ಸುದ್ದಿಮೂಲವಾರ್ತೆ
ಕಾರಟಗಿ,ಏ.೩- ಕನಕಗಿರಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನನಗೇ ನೀಡಲು ಈಗಾಗಲೇ ಪಕ್ಷದ ರಾಜ್ಯ ಮತ್ತು ಕೇಂದ್ರ ಮಟ್ಟದ ವರಿಷ್ಠರು ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಶಾಸಕ ಬಸವರಾಜ ದಢೇಸೂಗೂರು ತಿಳಿಸಿದ್ದಾರೆ.
ತಾಲೂಕಿನ ಲಕ್ಮೀ ಕ್ಯಾಂಪ್ ಸೋಮವಾರ ನಡೆಸಿದ ಪಕ್ಷದ ಸಭೆಯಲ್ಲಿ ಭಾಗವಹಿಸಿ ಶಾಸಕರು ಮಾತನಾಡಿದರು.
ರಾಷ್ಟ್ರ ಹಾಗೂ ರಾಜ್ಯ ನಾಯಕರು ನನ್ನ ಮೇಲೆ ಬಹಳಷ್ಟು ಒಲವು ತೋರಿ ಪ್ರೀತಿ ವಿಶ್ವಾಸದ ಮೂಲಕ ಬಿಜೆಪಿ ಬೀಪಾರಂ ಕೂಡ ನನಗೆ ನೀಡುವ ಖಚಿತ ಭರವಸೆ ನೀಡಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಬೇಡ. ಕ್ಷೇತ್ರದಲ್ಲಿ ಹರಿದಾಡುತ್ತಿರುವ ಗಾಳಿ ಸುದ್ದಿಗೆ ಕಾರ್ಯಕರ್ತರು ಕಿವಿಗೊಡಬಾರದು. ಕ್ಷೇತ್ರದ ಮತದಾರ ದೇವರು ಕೂಡ ನನಗೆ ಆಶೀರ್ವಾದ ಮಾಡುತ್ತಾರೆ. ಇದರಲ್ಲಿ ಎರಡು ಮಾತಿಲ್ಲ. ವಿರೋಧಿಗಳ ಹೇಳಿಕೆಗೆ ನಾನು ಈಗ ಉತ್ತರಿಸಲಾರೆ. ಟಿಕೇಟ್ ಜತೆಗೆ ಬೀಪಾರಂ ತಂದು ನಂತರ ಉತ್ತರಿಸುವೆ ಎಂದರು.
ಈಗಾಲೇ ಜರುಗಿದ ಜಿಲ್ಲಾ ಕೋರ್ ಕಮೀಟಿ ರಾಜ್ಯ ಕೋರ್ ಕಮೀಟಿ ಸಭೆಗಳಲ್ಲಿ ಮುಖಂಡರು ನನಗೆ ಟಿಕೇಟ್ ನೀಡಲು ನಿರ್ಧರಿಸಿದ್ದಾರೆ. ರಾಷ್ಠç ಹಾಗೂ ರಾಜ್ಯ ನಾಯಕರು ನನಗೆ ಆಶಿರ್ವದಿಸಿದ್ದಾರೆ ಟಿಕೇಟ್ ನನ್ನದೆ ಗೆಲುವು ಕೂಡ ನನ್ನದೆ. ಕ್ಷೇತ್ರದಲ್ಲೂ ಕೂಡ ನಾನು ಅಬಿವೃದ್ಧಿ ಕಾರ್ಯಗಳನ್ನು ಮಾಡಿದ ತೃಪ್ತಿ ನನಗಿದೆ.
ಕ್ಷೇತ್ರದಾದ್ಯಂತ ನಿರಂತರವಾಗಿ ಮತದಾರರ ಸಂಪರ್ಕದಲ್ಲಿದ್ದೇನೆ. ಪಕ್ಷದಲ್ಲಿ ಯಾವೊಬ್ಬ ಕಾರ್ಯಕರ್ತರು, ಮುಖಂಡರು ಮುನಿಸಿಕೊಂಡಿಲ್ಲ. ಎಲ್ಲರೂ ಪಕ್ಷದ ತತ್ವ ಸಿದ್ದಾಂತಕ್ಕೆ ಬದ್ಧರಾಗಿದ್ದಾರೆ. ಸಣ್ಣ ಪುಟ್ಟ ವಿಷಯಗಳಿಗಾಗಿ ಕೆಲವು ಕಾರ್ಯಕರ್ತರಲ್ಲಿ ವೈಮನಸ್ಸು ಬಂದಿರಬಹುದು ಅದನ್ನೆಲ್ಲಾ ಸರಿಪಡಿಸಿದ್ದೆನೆ. ಕ್ಷೇತ್ರzಲ್ಲಿÀ ಬಿಜೆಪಿ ಮುಖಂಡರು, ಕಾರ್ಯಕರ್ತರು, ವಿವಿಧ ಘಟಕದ ಪದಾಧಿಕಾರಿಗಳು ಪಕ್ಷದ ತತ್ವ ಸಿದ್ದಾಂತದಡಿ ಪಕ್ಷ ವಹಿಸಿದ ಕೆಲಸಕಾರ್ಯಗಳನ್ನು ಚಾಚು ತಪ್ಪದೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಿದ್ದಾರೆ.
ಯರಡೋಣಾ ಗ್ರಾ.ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ಮುಖಂಡರಾದ ಶರಣಪ್ಪ ಗದ್ದಿ, ಮಂಜುನಾಥ ಮಾಲಿಪಾಟೀಲ್, ರವಿ ಸಿಂಗ್ ವಕೀಲರು, ವಿರುಪಾಕ್ಷಿ ಗುಂಡೂರು, ಶಿವಶರಣಪ್ಪ, ಅಂಬಣ್ಣ, ತಿಮ್ಮಣ್ಣ, ಹುಲ್ಲೇಶಪ್ಪ, ಮಾರೆಪ್ಪ, ಪರಶುರಾಮ, ವೀರೇಶ, ವೀರೇಶಪ್ಪ ಅನೇಕರಿದ್ದರು.