ಸುದ್ದಿಮೂಲ ವಾರ್ತೆ ಕವಿತಾಳ, ಡಿ.04:
ಸಮೀಪದ ಪಾಮನಕಲ್ಲೂರು, ಅಮೀನಗಡ ಮತ್ತು ವಟಗಲ್ ಗ್ರಾಾಮ ಪಂಚಾಯತಿ ವ್ಯಾಾಪ್ತಿಿಯ ವಿವಿಧ ಹಳ್ಳಿಿಗಳಿಗೆ ಮಂಗಳವಾರ ಶಾಸಕ ರ್ಆ ಬಸನಗೌಡ ತುರ್ವಿಹಾಳ ಅವರು ಭೇಟಿ ನೀಡಿ ಸ್ಥಳೀಯರಿಂದ ಸಮಸ್ಯೆೆಗಳನ್ನು ಆಲಿಸಿದರು.
ಪ್ರತಿ ಗ್ರಾಾಮಗಳಲ್ಲಿ ಕೈಗೊಂಡ ಅಭಿವೃದ್ದಿ ಕಾಮಗಾರಿಗಳ ಬಗ್ಗೆೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು ಕಾಮಗಾರಿಯ ಪ್ರಗತಿ ಕುರಿತು ಪರಿಶೀಲಿಸಿದರು. ಬೆಂಚಮರಡಿ, ಹಿಲಾಲಾಪುರು, ತುಪ್ಪದೂರು, ಹರ್ವಾಪುರು, ಚಿಲ್ಕರಾಗಿ, ಗುಡಿಹಾಳ, ಆನಂದಗಲ್, ಇರಕಲ್, ಕೋಟೆಕಲ್, ವಟಗಲ್, ಅಮೀನಗಡ, ಕಾಚಾಪುರು, ನೆಲಕೋಳ, ಯಾತಗಲ ಗ್ರಾಾಮಗಳಿಗೆ ಭೇಟಿ ನೀಡಿದರು.
ಪಾಮನಕಲ್ಲೂರು ಗ್ರಾಾಮದಲ್ಲಿ ಚರಂಡಿ ಇಲ್ಲದೆ ರಸ್ತೆೆಯಲ್ಲಿ ನೀರು ಹರಿದು ಗಲೀಜು ಉಂಟಾಗುತ್ತಿಿದೆ ಚರಂಡಿ ನಿರ್ಮಾಣ ಮಾಡುವಂತೆ ಶಾಸಕರು ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿ ಮಲ್ಲಯ್ಯ ಅವರಿಗೆ ಸೂಚಿಸಿದರು. ಶಾಸಕರ ಉನ್ನತಿಕರಿಸಿದ ಸರ್ಕಾರಿ ಶಾಲೆಗೆ ಕಾಂಪೌಂಡ್, ಆಟದ ಮೈದಾನ, ಶುದ್ಧ ಕೊಡುವ ನೀರಿನ ಘಟಕದ ಕೊರತೆ ಇದೆ ಎಂದು ಗ್ರಾಾಮಸ್ಥರು ಆರೋಪಿಸಿದರು
ತೊಗರಿ ಬೆಳೆ ಹಾನಿ ಪರಿಹಾರ ನೀಡುವಂತೆ ರೈತರು ಶಾಸಕರಲ್ಲಿ ಮನವಿ ಮಾಡಿದರು.
ನಿರ್ಮಾಣ ಹಂತದಲ್ಲಿರುವ ನಾಡ ಕಾರ್ಯಾಲಯ ಕಾಮಗಾರಿ ಸ್ಥಳಕ್ಕೆೆ ಭೇಟಿ ನೀಡಿ ತ್ವರಿತ ಗತಿಯಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಮೀನಗಡ ಗ್ರಾಾಮದಲ್ಲಿ ಖಾತ್ರಿಿ ಯೋಜನೆ ಎನ್ ಎಂ ಆರ್ ಜಿರೋ ಮಾಡಿದ್ದಾರೆ ಉದ್ಯೋೋಗ ಖಾತ್ರಿಿ ಕೆಲಸ ನೀಡುತ್ತಿಿಲ್ಲ ಎಂದು ದೂರಿದ ಕೂಲಿ ಕಾರ್ಮಿಕರು ಪಡಿತರ ಚೀಟಿ ಬಂದ್ ಮಾಡಲಾಗಿದೆ ಎಂದು ಆರೋಪಿಸಿದರು, ಹತ್ತಿಿ ಬೆಳೆ ನಷ್ಟ ಪರಿಹಾರ, 5ಎ ಕಾಲುವೆ ನಿರ್ಮಾಣದ ಬಗ್ಗೆೆ ಸ್ಥಳೀಯರು ಬೇಡಿಕೆ ಸಲ್ಲಿಸಿದರು.
ಕಾಚಾಪುರು ಗ್ರಾಾಮದಲ್ಲಿ ಆಂಜನೇಯ ದೇವಸ್ಥಾಾನ ಕಾಮಗಾರಿ ಮಾಡದೇನೆ ಬೋಗಸ್ ಬಿಲ್ ಪಾವತಿ ಮಾಡಿದ್ದಾರೆ, ರುದ್ರ ಭೂಮಿ ಇಲ್ಲ, ಕೆರೆಗೆ ನೀರು ತುಂಬಿಸಬೇಕು, ರೈತರು ಭೂಮಿ ಅರಣ್ಯ ಇಲಾಖೆಯವರು ಒತ್ತುವರಿ ಮಾಡಿದ್ದಾರೆ ಎಂದು ರೈತರು ಆರೋಪಿಸಿದರು. ಯಾತಗಲ್ ಗ್ರಾಾಮದಲ್ಲಿ ಗ್ರಾಾಮಕ್ಕೆೆ ಸಮಯಕ್ಕೆೆ ಸರಿಯಾಗಿ ಬಸ್ ಬರುತ್ತಿಿಲ್ಲವೆಂದು ವಿದ್ಯಾಾರ್ಥಿಗಳು ಶಾಸಕರಿಗೆ ಮನವಿ ಮಾಡಿದರು.
ಭರವಸೆ ನೀಡಿದಂತೆ ಈಗಾಗಲೇ 5ಎ ಕಾಲುವೆಯ ಡಿ ಪಿ ಆರ್ತಯಾರಿಯಾಗಿದೆ ಆದಷ್ಟು ಬೇಗನೆ ಕಾಮಗಾರಿ ಪ್ರಾಾರಂಭ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾಾರ ಮಂಜುನಾಥ ಭೋಗಾವತಿ, ತಾಲೂಕು ಪಂಚಾಯತಿ ಇ ಓ ಅಮರೇಶ ಯಾದವ, ಮಸ್ಕಿಿ ತಾಲೂಕು ಗ್ಯಾಾರಂಟಿ ಅಧ್ಯಕ್ಷ ಮೈಬುಬ್ ಸಾಬ್, ಮುಖಂಡರಾದ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿಿ, ಬಲವಂತರಾಯ ಗೌಡ ವಟಗಲ್, ಬಸವರಾಜ ಸಾಹುಕಾರ ಪಾಮನಕಲ್ಲೂರು, ಮೃತ್ಯುಂಜಯ ಸ್ವಾಾಮಿ, ಸದಸ್ಯ ದುರುಗಪ್ಪ, ಬಸವರಾಜಪ್ಪ ವಟಗಲ್, ಗ್ರಾಾಮ ಪಂಚಾಯತಿ ಅಭಿವೃದ್ಧಿಿ ಅಧಿಕಾರಿಗಳಾದ ತಿಮ್ಮನಗೌಡ, ತಿಮ್ಮಪ್ಪ ನಾಯಕ, ಉಪ ತಹಸೀಲ್ದಾಾರ ದೇವರಾಜ, ಜೆಸ್ಕಾಾಂ ಅಧಿಕಾರಿ ಬನ್ನಪ್ಪ, ಗ್ರಾಾಮ ಲೆಕ್ಕಾಾಧಿಕಾರಿಗಳಾದ ನಿಂಗಪ್ಪ, ರವಿಕುಮಾರ, ಕರಿಯಪ್ಪ ಬೆಂಗಳೂರು, ಕರಿಯಪ್ಪ ಪೂಜಾರಿ, ಯಮನೂರು ನಾಯಕ ಯಾತಗಲ್, ಮಲ್ಲಪ್ಪ ನೆಲಕೋಳ, ಈರಣ್ಣ ನಾಯಕ ಕಾಚಾಪುರು ಇನ್ನಿಿತರರು ಇದ್ದರು.
ಹಳ್ಳಿ ಸಂಚಾರ ನಡೆಸಿದ ಶಾಸಕ ಬಸನಗೌಡ

