ಸುದ್ದಿಮೂಲ ವಾರ್ತೆ ಮಾನ್ವಿ, ಡಿ.31
ಮಾನ್ವಿಿ ಪಟ್ಟಣದ ಪುರಸಭೆಗೆ ಮಂಜೂರಾಗಿರುವ ಘನತ್ಯಾಾಜ್ಯ ವಿಲೇವಾರಿಯ ಬೃಹತ್ ವಾಹನಗಳಿಗೆ ಶಾಸಕ ಜಿ.ಹಂಪಯ್ಯ ನಾಯಕ ಇವರು ಬುಧವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಮಾನ್ವಿಿ ಪುರಸಭೆಯಿಂದ ಬೀದಿಗಳನ್ನು ಸ್ವಚ್ಛಗೊಳಿಸಲು, ಮನೆಗಳಿಂದ ತ್ಯಾಾಜ್ಯ ಸಂಗ್ರಹಿಸಲು, ಘನ ತ್ಯಾಾಜ್ಯ ಬೇರ್ಪಡಿಸಲು ಮತ್ತು ಕಸವನ್ನು ಕಸದ ತೊಟ್ಟಿಿಗಳಲ್ಲಿ ಸಂಗ್ರಹಿಸಲು ಬಳಸಲಾಗುವ ವಾಹನಗಳಿಗೆ ಚಾಲನೆ ನೀಡಲಾಗಿದೆ.
ಪಟ್ಟಣದಲ್ಲಿ ಕಸ ವಿಲೇವಾರಿ ಅಂದಾಜು 19.2 ಟನ್ ಗಳಷ್ಟು ಇದ್ದು ಇದರಲ್ಲಿ ಶೇ.60 ರಷ್ಟು ಹಸಿ ಕಸವಿದ್ದರೆ ಶೇ. 40 ರಷ್ಟು ಒಣಕಸ ಪುರಸಭೆಯ ಕಾರ್ಮಿಕರಿಂದ ಕಸ ವಿಲೇವಾರಿ ಮಾಡಲಾಗುತ್ತಿಿದೆ. ಪುರಸಭೆಯಲ್ಲಿ ಈಗಾಗಲೇ 11 ಆಟೋ, 6 ಟ್ರ್ಯಾಾಕ್ಟರ್ ಗಳು, 2 ಜೆ ಸಿ ಬಿ, 1, ಕಂಪ್ಯಾಾಕ್ಟರ ( ಲಾರಿ ) ವಾಹನಗಳಿಂದ ಪುರಸಭೆಯ ಸಿಬ್ಬಂದಿ ವರ್ಗ ಮಾನ್ವಿಿ ನಗರದ ದೈನಂದಿನ ಸ್ವಚ್ಛತಾ ಕಾರ್ಯ ನಡೆಸುತ್ತಿಿದ್ದು ಮುಂದಿನ ದಿನಗಳಲ್ಲಿ ಮಾನ್ವಿಿ ಪುರಸಭೆಯು ನಗರಸಭೆನ್ನಾಾಗಿ ಮೇಲ್ದರ್ಜೆಗೇರಿದಾಗ ಇನ್ನೂ ಬಹಳಷ್ಟು ಸಿಬ್ಬಂದಿ ವರ್ಗ ಹಾಗೂ ವಾಹನಗಳು ಮಾನ್ವಿಿ ನಗರಕ್ಕೆೆ ಬರುವ ಸಾಧ್ಯತೆ ಇದೆ. ಇರುವ ವಾಹನಗಳಿಂದಲೇ ಮಾನ್ವಿಿ ನಗರವನ್ನು ಸ್ವಚ್ಛತೆ ಮಾಡುತ್ತಿಿರುವ ಸಿಬ್ಬಂದಿ ಕಾರ್ಯಕ್ಕೆೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಹಾಗೂ ನಗರ ಯೋಜನಾ ಪ್ರಾಾಧಿಕಾರದ ಅಧ್ಯಕ್ಷ ಅಬ್ದುಲ್ ಗೂರ್ ಸಾಬ್, ಗ್ಯಾಾರಂಟಿ ಯೋಜನಾ ಅನುಷ್ಠಾಾನ ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ಮುಖಂಡರಾದ ಸೈಯದ್ ಖಾಲಿದ್ ಖಾದ್ರಿಿ, ಸೈಯದ್ ನಜೀರುದ್ದೀನ್ ಖಾದ್ರಿಿ ಪುರಸಭೆ ಮುಖ್ಯಾಾಧಿಕಾರಿ ಪರಶುರಾಮ ದೇವಮಾನೆ, ರಾಜಾಸುಭಾಶ್ಚಂದ್ರನಾಯಕ, ಪಿ.ಜಯಪ್ರಕಾಶ, ಡಿ.ರಾಮಕೃಷ್ಣ, ಸಾಬೀರ್ ಹುಸೇನ್, ಡಿ .ವೀರೇಶ, ಜಮೀಲ್ ಆಹ್ಮದ್, ರೇವಣಸಿದ್ದಯ್ಯಸ್ವಾಾಮಿ, ಶುಕಮುನಿ, ಮೊಹಮ್ಮದ್ ರಹೆಮತ್ ಅಲಿ, ಜಿಲಾನಿ ಖುರೇಶಿ, ವೆಂಕಟೇಶನಾಯಕ, ಸತ್ತಾಾರ್ ಬಂಗ್ಲೆೆವಾಲೆ, ಶೇಖ್ ಮಹೆಬೂಬ್, ಚಂದ್ರು ಕಾಜಗಾರ, ಕಾಮೇಶ ಮಂದಕಲ್, ಹಂಪಯ್ಯನಾಯಕ ಬೆಳಗಿನಪೇಟೆ, ರೇಣುಕಾ ರೆಡ್ಡಿಿ, ಕಮಲಿ ಬಾಬಾ, ಶೇಖ್, ನಿಸಾರ್ ಅಹ್ಮದ್ ಸೇರಿದಂತೆ ಪುರಸಭೆಯ ನೈರ್ಮಲ್ಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಮಾನ್ವಿ : ಘನತ್ಯಾಾಜ್ಯ ವಿಲೇವಾರಿ ವಾಹನಗಳಿಗೆ ಶಾಸಕ ಹಂಪಯ್ಯ ನಾಯಕ ಚಾಲನೆ

