ಸುದ್ದಿಮೂಲ ವಾರ್ತೆ
ಮೈಸೂರು, ಜೂ.7: ಬಡವರಿಂದ ಲಂಚ ತೆಗೆದುಕೊಳ್ಳುತ್ತಿರಲ್ಲಾ.. ನಿಮಗೆ ನಾಚಿಕೆ ಆಗಲ್ವಾ?, ನೀವೇನು ಮನುಷ್ಯರ?..
ಹೀಗೆ ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ಗೌಡರು ಬಡವರಿಂದ ಕೆಲಸ ಮಾಡಿಕೊಡಲು ಕಂದಾಯ ನಿರೀಕ್ಷಕರು ಲಂಚ ಪಡೆದ ಆರೋಪ ಹಿನ್ನಲೆಯಲ್ಲಿ ತರಾಟೆಗೆ ತೆಗೆದುಕೊಂಡರು.

ಹುಣಸೂರು ತಾಲೂಕು ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾಗ ಕಸಬಾ ಹೋಬಳಿ ಕಂದಾಯ ನಿರೀಕ್ಷಕ ಸುನೀಲ್ ಅವರಿಗೆ ಇನ್ನೊಂದು ಸಲ ಕಂಪ್ಲೆಂಟ್ ಬಂದರೆ ಸರಿ ಇರಲ್ಲ ಎಂದು ಎಚ್ಚರಿಕೆ ನೀಡಿದ ಶಾಸಕರು, ನಿಮಗೆ ಹೇಳುವವರು ಕೇಳುವವರು ಯಾರು ಇಲ್ಲವಾ ?ಬಡವರ ಬಳಿ ಲಂಚ ತೆಗೆದುಕೊಂಡರೆ ನಿಮಗೆ ಒಳ್ಳೆಯದು ಆಗುತ್ತಾ ? ಸರ್ಕಾರಿ ಸಂಬಳ ತಗೋತೀರಾ ಗೊತ್ತಾಗೋಲ್ವಾ..? ಎಂದು ಸಾರ್ವಜನಿಕರ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.