ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ,ಜೂ.20: ನಗರಸಭೆಯ ಸ್ವಚ್ಚತ್ತೆಗೆ ಮೊದಲ ಆದ್ಯತೆ ನೀಡಲು ನಿರ್ದರಿಸಿದ್ದು, ಸ್ವಚ್ಚ ಶಿಡ್ಲಘಟ್ಟ ಮಾಡುವ ನಿಟ್ಟಿನಲ್ಲಿ ಸ್ವಚ್ಚತ್ತಾ ಕಾರ್ಯವನ್ನು ಕೈಗೊಂಡಿರುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ನಗರದ ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಇರುವ ಸ್ವಾಗತ ಕಮಾನು ಬಳಿ ಸ್ವಚ್ಚತ್ತಾ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಬಿ.ಎನ್ ರವಿಕುಮಾರ್, ಚುನಾವಣೆ ಸಮಯದಲ್ಲಿ ನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದಾಗ ಎಲ್ಲಾ ವಾರ್ಡುಗಳು ಕಸದಿಂದ ತುಂಬಿರುವುದು ಕಂಡುಬಂದಿದ್ದು, ನಗರವನ್ನು ಅಭಿವೃದ್ದಿ ಮಾಡುವ ನಿಟ್ಟಿನಲ್ಲಿ ನಗರವನ್ನು ಸ್ವಚ್ಚ ಮಾಡುವ ಕಾರ್ಯ ಕೈಗೊಂಡಿದ್ದು ಇದಕ್ಕೆ ನಗರದ ಎಲ್ಲಾ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.
ಇನ್ನು ಮುಂದೆ ಹಳೆ ಕಟ್ಟಡದ ಅವಶೇಷಗಳನ್ನು ರಸ್ತೆಯ ಪಕ್ಕದಲ್ಲಿ ಹಾಕುವುದು ನಿಷೇಧಿಸಲಾಗಿದೆ. ಜೊತೆಗೆ ಇನ್ನೂ ಹಲವು ಸಮಸ್ಯೆಗಳಿದ್ದು,ಅದನ್ನು ಬಗೆಹರಿಸಿ ಅಭಿವೃದ್ದಿ ಮಾಡುವುದಾಗಿ ತಿಳಿಸಿದರು.
ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಶಾಸಕರು ನಗರಸಭೆಯಲ್ಲಿ ನಗರದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದ್ದು, ನಗರದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇವೆ. ಮೊದಲ ಹಂತವಾಗಿ ಇಂದು ನಗರದಲ್ಲಿ ಸ್ವಚ್ಚತ್ತಾ ಕಾರ್ಯ ಕೈಗೊಂಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಹಾಕಿದ ಹಳೆ ಕಟ್ಟಡದ ಅವಶೇಷ, ಕಸವನ್ನು ನಗರಸಭಾ ಕಾರ್ಮಿಕರು ಸ್ವಚ್ಚಗೊಳಿಸಲು ಬಹಳ ಸಮಯ ಹಿಡಿಯುವುದಾಗಿ ತಿಳಿಸಿದಾಗ ಅವರೇ ಸ್ವಯಂಪ್ರೇರಿತರಾಗಿ ಸುಮಾರು 50 ಜನ ಕಾರ್ಮಿಕರನ್ನು, ಜೆ.ಸಿ.ಬಿ.ಮತ್ತು ಟ್ಯಾಕ್ಟರ್ ಗಳನ್ನು ವ್ಯವಸ್ಥೆ ಮಾಡಿದ್ದಾರೆ. ಸ್ವಚ್ಚತ ಕಾರ್ಯ ಸುಮಾರು 15 ದಿನಗಳ ಕಾಲ ಹಿಡಿಯಲಿದ್ದು, ಸುಮಾರು 30 ಲಕ್ಷರೂ.ಗೂ ಅಧಿಕ ಹಣ ಖರ್ಚಾಗಲಿದೆ.
ಈ ಕಾರ್ಯಕ್ರಮದಲ್ಲಿ ನಗರಸಭಾ ಅದ್ಯಕ್ಷೆ ಸುಮಿತ್ರಾ ರಮೇಶ್, ಆರೋಗ್ಯ ನಿರೀಕ್ಷಕ ಮುರಳಿ,ನಗರಸಭಾ ಸದಸ್ಯ ಅನಿಲ್ ಕುಮಾರ್, ರಾಘವೇಂದ್ರ, ಚೌಡಸಂದ್ರ ಗ್ರಾಮ ಪಂಚಾಯತಿ ಸದಸ್ಯ ಸಿ. ಕೆ ಗಜೇಂದ್ರ ಬಾಬು ನಗರಸಭೆ ಪೌರಕಾರ್ಮಿಕರು ಹಾಗೂ ಸಾರ್ವಜನಿಕರು ಹಾಜರಿದ್ದರು.