ಸುದ್ದಿಮೂಲ ವಾರ್ತೆ ಸಿಂಧನೂರು, ಜ.01:
ಕಲುಷಿತ ರಾಜಕಾರಣದ ಮಧ್ಯೆೆಯೂ ಮೌಲ್ಯಗಳಿಗೆ ಪ್ರತಿಬಿಂಬವಾಗಿರುವ ಶಾಸಕ ಹಂಪನಗೌಡ ಬಾದರ್ಲಿ ಸಜ್ಜನಿಕೆ ವ್ಯಕ್ತಿಿತ್ವದ ರಾಜಕಾರಣಿ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ, ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಾಧ್ಯಕ್ಷ ಶಂಕರ ಬಿದರಿ ಬಣ್ಣಿಿಸಿದರು.
ನಗರದ ಟೌನ್ಹಾಲ್ನಲ್ಲಿ ಗುರುವಾರ ಶಾಸಕ ಹಂಪನಗೌಡರ 75ನೇ ಜನ್ಮದಿನ ಹಾಗೂ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಗ್ರಾಾಮೀಣ ಭಾಗದ ಕಾಲೇಜು ವಿದ್ಯಾಾರ್ಥಿಗಳಿಗಾಗಿಯೇ ವಿಶೇಷ ಬಸ್ ಸೌಲಭ್ಯ ಒದಗಿಸಿದ್ದಕ್ಕಾಾಗಿ ಹಮ್ಮಿಿಕೊಂಡಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸದಾ ಜನರೊಂದಿಗೆ ಇದ್ದು, ಅವರ ಆಶೋತ್ತರಗಳನ್ನು ಈಡೇರಿಸುವ ವ್ಯಕ್ತಿಿ ಮಾತ್ರ ಜನರ ಮನಸ್ಸಿಿನಲ್ಲಿ ಸದಾ ಉಳಿಯುತ್ತಾಾನೆ. ಐದು ಬಾರಿ ಶಾಸಕರಾಗಿ ಹಂಪನಗೌಡ ಬಾದರ್ಲಿ ಕ್ಷೇತ್ರದ ಜನತೆಯ ನಾಡಿಮಿಡಿತ ಅರಿತು ಕೆಲಸ ಮಾಡಿದ್ದಾಾರೆ. ಇಂಥ ರಾಜಕಾರಣಿಗಳಿಗೆ ಅಧಿಕಾರದ ಅವಕಾಶ ಸಿಗಬೇಕು ಎಂದರು.
ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಹಂಪನಗೌಡ ಬಾದರ್ಲಿ ಹಾಗೂ ನಾನು ಒಂದು ಕಾಲದಲ್ಲಿ ರಾಜಕೀಯ ವಿರೋಧಿಗಳು, ಕೆಲವೊಮ್ಮೆೆ ಒಂದೇ ಪಕ್ಷದಲ್ಲಿದ್ದೆೆವು. ರಾಜಕೀಯವೇ ಬೇರೆ, ಸ್ನೇಹ, ಆತ್ಮೀಯತೆಯೇ ಬೇರೆ. ರಾಜಕೀಯವಾಗಿ ಬೆಳೆಯಲು ದೈವ ಬಲ ಬೇಕು. ಅದು ಹಂಪನಗೌಡರಿಗಿದೆ. ಅವರ ಅಧಿಕಾರಾವಧಿಯಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದಾಾರೆ. ಪ್ರಸ್ತುತ ದಿನಗಳಲ್ಲಿ ರಾಜಕೀಯ ಕೆಳಮಟ್ಟಕ್ಕೆೆ ಕುಸಿಯುತ್ತಿಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಳಬಳ್ಳಾಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗಸ್ವಾಾಮೀಜಿ, ಮೂರಮೈಲ್ಕ್ಯಾಾಂಪ್ನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಜೆಡಿಯು ರಾಜ್ಯಾಾಧ್ಯಕ್ಷ ಮಹಿಮಾ ಪಟೇಲ್, ಮಾಜಿ ಸಚಿವ ಅಮರೇಗೌಡ ಬಯ್ಯಾಾಪುರ, ಮಸ್ಕಿಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಮುಖಂಡರಾದ ಆರ್.ತಿಮ್ಮಯ್ಯ ನಾಯಕ, ಅಶೋಕ ಭೂಪಾಲ್, ಡಾ.ಬಿ.ಎನ್.ಪಾಟೀಲ್, ವಿಕಾಸ ಬ್ಯಾಾಂಕ್ನ ವಿಶ್ವನಾಥ.ಚ.ಹಿರೇಮಠ, ಎಂ.ಕಾಳಿಂಗಪ್ಪ ವಕೀಲರು, ಬಸವಂತರಾಯ ಕುರಿ ಇತರರು ಇದ್ದರು.
ಶಾಸಕ ಹಂಪನಗೌಡ ಬಾದರ್ಲಿಗೆ 75 ಜನ್ಮದಿನದ ಸಂಭ್ರಮ : ಕೃತಜ್ಞತಾ ಸಮಾರಂಭ ಬಾದರ್ಲಿ ಸಜ್ಜನಿಕೆ ವ್ಯಕ್ತಿಿತ್ವದ ರಾಜಕಾರಣಿ – ಬಿದರಿ

