ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.21:
ಸೋಲು-ಗೆಲುವು ಮುಖ್ಯವಲ್ಲ, ಅವುಗಳನ್ನು ಸಮನಾಗಿ ಸ್ವೀಕರಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮವಾಗಿ ಸಾಧಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರದ ಚಂದ್ರಶೇಖರ ಪಾಟೀಲ್ ಕ್ರೀೆಡಾಂಗಣದಲ್ಲಿ ಕಂದಾಯ ಇಲಾಖೆ ನೌಕರರ ವಾರ್ಷಿಕ ಕ್ರೀೆಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೌಕರರು ಹಾಗೂ ಅಧಿಕಾರಿಗಳು ದಿನನಿತ್ಯ ಅನೇಕ ಒತ್ತಡಗಳ ನಡುವೆ ಕೆಲಸ ನಿರ್ವಹಿಸುತ್ತಿಿದ್ದಾರೆ. ಮನಸ್ಸಿಿಗೆ ಶಾಂತಿ ದೊರಕಲು ಸಂಗೀತ ಮತ್ತು ಕ್ರೀೆಡೆ ಅತ್ಯಂತ ಸಹಕಾರಿ. ಕ್ರೀೆಡಾಕೂಟದಲ್ಲಿ ಉತ್ಸಾಾಹದಿಂದ ಭಾಗವಹಿಸಿರುವ ಎಲ್ಲರಿಗೂ ಅಭಿನಂದನೆಗಳು. ಸರ್ಕಾರದ ಕೆಲಸ ದೇವರ ಕೆಲಸದಂತಿದ್ದು, ಸಮಾಜದಲ್ಲಿ ದೃಢಸಂಕಲ್ಪದಿಂದ ನಾವೆಲ್ಲರೂ ಕರ್ತವ್ಯ ನಿರ್ವಹಿಸಬೇಕು ಎಂದರು.
ಕಲಬುರಗಿ ಪ್ರಾಾದೇಶಿಕ ಆಯುಕ್ತರಾದ ಜಹೀರಾ ನಸೀಂ ಅವರು ಕ್ರೀೆಡಾಕೂಟಕ್ಕೆೆ ಚಾಲನೆ ನೀಡಿ, ಸೋಲು-ಗೆಲುವಿಗಿಂತ ಸಹಭಾಗಿತ್ವ ಮತ್ತು ಸೌಹಾರ್ದತೆಯೇ ಕ್ರೀೆಡಾಕೂಟದ ಉದ್ದೇಶ ಎಂದು ಹೇಳಿದರು.
ಜಿಲ್ಲಾಧಿಕಾರಿ ಬಿ. ೌಜಿಯಾ ತರನ್ನಮ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಕ್ರೀೆಡಾ ತಂಡಗಳಿಂದ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿಸಿ ಪ್ರತಿಜ್ಞೆ ಬೋಧಿಸಿದರು.
ರನ್ನಿಿಂಗ್, ಶಾಟ್ಪುಟ್, ಲಾಂಗ್ಜಂಪ್, ಗುಂಡು ಎಸೆತ, ಡಿಸ್ಕಸ್ ಥ್ರೋೋ, ಚೆಸ್, ಕೇರಂ, ಬ್ಯಾಾಡ್ಮಿಿಂಟನ್, ಥ್ರೋೋಬಾಲ್, ಕ್ರಿಿಕೆಟ್ ಹಾಗೂ ವಾಲಿಬಾಲ್ ಸ್ಪರ್ಧೆಗಳಲ್ಲಿ ನೌಕರರು ಉತ್ಸಾಾಹದಿಂದ ಭಾಗವಹಿಸಿದರು.
ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಕಲಬುರಗಿ ಸಹಾಯಕ ಆಯುಕ್ತೆೆ ಸಾಹಿತ್ಯ ಆಲದಕಟ್ಟಿಿ, ಸೇಡಂ ಸಹಾಯಕ ಆಯುಕ್ತ ಪ್ರಭು ರೆಡ್ಡಿಿ, ಯುವಜನ ಸೇವಾ ಮತ್ತು ಕ್ರೀೆಡಾ ಇಲಾಖೆಯ ಸಹಾಯಕ ನಿರ್ದೇಶಕ ಸಂಗಮೇಶ್ವರ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು-ನೌಕರರು ಭಾಗವಹಿಸಿದ್ದರು.
ಕಂದಾಯ ಇಲಾಖೆ ನೌಕರರ ವಾರ್ಷಿಕ ಕ್ರೀಡಾಕೂಟ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸಿ : ಶಾಸಕ ಅಲ್ಲಮಪ್ರಭು ಪಾಟೀಲ

