ಸುದ್ದಿಮೂಲ ವಾರ್ತೆ ಯಾದಗಿರಿ, ಜ.01:
ಅರ್ಮ ಶಿಲ್ಪಿಿ ಜಕಣಾಚಾರಿ ಅವರು ನಾಡಿನ ಶಿಲ್ಪ ಕಲೆಗೆ ನೀಡಿದ ಕೊಡುಗೆ ಸದಾ ಸ್ಮರಣೀಯ ಎಂದು ನಗರ ಶಾಸಕ ಚೆನ್ನಾಾರೆಡ್ಡಿಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಾಲಯದ ಸಭಾಂಗಣದಲ್ಲಿ ಇಂದು ವಿಶ್ವ ಕರ್ಮ ಅಮರಶಿಲ್ಪಿಿ ಜಕಣಾಚಾರಿ ಅವರ ಸಂಸ್ಮರಣಾ ದಿನಾಚರಣೆ ಅಂಗವಾಗಿ ಅಮರಶಿಲ್ಪಿಿ ಜಕಣಾಚಾರಿ ಅವರ ಭಾವಚಿತ್ರಕ್ಕೆೆ ಗೌರವ ಅರ್ಪಿಸಿ , ಕಾರ್ಯಕ್ರಮ ಉದ್ಘಾಾಟಿಸಿ ಅವರು ಮಾತನಾಡಿದರು.
ಅಮರಶಿಲ್ಪಿಿ ಜಕಣಾಚಾರಿ ಅವರು ನಾಡಿನ ಶಿಲ್ಪ ಕಲೆಗೆ ನೀಡಿದ ಕೊಡುಗೆ ಅಪಾರ. ಶಿಲ್ಪಕಲಾ ಕ್ಷೇತ್ರ ಶ್ರೀಮಂತಗೊಳಿಸಿದ ಇಂತಹ ಅಮರಶೀಲ್ಪಕಾರ ಸೂರ್ಯ-ಚಂದ್ರವಿರುವ ವರೆಗೂ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.
ವಿಶ್ವಕರ್ಮ ಸಮುದಾಯ ಹಾಗೂ ಅಮರಶಿಲ್ಪಿಿ ಜಕಣಾಚಾರಿ ಅವರ ಸಾಧನೆಗಳು ಈ ನಾಡಿಗೆ ವಿಶ್ವದ ಜನರನ್ನು ಕೈಬೀಸಿ ಕರೆಯುತ್ತಿಿವೆ. ಬೇಲೂರು,ಹಳೆಬೀಡು,ಐಹೊಳೆ, ಪಟ್ಟದಕಲ್ಲು, ಶಿಲ್ಪಕಲಾಕೃತಿಗಳು ಖ್ಯಾಾತಿ ಪಡೆದಿವೆ. ಇಂತಹ ಶಿಲ್ಪಕಲೆಗಳು,ಕಲಾ ನೈಪುಣ್ಯತೆಗಳು ಆಧುನಿಕ ತಂತ್ರಜ್ಞಾನದ ಭರಾಟೆಯಲ್ಲಿ ನಶಿಸಿ ಹೋಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ಸರ್ಕಾರವು ಸಹ ಇಂತಹ ಮಹಾನ್ ಶಿಲ್ಪಿಿಯ ಗೌರವಾರ್ಥವಾಗಿ ಜಕಣಾಚಾರಿ ಪ್ರಶಸ್ತಿಿಯನ್ನು ಸಹ ಪ್ರಕಟಿಸಿದೆ. ವಿಶ್ವ ಕರ್ಮರ ಕಲಾ ನೈಪುಣ್ಯತೆ ಅಗಾಧವಾಗಿದೆ ಎಂದ ಅವರು ವಿಶ್ವಕರ್ಮರ ಪಂಚಕಲೆಗಳಿಗೆ ಪ್ರೋೋತ್ಸಾಾಹ ನೀಡುವ ಅವಶ್ಯಕತೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಾಸ ನೀಡಿದ ಎಲ್.ಕೆ.ಟಿ ಪದವಿ ಮಹಾವಿದ್ಯಾಾಲಯ ಪ್ರಾಾಂಶುಪಾಲ ಗುರಪ್ಪ ಚಾರ್ಯ ಅವರು ಶಿಲ್ಪ ಕಲೆಗಳ ಮೂಲಕ ಭಾರತದ ಹಾಗೂ ಈ ನಾಡಿನ ಸಂಸ್ಕೃತಿಯನ್ನು ವಿಶ್ವಕರ್ಮರು ಶ್ರೀಮಂತಗೊಳಿಸಿದ್ದಾರೆ.
ವಿಶ್ವಕರ್ಮ ರ ಪಂಚಕಲೆಗಳಿಗೆ ಕೈಗಾರಿಕಾಸ್ಥಾಾನಮಾನ ದೊರಕಬೇಕು. ಶಿಲ್ಪಕಲೆ,ಕಂಚು, ತಾಮ್ರದ ಶಿಲ್ಪ ಕಲೆ ಹೀಗೆ ವಿವಿಧ ಕಲೆಗಳಿಗೆ ಪ್ರೋೋತ್ಸಾಾಹ ದೊರಕಬೇಕು. ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕಾ ಸಂಕೀರ್ಣ, ಕುಠೀರದಂತಹ ವ್ಯವಸ್ಥೆೆ ಮೂಲಕ ಪ್ರೋೋತ್ಸಾಾಹಿಸುವ ಅವಶ್ಯಕತೆ ಇದೆ.ಕೈಗಾರಿಕಾ ವಸಾಹತು ಸ್ಥಾಾಪಿಸಿ ಪ್ರೋೋತ್ಸಾಾಹಿಸಲು ಅವರು ಕೋರಿದರು.
ವಿಶ್ವ ಕರ್ಮ ಏಕದಂಡಗಿ ಮಠದ ಶ್ರೀ ರವೀಂದ್ರ ಮಹಾಸ್ವಾಾಮಿಗಳು ಆಶೀರ್ವಚನ ನೀಡಿದರು.
ನಗರಾಭಿವೃದ್ಧಿಿ ಪ್ರಾಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್
ಸಹಾಯಕ ಆಯುಕ್ತ ಶ್ರೀಧರ್ ಗೋಟುರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಮತಿ ಉತ್ತರದೇವಿ, ವಿಶ್ವಕರ್ಮ ಮಹಾಸಭಾ ಉಸ್ತುವಾರಿ ದೇವೇಂದ್ರ ಎಲ್.ವಡಗೇರಿ, ವಿಶ್ವ ಕರ್ಮ ಮಹಾಸಭಾದ ಗೌರವಾಧ್ಯಕ್ಷ ಶಿವಣ್ಣ ಉಣೂರ, ಜಿಲ್ಲಾಧ್ಯಕ್ಷ ಮಹೇಶ್ ತಡಬೀಡಿ, ಪ್ರಧಾನ ಕಾರ್ಯದರ್ಶಿ ರಮೇಶ್ ವಿಶ್ವಕರ್ಮ ಹತ್ತಿಿಕುಣಿ, ತಾಲೂಕಾಧ್ಯಕ್ಷ ಬಣ್ಣಪ್ಪ ಕಾಳೆಬೆಳಗುಂದಿ,ಹಣುಮಂತರಾಯ್ ಉಳ್ಳೆೆಸುಗೂರ ಉಪಸ್ಥಿಿತರಿದ್ದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ನಗರಸಭೆ, ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಸಮಾಜಕ್ಕಾಾಗಿ ಶ್ರಮಿಸುತ್ತಿಿರುವವರನ್ನು ಸನ್ಮಾಾನಿಸಲಾಯಿತು.
ಜಿಲ್ಲಾಡಳಿತದಿಂದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ನಾಡಿನ ಶಿಲ್ಪಕಲಾ ಸಂಸ್ಕೃತಿ ಶ್ರೀಮಂತಗೊಳಿಸಿದವರು ಜಕಣಾಚಾರಿ

