಲಾವಿದರು, ಕ್ರೀೆಡಾಪಟುಗಳು ಹಾಗೂ ಸಾಧಕರನ್ನೊೊಳಗೊಂಡು ಉತ್ಸವಕ್ಕೆೆ ಸಾರ್ವಜನಿಕರು ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಿಗೊಳಿಸಬೇಕು ಎಂದು ಮಸ್ಕಿಿ ಶಾಸಕ ಆರ್.ಬಸನಗೌಡ ತುರುವಿಹಾಳ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ತಾಲೂಕ ಅಧಿಕಾರಿಗಳು, ಸಂಘ ಸಂಸ್ಥೆೆಗಳು, ಬುದ್ಧಿಿಜೀವಿಗಳು, ಹೋರಾಟಗಾರರ ಸಮ್ಮುಖದಲ್ಲಿ ನಡೆದ ರಾಯಚೂರು ಉತ್ಸವ ಸಭೆಯಲ್ಲಿ ಅವರು ಮಾತನಾಡಿದರು.ಉತ್ಸವದಲ್ಲಿ ಕೃಷಿ ಮೇಳ, ಮತ್ಸ್ಯಮೇಳ, ಚಿತ್ರಕಲಾ ಪ್ರದರ್ಶನ, ಸ್ಥಳೀಯ ಕಲೆಗಳ ಪ್ರದರ್ಶನ, ಗೋಷ್ಠಿಿಗಳು, ಸಂವಾದಗಳು ಇರಲಿವೆ. ಕಲ್ಯಾಾಣ ಕರ್ನಾಟಕದ ಮಟ್ಟದಲ್ಲಿ ಕ್ರೀಡೆಗಳನ್ನೂ ನಡೆಸಲಾಗುವುದು.
ಸ್ಥಳೀಯ ಕಲಾವಿದರು ಹಾಗೂ ರಾಜ್ಯ ಮಟ್ಟದ ಕಲಾವಿದರಿಗೂ ಅವಕಾಶ ಇರಲಿದೆ ಗ್ರಾಾಮೀಣ ಬದುಕನ್ನು ಒಳಗೊಂಡಿದೆ ಪ್ರತಿಯೊಂದು ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯಲ್ಲಿ ಹಳ್ಳಿಿಗಳ ನಾಗರಿಕರು ಬಂದು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಿಗೊಳಿಸಬೇಕೆಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸುರೇಶ್ ಹರಸೂರು,ಗ್ಯಾಾರೆಂಟಿ ಅನುಷ್ಠಾಾನ ಸಮಿತಿಯ ತಾಲೂಕ ಅಧ್ಯಕ್ಷ ಮೈಬೂಬ್ ಸಾಬ್ ಮುದ್ದಾಪುರ್, ತಾಲೂಕು ಪಂಚಾಯತಿ ಇ ಓ ಅಮರೇಶ ಯಾದವ್, ತಹಸೀಲ್ದಾಾರ್ ಮಂಜುನಾಥ್ ಭೋಗಾವತಿ, ಸಿಪಿಐ ಪ್ರಕಾಶ್ ಎಲ್ ಮಾಳಗಿ ಹಾಗೂ ತಾಲೂಕ ಅಧಿಕಾರಿಗಳು ಮತ್ತು ಸಂಘ ಸಂಸ್ಥೆೆಯ ಮುಖಂಡರು ಉಪಸ್ಥಿಿತರಿದ್ದರು.
ರಾಯಚೂರು ಉತ್ಸವ : ಸಾರ್ವಜನಿಕರು ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಲು ಶಾಸಕ ಸಲಹೆ

