ಸುದ್ದಿಮೂಲ ವಾರ್ತೆ ಮಾನ್ವಿ, ಡಿ.21:
ಜನವರಿ 1 ರಂದು ಮಾನ್ವಿಿಗೆ ಆಗಮಿಸಲಿರುವ ತುಂಗಭದ್ರಾಾ ಉಳಿಸಿ ಪಾದಯಾತ್ರೆೆಯನ್ನು ನಾವೆಲ್ಲರೂ ಯಶಸ್ವಿಿಗೊಳಿಸಬೇಕು ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.
ರವಿವಾರ ಮಾನ್ವಿಿ ಪಟ್ಟಣದ ಧ್ಯಾಾನ ಮಂದಿರದಲ್ಲಿ ನವದೆಹಲಿಯ ರಾಷ್ಟ್ರೀಯ ಸ್ವಾಾಭಿಮಾನ ಆಂದೋಲನ, ನಿರ್ಮಲ ತುಂಗಭದ್ರಾಾ ಅಭಿಯಾನ ಸಮಿತಿ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಂಯುಕ್ತಾಾಶ್ರಯದಲ್ಲಿ ಹಮ್ಮಿಿಕೊಂಡಿದ್ದ ನಿರ್ಮಲ ತುಂಗಭದ್ರಾಾ ಅಭಿಯಾನ 3 ನೇ ಹಂತದ ಜಲಜಾಗೃತಿ ಹಾಗೂ ಜನಜಾಗೃತಿ ತುಂಗಭದ್ರಾಾ ಉಳಿಸಿ ಪಾದಯಾತ್ರೆೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿಿದ್ದರು.
ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಬಾಲಕೃಷ್ಣ ನಾಯ್ಡು ಮಾತನಾಡಿ ಪಶ್ಚಿಿಮ ಘಟ್ಟದಲ್ಲಿ ಹುಟ್ಟುವ 12 ಉಪನದಿಗಳು ಸೇರಿಕೊಂಡು ತುಂಗಭದ್ರಾಾ ನದಿ ಹರಿಯುತ್ತದೆ. ಇತ್ತೀಚಿನ ದಿನಗಳಲ್ಲಿ ಪಶ್ಚಿಿಮ ಘಟ್ಟದಲ್ಲಿನ ದಟ್ಟ ಅರಣ್ಯಗಳ ನಾಶ, ನದಿಗೆ ಭಾರಿ ಪ್ರಮಾಣದಲ್ಲಿ ತ್ಯಾಾಜ್ಯಗಳನ್ನು ಹಾಕುತ್ತಿಿರುವುದು, ಪಶ್ಚಿಿಮ ಘಟ್ಟದಲ್ಲಿ ಧಾರಣೆಗೆ ಮೀರಿದ ವಿವಿಧ ಯೋಜನೆಗಳಿಂದ ನದಿಯ ಪ್ರಮಾಣ ಕುಗ್ಗುತ್ತಿಿರುವುದನ್ನು ಹಾಗೂ ಕಲುಷಿತವಾಗುತ್ತಿಿರುವುದನ್ನು ತಜ್ಞರು ಕಂಡುಕೊಂಡಿದ್ದಾರೆ. ಈ ಕುರಿತು ಸರ್ಕಾರದ ಗಮನಕ್ಕೆೆ ತರಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಾಗಿ ನಿರ್ಮಲ ತುಂಗಭದ್ರಾಾ ಅಭಿಯಾನವನ್ನು ಶೃಂಗೇರಿಯಿಂದ ಶ್ರೀಶೈಲದವರೆಗೆ ಹಮ್ಮಿಿಕೊಂಡಿದ್ದು 3 ನೇ ಹಂತದಲ್ಲಿ ಡಿ. 31 ರಂದು ಮಾನ್ವಿಿ ತಾಲೂಕಿಗೆ ಪೋತ್ನಾಾಳ್ ಹಾಗೂ ಹಿರೇಕೊಟ್ನೆೆಕಲ್ ಗ್ರಾಾಮದ ಮೂಲಕ ಪ್ರವೇಶಿಸಲಿದೆ. ರಾತ್ರಿಿ ಚೀಕಲಪರ್ವಿ ಗ್ರಾಾಮದ ತುಂಗಭದ್ರಾಾ ನದಿಗೆ ತುಂಗಭದ್ರಾಾ ಅರತಿ ಪೂಜೆ ಸಲ್ಲಿಸಲಾಗುವುದು. ಜನವರಿ 1 ರಂದು ಮಧ್ಯಾಾಹ್ನ 1 ಗಂಟೆಗೆ ಮಾನ್ವಿಿ ಪಟ್ಟಣಕ್ಕೆೆ ಪಾದಯಾತ್ರೆೆ ಆಗಮಿಸಲಿದ್ದು ಬಹಿರಂಗ ಸಭೆ ನಡೆಸಲಾಗುವುದು. ನಂತರ ಶಾಲಾ,ಕಾಲೇಜುಗಳ ವಿದ್ಯಾಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುವುದು. ಜ.2 ರಂದು ಮಾನ್ವಿಿಯಿಂದ ರಾಜಲಬಂಡಾ ಗ್ರಾಾಮದವರೆಗೆ ಪಾದಯಾತ್ರೆೆ ನಡೆಸಲಾಗುವುದು. ಜ.3 ರಂದು ರಾಜಲಬಂಡಾ ಗ್ರಾಾಮದಿಂದ ಬಿಚ್ಚಾಾಲಿ, ಗಿಲ್ಲೆಸೂಗೂರು ಮೂಲಕ ಮಂತ್ರಾಾಲಯದವರೆಗೆ ಪಾದಯಾತ್ರೆೆ ನಡೆಯುತ್ತದೆ ಎಂದು ವಿವರ ನೀಡಿದರು.
ಈ ಸಭೆಯಲ್ಲಿ ಮಾಜಿ ಶಾಸಕರಾದ ಬಸನಗೌಡ ಬ್ಯಾಾಗವಾಟ, ಗಂಗಾಧರನಾಯಕ, ನಯೋಪ್ರಾಾ ಅಧ್ಯಕ್ಷ ಅಬ್ದುಲ್ ಗೂರ್ ಸಾಬ್, ಮುಖಂಡರಾದ ಬಿ.ಕೆ.ಅಮರೇಶಪ್ಪ, ಎಸ್. ತಿಮ್ಮಾಾರೆಡ್ಡಿಿ ಭೋಗಾವತಿ
ಮಲ್ಲಿಕಾರ್ಜುನಗೌಡ ಗಣೇಕಲ್, ಜೆ.ಸುಧಾಕರ, ಪಾದಯಾತ್ರೆೆಯ ರಾಯಚೂರು ಜಿಲ್ಲಾ ಸಂಚಾಲಕ ಎನ್. ಉದಯಕುಮಾರ ಸಾಹುಕಾರ ಸಿರವಾರ, ಅನಿತಾ ನವಲಕಲ್, ಅರುಣ್ ಚಂದಾ, ಹರಿಹರ ಪಾಟೀಲ್, ಶ್ರೀಧರಸ್ವಾಾಮಿ, ರಾಘವೇಂದ್ರ ಚೌಡ್ಕಿಿ, ಮಂಜುನಾಥ, ಕೃಪಾಸಾಗರ ಪಾಟೀಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಮಾನ್ವಿಯಲ್ಲಿ ಪೂರ್ವಭಾವಿ ಸಭೆ ತುಂಗಭದ್ರಾ ಉಳಿಸಿ ಪಾದಯಾತ್ರೆ ಯಶಸ್ವಿಗೊಳಿಸಲು ಶಾಸಕ ಹಂಪಯ್ಯ ನಾಯಕ ಸಲಹೆ

