ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.30:
ಸುತ್ತೂರಿನ ಜಗದ್ಗುರು ಶ್ರೀ ಶಿವರಾತ್ರಿಿ ದೇಶಿಕೇಂದ್ರ ಮಹಾಸ್ವಾಾಮಿಗಳು ಮಂಗಳವಾರ ನಗರಕ್ಕೆೆ ಆಗಮಿಸಿದರು.
ಶ್ರೀಗಳನ್ನು ಗುರಮಠಕಲ್ ಶಾಸಕ ಶರಣಗೌಡ ಕಂದಕೂರು ತಮ್ಮ ನಿವಾಸದಲ್ಲಿ ಭಕ್ತಿಿಯಿಂದ ಸ್ವಾಾಗತಿಸಿ, ಪಾದಪೂಜೆ ನೆರವೇರಿಸಿದರು. ಬಳಿಕ ಹಿತೋಪದೇಶ ನೀಡಿದ ಶ್ರೀಗಳು, ನಾಡಿನ ಸಮಸ್ತ ರೈತ ಕುಲವನ್ನು ಭಗವಂತ ಸುಭಿಕ್ಷವಾಗಿಡಲಿ, ರೈತನ ಬದುಕು ಹಸನಾದರೆ ಮಾತ್ರ ನಾಡಿಗೆ ಒಳಿತಾಗಲಿದೆ ಎಂದು ನುಡಿದರು.
ಕಲ್ಯಾಾಣ ಕರ್ನಾಟಕ ಪ್ರದೇಶ ಸಂಪತ್ಭರಿತ ನಾಡಾಗಿದೆ. ಉತ್ತಮ ಮಳೆಬೆಳೆಯಾದರೆ, ಅನ್ನದಾತರು ಸಂತಸದಿಂದ ಇರಲಿದ್ದಾರೆ. ಈ ಭಾಗಕ್ಕೆೆ ನಾವು ಆಗಾಗ ಭೇಟಿ ನೀಡಿದ್ದು ಸಂತಸವುಂಟು ಮಾಡಿದೆ ಎಂದು ಹೇಳಿದರು.
ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆಬೆಳೆಯ ಬಗ್ಗೆೆ ಮಾಹಿತಿ ನೀಡಿದರು. ಗಿರಿಜಿಲ್ಲೆಗೆ ಶ್ರೀಗಳು ಆಗಮಿಸಿ, ಆಶಿರ್ವಾದ ಮಾಡಿದ್ದು, ನಮ್ಮೆೆಲ್ಲರ ಸೌಭಾಗ್ಯವಾಗಿದೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಜಿಲ್ಲಾ ವಕ್ತಾಾರ ಮಲ್ಲನಗೌಡ ಹಳಿಮನಿ ಕೌಳೂರು, ಮಲ್ಲಿಕಾರ್ಜುನ ಅರುಣಿ, ಮಲ್ಲನಗೌಡ ಹೊಸಳ್ಳಿಿ, ಶಾಂತರಡ್ಡಿಿ ಕೋಟಗೇರಾ, ಸಾಹೇಬಗೌಡ ಗೌಡಗೇರಾ ಇದ್ದರು.

