ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.1:
ತಾಲೂಕು ಕೇಂದ್ರವಾದ ವಡಗೇರಾವನ್ನು ಪಟ್ಟಣ ಪಂಚಾಯಿತಿಯನ್ನಾಾಗಿ ಮೇಲ್ದರ್ಜೆಗೆ ಏರಿಸುವ ಮೂಲಕ ಅಭಿವೃದ್ಧಿಿಗೆ ಮತ್ತಷ್ಟು ವೇಗ ಸಿಗಲಿದೆ ಎಂದು ಶಾಸಕ ಚನ್ನಾಾರೆಡ್ಡಿಿ ಪಾಟೀಲ್ ತುನ್ನೂರ ಹೇಳಿದರು. ಕನ್ನಡಪರ, ರೈತಪರ, ದಲಿತರ ಸಂಘಟನೆಗಳ ಒಕ್ಕೂಟಗಳ ಪದಾಧಿಕಾರಿಗಳು ಸೋಮವಾರ ಶಾಸಕರ ಕಚೇರಿಯಲ್ಲಿ ಮಾಡಿದ ಸನ್ಮಾಾನ ಸ್ವೀಕರಿಸಿ ಅವರು ಮಾತನಾಡಿದರು.
ತಾಲೂಕು ಕೇಂದ್ರವಾಗಿ ಕೆಲವು ವರ್ಷಗಳು ಕಳೆದರೂ ಗ್ರಾಾಪಂ ಆಗಿಯೇ ಇದ್ದ ವಡಗೇರಾವನ್ನು ಪಪಂ ಆಗಿ ಮಾಡುವಂತೆಯೇ ಜನರ ಬೇಡಿಕೆಯಾಗಿತ್ತು. ಈಗ ಅದನ್ನು ಜಾರಿಗೆ ಬಂದಿದೆ. ಕಾರಣ, ಇನ್ನೂ ಹೆಚ್ಚಿಿನ ಕೆಲಸ ಮಾಡಲು ಅನುಕೂಲವಾಗಿದೆ ಎಂದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಉತ್ತರ ಕರ್ನಾಟಕ ಸಂಚಾಲಕ ಶರಣು ಇಟಗಿ, ರೈತ ಸಂಘಟನೆ ತಾಲೂಕು ಅಧ್ಯಕ್ಷ ಮಲ್ಲಣ್ಣ ನೀಲಹಳ್ಳಿಿ, ರೈತ ಸಂಘಟನೆ ಮುಖಂಡರಾದ ಕೀರ್ ಅಹ್ಮದ್ ಮರಡಿ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಗುರುನಾಥ ನಾಟೇಕರ್, ಭೀಮ್ ಆರ್ಮಿ ಸಂಘಟನೆ ಅಧ್ಯಕ್ಷ ಮರೆಪ್ಪ ಡಿ ಉಳ್ಳೆೆಸೂಗುರು, ಭೀಮಣ್ಣ ಬೂದಿನಾಳ, ಜಯ ಕರ್ನಾಟಕ ಆಧ್ಯಕ್ಷ ಮಂಜುನಾಥ ಕೋನಹಳ್ಳಿಿ, ಭೀಮರಾಯ ಹಾಲಗೇರಿ, ಮಲ್ಲು ನಾಟೇಕರ್, ಹಣಮಂತ ಓಡಕರ್, ಮಲ್ಲು ಟೋಕಾಪುರ, ಶಿವಶರಣಪ್ಪ ಗೋನಾಲ್, ಸಿದ್ದು ಕಂದಳ್ಳಿಿ ಸೇರಿದಂತೆ ಮತ್ತಿಿತರರು ಇದ್ದರು.
ವಡಗೇರಾ ಅಭಿವೃದ್ಧಿಗೆ ಪಪಂ ಸಹಾಯವಾಗಲಿದೆ: ಶಾಸಕ ಚನ್ನಾಾರೆಡ್ಡಿ ಪಾಟೀಲ್

