ಸುದ್ದಿಮೂಲ ವಾರ್ತೆ
ಸಿರುಗುಪ್ಪ,ಸೆ.27: ಅನ್ನದಾತರ ಜೀವನಾಡಿಗಳಾಗಿರುವ ಜಾನುವಾರುಗಳಿಗೆ ಕಾಲುಬಾಯಿ ರೋಗವು ಬಂದೆರೆಗಿ ಅನೇಕ ಜಾನುವಾರುಗಳು ಅಸುನೀಗಿರುವ ಘಟನೆಗಳು ನಡೆದಿವೆ, ಇಂತಹ ಕಾಲುಬಾಯಿ ರೋಗ ಬರದ ಹಾಗೆ ಮುನ್ನೆಚ್ಚರಿಕೆಗಾಗಿ ಸರ್ಕಾರ ರೈತರಿಗೆ ಅನುಕೂಲವಾಗುವಲ್ಲಿ ಎಲ್ಲ ದನಕರುಗಳಿಗೆ ಉಚಿತವಾಗಿ ಲಸಿಕೆ ಹಾಕುವ ಯೋಜನೆ ಜಾರಿಗೆ ತಂದಿದೆ ಎಂದು ಶಾಸಕ ಬಿ.ಎಂ. ನಾಗರಾಜ ಹೇಳಿದರು.
ನಗರದ ಪಶು ಆಸ್ಪತ್ರೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿ ಸಹಯೋಗದಲ್ಲಿ ಕಾಲುಬಾಯಿ ರೋಗದ ವಿರುದ್ದ ಲಸಿಕೆ ಅಭಿಯಾನದ ಚಾಲನೆ ನೀಡಿ ಶಾಸಕರು ಮಾತನಾಡಿದರು.
ಗ್ರಾಮಗಳಲ್ಲಿ ನೇರವಾಗಿ ರೈತರ ಮನೆ ಬಾಗಿಲಿಗೆ ಹೋಗಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಕೊಡುವ ಕಾರ್ಯಕ್ರಮ ಇದಾಗಿದ್ದು ಪಶುವೈದ್ಯರು, ಪಶು ಚಿಕಿತ್ಸಕರು ಹಾಗೂ ಸಿಬ್ಬಂದಿ ವರ್ಗದವರು ರೈತರ ಮನೆ-ಮನೆಗೆ ತೆರಳಿ ಎಲ್ಲ ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದ ಹಾಗೆ ಲಸಿಕಾ ನೀಡುತ್ತಿದ್ದು ರೈತ ಬಾಂಧವರು ಸರ್ಕಾರದ ಈ ಯೋಜನೆ ಲಾಭ ಪಡೆದುಕೊಂಡು ಕಾಲುಬಾಯಿ ರೋಗದಿಂದ ರಾಜ್ಯವನ್ನು ಮುಕ್ತಗೊಳಿಸೋಣವೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಪಶು ಸಂಜೀವಿನಿ ಅಂಬುಲೆನ್ಸ್ 1962 ಗೆ ಚಾಲನೆ ನೀಡಿದರು ಹಾಗೂ ಪಶು ಸಖಿಯರಿಗೆ ಪ್ರಥಮ ಚಿಕಿತ್ಸೆಯ ಕಿಟ್ ಗಳನ್ನು ವಿತರಿಸಿದರು
ಈ ವೇಳೆ ಮುಖ್ಯಪಶು ವೈದ್ಯಾಧಿಕಾರಿ (ಆಡಳಿತ) ಡಾ.ವೈ.ಗಂಗಾಧರ ಮಾತನಾಡಿ ಕಾಲುಬಾಯಿ ರೋಗ ಬರದ ಹಾಗೆ ತಡೆಗಟ್ಟಲು ಮೂರು ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕುವುದು ಅತ್ಯಗತ್ಯ ರೈತರ ಮನೆ ಬಾಗಿಲಿಗೆ ಹೋಗಿ ಆಕಳು, ಎತ್ತು, ಎಮ್ಮೆ, ಕರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವಾಗಿದ್ದು ಅಕ್ಟೋಬರ್ 25 ರ ವರೆಗೂ ಲಸಿಕಾ ಅಭಯಾನ ನಡೆಯುತ್ತಿದ್ದು ರೈತರು ಇದರ ಸದುಪಯೋಗ ಪಡೆಯ ಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಪಶು ವೈದ್ಯಕೀಯಪರಿಕ್ಷಕರು ಟಿ. ಹುಚ್ಚೀರಪ್ಪ ,ನಗರಸಭೆಯ ಸದಸ್ಯ ಹೆಚ್ .ಗಣೇಶ್ ಮುಖಂಡರಾದ ಗುಮ್ಮಡಿ ರಾಜಶೇಖರ್ ಹಾಗೂ ಪಶು ಸಖಿಯರು ಹಾಗೂ ಪಶು ಆಸ್ಪತ್ರೆಯ ಸಿಬ್ಬಂದಿ ಸುಬಾನ್ ಸೇರಿದಂತೆ ಅನೇಕರು ಇದ್ದರು.