ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.04:
ರಾಜ್ಯ ಮತ್ತು ಕೇಂದ್ರ ಸರಕಾರದ ಹಲವು ಯೋಜನೆಗಳು ಮಹಿಳೆಯರು ಸದುಪಯೋಗ ಪಡೆದುಕೊಳ್ಳಬೇಕು. ಹೊಲಿಗೆ ಯಂತ್ರಗಳಿಂದ ಸ್ವಾಾವಲಂಬಿ ಬದುಕು ಕಟ್ಟಿಿಕೊಳ್ಳಬೇಕು ಎಂದು ಶಾಸಕಿ ಕರೆಮ್ಮ ಗೋಪಾಲಕೃಷ್ಣ ಹೇಳಿದರು.
ಶಾವಂತಗೇರಾ ಗ್ರಾಾಪಂ 2023-24ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ ದಿವ್ಯಾಾಂಗರಿಗೆ ಶಾಸಕಿ ಕರೆಮ್ಮ ಗೋಪಾಲಕೃಷ್ಣ ತಾಪಂ ಸಭಾಂಗಣದಲ್ಲಿ ಮಂಗಳವಾರ 20 ಹೊಲಿಗೆ ಯಂತ್ರಗಳು ವಿತರಣೆ ಮಾಡಿ ಮಾತನಾಡಿದರು.
ಬಟ್ಟೆೆಗಳು ಹೊಲಿಯುವುದರಿಂದ ಒಂದು ಕುಟುಂಬ ನಿರ್ವಹಣೆ ಮಾಡಲು ಅನುಕೂಲವಾಗಲಿದೆ. ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಅನೇಕ ಸಾಧನೆ ಮಾಡಿದ ಹಲವು ಉದಾರಣೆಗಳು ಇವೆ. ಅದರಂತೆ ನೀವು ಸ್ವಾಾವಲಂಬಿ ಜೀವನ ನಡೆಸಲು ಹೊಲಿಗೆ ಯಂತ್ರಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕರಾದ ಬಳಿಕೆ ಮಹಿಳೆಯರು ಬದುಕು ಕಟ್ಟಿಿಕೊಳ್ಳಲು ಹಲವು ಯೋಜನೆಗಳು ರೂಪಿಸಲಾಗಿದೆ. ಯಾವುದೇ ಯೋಜನೆಗಳು ಬಂದರೂ, ಯಾರಿಗೂ ಹೆದರದೆ ಮುಂದೆ ಬಂದು ಅಂತಹ ಯೋಜನೆಗಳು ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಹೇಳಿದರು. ಎನ್ಆರ್ಎಲ್ಎಂ ಮೂಲಕ ಮಹಿಳಾ ಸ್ವಸಹಾಯ ಗುಂಪುಗಳು ಹಲವು ಯೋಜನೆಗಳು ಪಡೆದುಕೊಂಡು ಒಂದೊಂದು ಸ್ಥಾಾನದಲ್ಲಿದ್ದು, ಅವರೇ ಸ್ವಂತ ದುಡಿಮೆಯಿಂದ ಬದುಕು ಕಟ್ಟಿಿಕೊಂಡಿದ್ದಾರೆ. ಯಾವುದೇ ಯೋಜನೆಗಳು ಇದ್ದರೂ ಕಟ್ಟಕಡೆಯ ವ್ಯಕ್ತಿಿಗೆ ಸೌಲಭ್ಯ ಸಿಗಬೇಕು ಎಂಬ ಕಾರಣಕ್ಕೆೆ ಸರಕಾರ ಮಹತ್ವ ವಹಿಸಿದೆ ಎಂದು ಹೇಳಿದರು.
ಗ್ರಾಾಪಂ ಮೂಲಕ ಬರುವಂತಹ ಸೌಲಭ್ಯಗಳು ಅರ್ಹ ಲಾನುಭವಿಗಳು ಪಡೆದುಕೊಳ್ಳಬೇಕು. ಇನ್ನುಮುಂದೆ ಗ್ರಾಾಪಂ ಅಧಿಕಾರಿಗಳು 15ನೇ ಹಣಕಾಸು ಯೋಜನೆಯಡಿ ಮಹಿಳೆಯರಿಗೆ ಸಿಗಬೇಕಾದಂತಹ ಸೌಲಭ್ಯಗಳು ಒದಗಿಸುವ ಪ್ರಮಾಣಿಕ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರಕಾರದ ಸೌಲಭ್ಯಕ್ಕಾಾಗಿ ಅರ್ಜಿ ಸಲ್ಲಿಸಿದ ಮಹಿಳೆಯರು ನೇರವಾಗಿ ಕಚೇರಿಗೆ ಬಂದು ನನ್ನ ಸಂಪರ್ಕಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅರಕೇರಾ ತಾಲೂಕ ನೋಡಲ್ ಅಧಿಕಾರಿ ರಾಜೇಂದ್ರ ಕುಮಾರ, ತಹಶೀಲ್ದಾಾರ ನಾಗಮ್ಮ ಕಟ್ಟಿಿಮನಿ, ತಾಪಂ ಇಒ ಬಸವರಾಜ ಹಟ್ಟಿಿ, ಅರಕೇರಾ ತಹಶೀಲ್ದಾಾರ ಅಮರೇಶ ಬಿರಾದಾರ, ಪುರಸಭೆ ಮುಖ್ಯಾಾಧಿಕಾರಿ ಕೆ.ಹಂಪಯ್ಯ, ಸಮಾಜ ಕಲ್ಯಾಾಣಾಧಿಕಾರಿ ಡಿ.ರಾಜಕುಮಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಸರಕಾರದ ಹಲವು ಯೋಜನೆಗಳು ಮಹಿಳೆಯರು ಸದ್ಬಳಕೆ ಮಾಡಿಕೊಳ್ಳಿ ಹೊಲಿಗೆ ಯಂತ್ರಗಳಿಂದ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಿ : ಶಾಸಕಿ ಕರೆಮ್ಮ ಗೋಪಾಲಕೃಷ್ಣ

