ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.07:
ಜನವರಿ 1 ರ ಸಂಜೆ ನಡೆದ ಗುಂಡಿನ ದಾಳಿ ಮಿಸ್ೈರ್ ಅಲ್ಲ, ಪೂರ್ವಯೋಜಿತವಾಗಿದ್ದು ಶಾಸಕ ನಾರಾ ಭರತರೆಡ್ಡಿಿ ಮತ್ತು ಸತೀಶ್ ರೆಡ್ಡಿಿಯನ್ನು ಕೂಡಲೇ ಬಂಧಿಸಬೇಕು ಎಂದು ಶಾಸಕ ಜಿ. ಜನಾರ್ಧನರೆಡ್ಡಿಿ ಅವರು ಆಗ್ರಹಿಸಿದ್ದಾಾರೆ.
ಸುದ್ದಿಗಾರರ ಜೊತೆ ಬುಧವಾರ ಮಾತನಾಡಿದ ಅವರು, ಒಂದು ವೀಡಿಯೋವನ್ನು ಬಿಡುಗಡೆ ಮಾಡಿ, ಯುವ ಕಾಂಗ್ರೆೆಸ್ಸಿಿಗ ರಾಜಶೇಖರರೆಡ್ಡಿಿ ಅವರ ಹತ್ಯೆೆ ಉದ್ದೇಶ ಪೂರ್ವಕವಾಗಿ ನಡೆದಿದೆ. ಅಷ್ಟೇ ಅಲ್ಲ, ನಾರಾ ಭರತರೆಡ್ಡಿಿ ಅವರ ಆಪ್ತ ಚಾನಾಳ್ ಶೇಖರ್ ಅವರನ್ನೂ ಈ ಗಲಾಟೆಯಲ್ಲಿ ಹತ್ಯೆೆ ಮಾಡಿ ನನ್ನ ತಲೆಗೆ ಕಟ್ಟುವ ಷಡ್ಯಂತ್ರ ನಡೆದಿತ್ತು. ರೆಡ್ಡಿಿಗಳು ಮತ್ತು ಲಿಂಗಾಯಿತರು ಬಿಜೆಪಿಯ ಜೊತೆಗಿದ್ದು, ನಮಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿತ್ತು ಎಂದು ಹೇಳಿದರು.
ಶಾಸಕ ನಾರಾ ಭರತರೆಡ್ಡಿಿ ಅವರು ಗಲಾಟೆಯ ಸಂದರ್ಭದಲ್ಲಿ ಗಾಂಜಾ ಸೇವಿಸಿದ್ದರೋ, ಮದ್ಯ ಸೇವಿಸಿದ್ದರೋ, ಗೊತ್ತಿಿಲ್ಲ. ಶಾಸಕ ನಾರಾ ಭರತರೆಡ್ಡಿಿ ಹಾಗೂ ಆಪ್ತ ಸತೀಶ್ ರೆಡ್ಡಿಿ ನನ್ನನ್ನು ಹತ್ಯೆೆ ಮಾಡಲು ವ್ಯವಸ್ಥಿಿತ ಸಂಚು ರೂಪಿಸಿದ್ದರು. ಗಲಾಟೆಯಲ್ಲಿ ಸತೀಶ್ ರೆಡ್ಡಿಿಯ ಗನ್ ಮ್ಯಾಾನ್, ಪೋಲೀಸ್ರು ನಡೆಸಿದ ಲಾಠಿ ಚಾರ್ಜ್ ನೇರವಾಗಿ ರಾಜಶೇಖರ್ ರೆಡ್ಡಿಿ ಅವರಿಗೆ ಗುಂಡು ತಗುಲಿ, ಸಾವಾಗಿದೆ. ಈ ಘಟನೆಯಲ್ಲಿ ಶಾಸಕ ನಾರಾ ಭರತರೆಡ್ಡಿಿ ಆಪ್ತ ಚಾನಾಳ ಶೇಖರ್ ಅವರ ಹತ್ಯೆೆಯ ಸಂಚು ನಡೆದಿದ್ದು, ಆ ಪ್ರಯತ್ನ ವಿಲವಾಯಿತು. ಕಾರಣ ಶಾಸಕ ಮತ್ತು ಆತನ ಆಪ್ತರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಬಿ. ಶ್ರೀರಾಮುಲು ಅವರು, ಗಲಭೆಯಲ್ಲಿ ಮೊದಲನೇ ಆರೋಪಿ ಆಗಿರುವ ನಾರಾ ಭರತರೆಡ್ಡಿಿಯನ್ನು ಪಕ್ಕದಲ್ಲಿ ಕೂಡಿಸಿಕೊಂಡು ಮುಖ್ಯಮಂತ್ರಿಿ, ಉಪ ಮುಖ್ಯಮಂತ್ರಿಿ ಮಾತನಾಡಿರುವುದು ತನಿಖೆಯ ದಿಕ್ಕನ್ನು ತಪ್ಪಿಿಸುವುದಾಗಿದೆ ಎಂದು ಟೀಕಿಸಿದರು.
ಮಾಜಿ ಸಂಸದರಾದ ಸಣ್ಣ ಕೀರಪ್ಪ, ಮಂಡಲ ಅಧ್ಯಕ್ಷ ವೆಂಕಟರಮಣ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಎಸ್. ದಿವಾಕರ್ ಇನ್ನಿಿತರರು ಈ ಸಂದರ್ಭದಲ್ಲಿದ್ದರು.

