ಸುದ್ದಿಮೂಲ ವಾರ್ತೆ ಸಿಂಧನೂರು.ಅ.20
ತಾಲೂಕಾ ವ್ಯಾಾಪ್ತಿಿಯ 25 ಕ್ಯಾಾಂಪುಗಳನ್ನು ಕಂದಾಯ ಗ್ರಾಾಮಗಳಾಗಿ ಮಾಡಬೇಕು ಎನ್ನುವ ಸುಮಾರು ವರ್ಷಗಳ ಬೇಡಿಕೆ ಈಡೇರಿದ್ದು, 15 ಕ್ಯಾಾಂಪುಗಳನ್ನು ಕಂದಾಯ ಗ್ರಾಾಮಗಳಾಗಿ ಪರಿವರ್ತನೆ ಸರಕಾರ ಮಾಡಲಾಗಿದ್ದು, ಶೀಘ್ರವೇ ಅಂತಿಮ ಹಂತದ ಅಧಿಸೂಚನೆ ಹೊರಡಿಸಲಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿದ ಅವರು, ರಾಮರೆಡ್ಡಿಿಕ್ಯಾಾಂಪ್, ಕೃಷ್ಣನಗರ (ಕುನ್ನಟಗಿಕ್ಯಾಾಂಪ್), ತಾಯಮ್ಮ ಕ್ಯಾಾಂಪ್, ವೆಂಕಟೇಶ್ವರ ಕ್ಯಾಾಂಪ್, ಗಣೇಶ ನಗರ(ಗಣೇಶಕ್ಯಾಾಂಪ್), ಗೌರಿನಗರ (ಗೊರೇಬಾಳಕ್ಯಾಾಂಪ್), ಮೂಡಲಗಿರಿಕ್ಯಾಾಂಪ್, ಗಣೇಶನಗರ (ಗಣೇಶಕ್ಯಾಾಂಪ್), ದೇವಿನಗರ(ದೇವಿಕ್ಯಾಾಂಪ್), ಗೀತಾನಗರ (ಗೀತಾಕ್ಯಾಾಂಪ್), ದೇವಿನಗರ, ಪ್ರಶಾಂತನಗರ (ಪೈಕ್ಯಾಾಂಪ್), ಕೊಪ್ಪಳ ಕ್ಯಾಾಂಪ್, ದುರ್ಗಾದೇವಿನಗರ (ದುರ್ಗಾಕ್ಯಾಾಂಪ್), ಬಸವರಾಜೇಶ್ವರಿ ಕ್ಯಾಾಂಪ್, ರಾಮನಗರ(ರಾಮಾಕ್ಯಾಾಂಪ್)ಗಳನ್ನು ಕಂದಾಯ ಗ್ರಾಾಮಗಳಾಗಿ ಪರಿವರ್ತಿಸಲಾಗಿದೆ. ಇದಕ್ಕೆೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆ ಮೂಲಕ ಸರಕಾರಕ್ಕೆೆ ಸಲ್ಲಿಸಲಾಗಿತ್ತು. ಇನ್ನೂ 6 ಕ್ಯಾಾಂಪುಗಳು ಪ್ರಾಾಥಮಿಕ ಅಧಿಸೂಚನೆ ಹೊರಡಿಸಿದೆ. ಇವುಗಳು ಕೂಡ ಕಂದಾಯ ಗ್ರಾಾಮಗಳಾಗಿವೆ ಎಂದರು.
ರಸ್ತೆೆ ಅಭಿವೃದ್ದಿ:
ಮುಖ್ಯಮಂತ್ರಿಿಗಳು ಶಾಸಕರಿಗೆ 50 ಕೋಟಿ ವಿಶೇಷ ಅನುದಾನ ನೀಡಿದ್ದು, ಅದರಲ್ಲಿ 24 ಕೋಟಿ ಲೋಕೋಪಯೋಗಿ ಇಲಾಖೆಯ ಐದು ರಸ್ತೆೆಗಳ ಅಭಿವೃದ್ದಿ ಕೈಗೆತ್ತಿಿಕೊಳ್ಳಲಾಗಿದೆ. ಸಿಂಧನೂರು-ವಳಬಳ್ಳಾಾರಿ-ಹೆಡಗಿನಾಳ ರಸ್ತೆೆ ಅಗಲೀಕರಣ ಹಾಗೂ ಡಾಂಬರೀಕರಣ, ದಡೇಸೂಗೂರು ಕ್ರಾಾಸ್-ಅಲಬನೂರು, ಸೋಮಲಾಪುರ-ಅಂಬಾಮಠ ರಸ್ತೆೆ, ಅರಗಿನಮರದಿಂದ 5 ನಂಬರ್ ಕ್ಯಾಾಂಪ್, ಹಾಗೂ ಈರಣ್ಣ ಕ್ಯಾಾಂಪ್ ರಸ್ತೆೆಗಳ ಅಭಿವೃದ್ದಿಗೆ ಪ್ರಸ್ತಾಾವನೆ ಸಲ್ಲಿಸಲಾಗಿದೆ. ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು. 13-14 ಕೋಟಿ ರೂ.ಗಳನ್ನು 36 ಸಮುದಾಯ ಭವನಗಳ ನಿರ್ಮಾಣಕ್ಕೆೆ ನೀಡಲಾಗಿದೆ. ತಾಲೂಕಿನ 13 ಖಾಸಗಿ ಪದವಿ ಕಾಲೇಜುಗಳಿಗೆ 1.5 ಕೋಟಿ ವೆಚ್ಚದಲ್ಲಿ ಸ್ಮಾಾರ್ಟ್ಕ್ಲಾಾಸ್ ಉಪಕರಣ ನೀಡಲಾಗುತ್ತಿಿದೆ. 17 ಕುಡಿಯುವ ನೀರಿನ ಕೆರೆ ಅಭಿವೃದ್ದಿಗೆ ಪ್ರಸ್ತಾಾವನೆ ಕಳುಹಿಸಲಾಗಿದೆ. 9-10 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಒಬಿಸಿ ವಸತಿ ನಿಲಯಗಳಿಗೆ ಪೀಠೋಪಕರಣ, ಕಂಪ್ಯೂೂಟರ್ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಿಸಲಾಗುವುದು. ಶಿಕ್ಷಣಕ್ಕೆೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಕೆಕೆಆರ್ಡಿಬಿಯಿಂದ 81 ಶಾಲೆಗಳ ದುರಸ್ಥಿಿ ಕೆಲಸ ಕೈಗೆತ್ತಿಿಕೊಳ್ಳಲಾಗುತ್ತಿಿದೆ ಎಂದು ಮಾಹಿತಿ ನೀಡಿದರು.
ತುಂತುರು ನೀರಾವರಿ:
ವಳಬಳ್ಳಾಾರಿ ಚನ್ನಬಸವೇಶ್ವರ ಏತ ನೀರಾವರಿ ಯೋಜನೆಗೆ ಕೇಂದ್ರ ಸರಕಾರ 73 ಕೋಟಿ ವೆಚ್ಚದಲ್ಲಿ ತುಂತುರು ಹನಿ ನೀರಾವರಿ ಯೋಜನೆ ಜಾರಿ ಮಾಡಿದೆ. ಇದನ್ನು ಅಲಬನೂರು ಗ್ರಾಾಮದ 4 ಸಾವಿರ ಎಕರೆ ಪ್ರದೇಶಕ್ಕೆೆ ಮಾಡಲಾಗುತ್ತಿಿದೆ. ಈಗಾಗಲೇ ಡಿಪಿಆರ್ ಸಿದ್ದವಾಗಿದ್ದು, 4 ತಿಂಗಳಲ್ಲಿ ಕೆಲಸ ಆರಂಭವಾಗಲಿದೆ ಎಂದು ತಿಳಿಸಿದರು.
ಪ್ರಗತಿಪಥ:
ಕೆಕೆಆರ್ಡಿಬಿಯಿಂದ ಪ್ರಗತಿಪಥ ಯೋಜನೆಯಡಿ ಗ್ರಾಾಮೀಣಾಭಿವೃದ್ದಿ ಇಲಾಖೆಯಿಂದ ಪ್ರತಿ ತಾಲೂಕಿಗೆ 70ರಿಂದ 100 ಕಿ.ಮೀ ರಸ್ತೆೆ ಅಭಿವೃದ್ದಿಗೆ ಅವಕಾಶ ಕಲ್ಪಿಿಸಲಾಗಿದ್ದು, ಗ್ರಾಾಮೀಣ ರಸ್ತೆೆಗಳ ಅಭಿವೃದ್ದಿಗೆ ಪ್ರಸ್ತಾಾವನೆ ಸಲ್ಲಿಸಲಾಗಿದೆ ಎಂದರು.
ಕೇಂದ್ರ ಸರಕಾರ ಪ್ರಸಾದ-2 ಯೋಜನೆಯಡಿ ಅಂಬಾಮಠ ಸೇರ್ಪಡೆಗೆ 175 ಕೋಟಿ ವೆಚ್ಚದ ಪ್ರಸ್ತಾಾವನೆಯನ್ನು ಪ್ರವಾಸೋದ್ಯಮ ಇಲಾಖೆ ಮೂಲಕ ಕೇಂದ್ರಕ್ಕೆೆ ಸಲ್ಲಿಸಲಾಗಿದೆ. ಪೊಲೀಸ್ ಠಾಣೆ, ಆಸ್ಪತ್ರೆೆ, ಬಯಲು ರಂಗಮಂದಿರ, 5 ಸಾವಿರ ಜನ ಊಟದ ಹಾಲ್, ಸಾವಿರ ಜನರಿಗೆ ವಸತಿ ಛತ್ರಗಳು, ಲೇಕ್ ಅಭಿವೃದ್ದಿ, ತೇರು ಬೀದಿ ಅಭಿವೃದ್ದಿ ಸೇರಿದಂತೆ ಇತರ ಅಂಶಗಳನ್ನು ಅಳವಡಿಸಲಾಗಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವಂತೆ ಕೊಪ್ಪಳ ಹಾಗೂ ರಾಯಚೂರು ಲೋಕಸಭಾ ಸದಸ್ಯರಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.
ಜೋಳ ಖರೀದಿಗೆ ಸಂಬಂಧಿಸಿದಂತೆ ರೈತರಿಗೆ ಯಾವುದೇ ತೊಂದರೆಗಳಾಗದಂತೆ ಕ್ರಮ ವಹಿಸಲಾಗಿದೆ. ಈಗಾಗಲೇ ಕೃಷಿ, ಆಹಾರ ಸಚಿವರನ್ನು ಒಳಗೊಂಡು ಸಂಪುಟ ಉಪ ಸಮಿತಿ ಸಭೆ ಮಾಡಿಸಿ ಮುಂಜಾಗ್ರತವಾಗಿಯೇ ಖರೀದಿ ಕೇಂದ್ರ ಆರಂಭ, ನೊಂದಣಿ, ಗೋಣಿ ಚೀಲ ವ್ಯವಸ್ಥೆೆ, ಖರೀದಿ ಸೇರಿದಂತೆ ಈಗಲೇ ದಿನಾಂಕಗಳನ್ನು ನಿಗದಿಗೊಳಿಸಲಾಗಿದೆ ಎಂದು ತಿಳಿಸಿದರು.
ನಗರಸಭೆ ಸ್ಥಾಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿಿ, ನಗರ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಖಾಜಿ ಮಲಿಕ್, ಮುಖಂಡ ಪ್ರಭುರಾಜ ಇದ್ದರು.
ನಾನು ಸಚಿವ ಸ್ಥಾಾನದ ಆಕಾಂಕ್ಷಿ:
ನವೆಂಬರ್ ಕ್ರಾಾಂತಿ ಏನೂ ಇಲ್ಲ. ಮುಖ್ಯಮಂತ್ರಿಿಗಳ ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನವೆಂಬರ್ ಕೊನೆಗೆ ಇಲ್ಲವೇ ಡಿಸೆಂಬರ್ನಲ್ಲಿ ಮಂತ್ರಿಿಮಂಡಲ ಪುನರ್ ರಚನೆ ಮಾಡುವದಾಗಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾಾರೆ. ಮೊದಲೇ ತಮಗೆ ಸಚಿವ ಸ್ಥಾಾನ ಸಿಗಬೇಕಿತ್ತು. ತಾವು ಪ್ರಬಲ ಆಕಾಂಕ್ಷಿಗಳಾಗಿದ್ದು, ಪುನರ್ ರಚನೆ ವೇಳೆ ತಮಗೆ ಅವಕಾಶ ಸಿಗಲಿದೆ ಎನ್ನುವ ವಿಶ್ವಾಾಸ ವ್ಯಕ್ತಪಡಿಸಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾಹಿತಿ ತಾಲೂಕಿನ 15 ಕ್ಯಾಾಂಪುಗಳು ಕಂದಾಯ ಗ್ರಾಾಮಗಳಾಗಿ ಅಧಿಸೂಚನೆ
