ಅಮರೇಶ ಅಲಬನೂರು ಸಿಂಧನೂರು, ನ.23:
ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಾಂತಿ ಭರ್ಜರಿಯಾಗಿಯೇ ಸದ್ದು ಮಾಡುತ್ತಿಿದೆ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಿ ಡಿ.ಕೆ.ಶಿವಕುಮಾರ ಮಧ್ಯೆೆ ಖುರ್ಚಿಗಾಗಿ ಕಾದಾಟ ಬಹಿರಂಗಗೊಂಡಿದೆ. ಅಧಿಕಾರ ಹಸ್ತಾಾಂತರವೇ ಆಗಲಿ.. ಸಂಪುಟ ವಿಸ್ತರಣೆಯೇ ಆಗಲಿ.. ಸಿಂಧನೂರಿನ ಶಾಸಕ ಹಂಪನಗೌಡ ಬಾದರ್ಲಿಗೆ ಸಚಿವ ಸ್ಥಾಾನ ಸಿಗಲಿದೆಯಾ ಎನ್ನುವ ಚರ್ಚೆಗಳು ಜೋರಾಗಿವೆ.
ಹಂಪನಗೌಡ ಬಾದರ್ಲಿ ಐದು ಬಾರಿ ಸಿಂಧನೂರಿನ ಶಾಸಕರಾಗಿ ಆಯ್ಕೆೆಯಾಗಿದ್ದಾಾರೆ. 2013ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆೆಸ್ ಅಧಿಕಾರಕ್ಕೆೆ ಬಂದಾಗ ಸಚಿವ ಸ್ಥಾಾನ ಸಿಕ್ಕೇ ಸಿಗುತ್ತದೆ ಎನ್ನುವ ಆಶಾಭಾವನೆ ತಾಲೂಕಿನ ಜನತೆಯಲ್ಲಿತ್ತು. ಆದರೆ ಸಿಗಲಿಲ್ಲ. ಎಂಎಸ್ಐಎಲ್ನ ಅಧ್ಯಕ್ಷ ಸ್ಥಾಾನ ನೀಡಿ ಸಿದ್ದರಾಮಯ್ಯ ಸಮಾಧಾನ ಮಾಡಿದ್ದರು. 2023ರಲ್ಲಿ ಕಾಂಗ್ರೆೆಸ್ ಅಧಿಕಾರಕ್ಕೆೆ ಬರುತ್ತಿಿದ್ದಂತೆ ಬಾದರ್ಲಿಗೆ ಸಚಿವ ಸ್ಥಾಾನ ಗ್ಯಾಾರಂಟಿ ಎನ್ನುವ ಚರ್ಚೆಗಳಿದ್ದವು. ಆದರೂ ಸಚಿವ ಸ್ಥಾಾನ ಸಿಗಲಿಲ್ಲ. ಮುಖ್ಯಮಂತ್ರಿಿ ಸಿದ್ದರಾಮಯ್ಯ ಬಾದರ್ಲಿಗೆ ಕೈಗಾರಿಕಾ ಮೂಲಭೂತ ಸೌಕರ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಸ್ಥಾಾನ ನೀಡಿದರು. ಸಚಿವ ಸ್ಥಾಾನದ ಪ್ರಬಲ ಆಕಾಂಕ್ಷಿಯಾಗಿರುವ ಬಾದರ್ಲಿ ನಿಗಮದ ಅಧ್ಯಕ್ಷ ಸ್ಥಾಾನ ವಹಿಸಿಕೊಳ್ಳಲಿಲ್ಲ. ಬಹಿರಂಗವಾಗಿಯೇ ತಿರಸ್ಕಾಾರ ಮಾಡುವ ಮೂಲಕ ಮಂತ್ರಿಿಮಂಡಲ ಪುನರ್ ರಚನೆ ಮಾಡಿದರೆ ತಮಗೆ ನೀಡಲೇಬೇಕು ಎನ್ನುವ ಸಂದೇಶ ನೀಡಿದರು.
ಲಾಬಿಯಿಲ್ಲ:
ಶಾಸಕ ಹಂಪನಗೌಡ ಬಾದರ್ಲಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾಾರೆ. ಆದರೂ ಬಾದರ್ಲಿ ಪರವಾಗಿ ಸಚಿವ ಸ್ಥಾಾನಕ್ಕೆೆ ದೊಡ್ಡಮಟ್ಟದ ಲಾಬಿ ಮಾಡುವಷ್ಟು ಆಪ್ತರಾಗಿಲ್ಲ ಎನ್ನಲಾಗುತ್ತಿಿದೆ. ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಮನಸ್ಸು ಮಾಡಿದರೆ ಬಾದರ್ಲಿಗೆ ಸಚಿವ ಸ್ಥಾಾನ ಅಸಾಧ್ಯವೇನಲ್ಲ ಎನ್ನುವ ಚರ್ಚೆಗಳಿವೆ.
ಕಪ್ಪ ಕೊಡಬೇಕು:
ಶಾಸಕ ಹಂಪನಗೌಡ ಬಾದರ್ಲಿ ಹಿರಿತನ ಗುರುತಿಸಿ ಸಚಿವ ಸ್ಥಾಾನ ನೀಡಬೇಕು ಎನ್ನುವದರಲ್ಲಿ ಎರಡು ಮಾತಿಲ್ಲ. ಆದರೆ ಕಾಂಗ್ರೆೆಸ್ನಲ್ಲಿ ಸಚಿವ ಸ್ಥಾಾನ ಬೇಕು ಎಂದರೆ ಕಪ್ಪ ನೀಡಲೇಬೇಕು ಎನ್ನುವ ಚರ್ಚೆಗಳನ್ನು ಅಲ್ಲಗಳೆಯುವಂತಿಲ್ಲ. ಶಾಸಕ ಹಂಪನಗೌಡ ಬಾದರ್ಲಿ ಕಳಂಕ, ಭ್ರಷ್ಟಾಾಚಾರ ರಹಿತ ರಾಜಕಾರಣಿ. ದೊಡ್ಡಮಟ್ಟದ ಕಪ್ಪ ಕೊಡಲು ಇವರಿಂದ ಸಾಧ್ಯವೇ ಇಲ್ಲ. ಹೀಗಾಗಿ ನಿರಂತರವಾಗಿ ಸಚಿವ ಸ್ಥಾಾನದಿಂದ ವಂಚಿತರಾಗುತ್ತಲೇ ಬಂದಿದ್ದಾಾರೆ ಎನ್ನಲಾಗುತ್ತಿಿದೆ.
ಹಿನ್ನಡೆ ತರುವ ಜಾತಿ:
ಶಾಸಕ ಹಂಪನಗೌಡ ಬಾದರ್ಲಿ ಲಿಂಗಾಯತ ಸಮುದಾಯಕ್ಕೆೆ ಸೇರಿರುವದರಿಂದ ಸತತವಾಗಿ ಸಚಿವ ಸ್ಥಾಾನದಿಂದ ವಂಚಿತರಾಗುತ್ತಲೇ ಬಂದಿದ್ದಾಾರೆ. ಕೆಲವು ಜಾತಿಗಳಲ್ಲಿ ಮೊದಲ ಬಾರಿಗೆ ಗೆದ್ದವರೂ ಸಚಿವರಾಗಿದ್ದಾಾರೆ. ಲಿಂಗಾಯತ ಸಮಾಜದಲ್ಲಿ ಬಹಳಷ್ಟು ಹಿರಿಯ ಶಾಸಕರಿದ್ದಾಾರೆ. ಅವರೊಂದಿಗೆ ಸಚಿವ ಸ್ಥಾಾನಕ್ಕೆೆ ಪೈಪೋಟಿ ಮಾಡಬೇಕಾಗಿದೆ. ಪ್ರಸ್ತುತ ಬಸವರಾಜ ರಾಯರೆಡ್ಡಿಿ, ಸಿ.ಎಸ್.ನಾಡಗೌಡ ಹಾಗೂ ಹಂಪನಗೌಡ ಬಾದರ್ಲಿ ಮಧ್ಯೆೆ ಸಚಿವ ಸ್ಥಾಾನಕ್ಕೆೆ ಪೈಪೋಟಿ ನಡೆದಿದೆ. ಯಾರಿಗೆ ಸಚಿವ ಸ್ಥಾಾನ ಸಿಗಲಿದೆ ಎನ್ನುವದು ಕುತೂಹಲ ಮೂಡಿಸಿದೆ.
ಶಾಸಕ ಹಂಪನಗೌಡ ಬಾದರ್ಲಿ ಮೊದಲಿನಿಂದಲೂ ಸೌಮ್ಯ ಸ್ವಭಾವದವರು. ತಮಗೆ ಸ್ಥಾಾನಮಾನ ಸಿಗದಿದ್ದಾಾಗ ಹೈಕಮಾಂಡ್, ನಾಯಕತ್ವದ ವಿರುದ್ದ ಎಂದೂ ಬಹಿರಂಗವಾಗಿ ವಿಮರ್ಶೆ, ಟೀಕೆ ಮಾಡಿದವರಲ್ಲ. ಅಸಮಧಾನವೂ ವ್ಯಕ್ತಪಡಿಸಿಲ್ಲ. ಇದು ಅವರಿಗಿರುವ ದೌರ್ಬಲ್ಯ ಎಂದರೆ ತಪ್ಪಾಾಗಲಾರದು. ಐದು ಬಾರಿ ಶಾಸಕರಾಗಿ ರಾಜಕೀಯದ ಕೊನೆ ಹಂತದಲ್ಲಿದ್ದಾಾರೆ. ಮುಂದಿನ ಬಾರಿ ಚುನಾವಣಾ ರಾಜಕಾರಣದಿಂದ ಬಹುತೇಕ ತೆರೆಗೆ ಸರಿಯುವ ಇಂಗಿತ ವ್ಯಕ್ತಪಡಿಸಿದ್ದಾಾರೆ. ಈ ಬಾರಿಯಾದರೂ ಸಂಪುಟ ವಿಸ್ತರಣೆಯಲ್ಲಿ ಬಾದರ್ಲಿಗೆ ಸಚಿವ ಸ್ಥಾಾನ ಸಿಗಲಿ ಎನ್ನುವದು ಕ್ಷೇತ್ರದ ಜನತೆಯ ಆಶಯವಾಗಿದೆ.
ಸಿದ್ದು-ಡಿಕೆಶಿ ನಡುವೆ ಗದ್ದುಗೆ ಗುದ್ದಾಾಟ : ಕಪ್ಪ ಕೊಟ್ಟರೆ ಸಚಿವ ಸ್ಥಾಾನ ಖಚಿತ ಶಾಸಕ ಹಂಪನಗೌಡ ಬಾದರ್ಲಿಗೆ ಸಿಗುವದೇ ಸಚಿವ ಸ್ಥಾಾನ?

