ಸುದ್ದಿಮೂಲ ವಾರ್ತೆ ಜಾಲಹಳ್ಳಿ, ಜ.03:
ಆರೋಗ್ಯ ಸಂಪತ್ತಿಿನ ಮುಂದೆ ಯಾವ ಸಂಪತ್ತು ಸಾಟಿ ಇಲ್ಲ ಎಂದು ಶಾಸಕಿ ಕರಿಯಮ್ಮ ಜಿ ನಾಯಕ ಅಭಿಪ್ರಾಾಯ ಪಟ್ಟರು.
ಅವರು ಶುಕ್ರವಾರ ಸಂಜೆ ಗ್ರಾಾಮದ ಸಮುದಾಯ ಆರೋಗ್ಯ ಕೇಂದ್ರ 2023-2024 ಸಾಲಿನ ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಮಂಡಳಿಯ 5 ಕೋಟಿ 34 ಲಕ್ಷ ರೂ ಅಂದಾಜು ವೆಚ್ಚದ 30 ಬೆಡ್ ನಿಂದ 50 ಹೆಚ್ಚುವರಿ ಬೆಡ್ ಆಸ್ಪತ್ರೆೆ ಕಟ್ಟಡದ ಕಾಮಗಾರಿಗೆ ಅಡಿಗಲ್ಲು ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ಪ್ರತಿಯೊಬ್ಬ ನಾಗರಿಕರಿಗೆ ಆರೋಗ್ಯವೇ ಭಾಗ್ಯ ಆರೋಗ್ಯ ಚನ್ನಾಾಗಿ ಇದ್ದರೆ ಎಲ್ಲಾ ಕೆಲಸ ಮಾಡಲು ಸಾಧ್ಯ, ಆರೋಗ್ಯ ಸಂಪತ್ತಿಿನ ಮುಂದೆ ಯಾವುದೇ ಸಂಪತ್ತು ಸಾಟಿ ಇಲ್ಲಾ.
ಇವತ್ತು ಆರೋಗ್ಯ ಕಾಪಾಡಿಕೊಳ್ಳಲು ಬಹಳಷ್ಟು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ತಾಂತ್ರಿಿಕತೆ ಬೆಳೆದಿದೆ.
ಗ್ರಾಾಮೀಣ ಭಾಗದಲ್ಲಿ ಜನರ ಎಲ್ಲಾ ಕಾಯಿಲೆಗಳಿಗೆ ಖಾಸಗಿ ಆಸ್ಪತ್ರೆೆ ಗಿಂತ ಕಡೆಮೆ ಏನು ಇಲ್ಲಾ ಎನ್ನುವಂತೆ ಸರ್ಕಾರದ ಆಸ್ಪತ್ರೆೆ ಗಳಲ್ಲಿ ಚಿಕಿತ್ಸೆೆ ಕೊಡುತ್ತಾಾರೆ, ಪ್ರತಿಯೊಬ್ಬ ನಾಗರಿಕರು ಈ ಆಸ್ಪತ್ರೆೆಯ ಸೌಲಭ್ಯಗಳನ್ನು ಪಡೆಯಬೇಕು, ನಾನು ನನ್ನ ಅನುದಾನವನ್ನು ಆರೋಗ್ಯ ಮತ್ತು ಶಿಕ್ಷಣ ಕ್ಕೆೆ ಹೆಚ್ಚು ಮೀಸಲಿಟ್ಟಿಿದ್ದೇನೆ.
ಗಬ್ಬೂರು ಆಸ್ಪತ್ರೆೆ ನಿರ್ಮಾಣಕ್ಕೆೆ 10 ಕೋಟಿ, ಮುಷ್ಟೂರು ಆಸ್ಪತ್ರೆೆ ನಿರ್ಮಾಣ 5 ಕೋಟಿ ಹಣ ಕೊಟ್ಟಿಿದ್ದೇನೆ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಮುಖ್ಯ ವೈದ್ಯಧಿಕಾರಿ ಡಾ. ಆರ್.ಎಸ್ ಹುಲಮನಿ ಗೌಡ ಮಾತನಾಡಿ ನಮ್ಮ ಇಲಾಖೆಯ ಸೇವೆ ಯಾವಾಗಲೂ ಇರುತ್ತದೆ ನಮ್ಮ ಇಲಾಖೆಯ ಸೇವೆ ಯನ್ನು ಜನರು ಉಪಯೋಗ ಪಡೆಯಬೇಕು.
ಹನುಮಂತಪ್ಪ ಆಲ್ಕೋೋಡ ಜಾಲಹಳ್ಳಿಿ ಆಸ್ಪತ್ರೆೆಯನ್ನು ಸಮುದಾಯ ಆರೋಗ್ಯ ಕೇಂದ್ರ ಎಂದು ಮೇಲ್ದರ್ಜೆಗೆ ಕಾರಣಿಭೂತರಾದರೆ ಶಾಸಕಿ ಕರಿಯಮ್ಮ ನವರು 30 ಹಾಸಿಗೆಯಿಂದ 50 ಹೆಚ್ಚುವರಿ ಹಾಸಿಗೆ ಆಸ್ಪತ್ರೆೆ ಮೇಲ್ದರ್ಜೆಗೆ ಮುಖ್ಯ ಕಾರಣರಾಗಿದ್ದಾರೆ ಎಂದು ಮಾತನಾಡಿದರು.
ಇದೆ ಸಂದರ್ಭದಲ್ಲಿ ವಕೀಲರಾದ ಬಸನಗೌಡ ದೇಸಾಯಿ, ಸಾಬಣ್ಣ ಕಮ್ಮಲದಿನ್ನಿಿ ಮಾತನಾಡಿದರು.
ವೇದಿಕೆಯ ಮೇಲೆ ತಾಲೂಕು ವೈದ್ಯಧಿಕಾರಿಯಾದ ಡಾ// ಬನದೇಶ, ರಂಗಣ್ಣ ಯರಕಮಟ್ಟಿಿ ಉಪಸ್ಥಿಿತರಿದ್ದರು, ಕಾರ್ಯಕ್ರಮದ ನಿರೂಪಣೆ, ಸ್ವಾಾಗತ ಭೀಮಣ್ಣ ಮಾಡಿದರು.
ಆರೋಗ್ಯ ರಕ್ಷಾಾ ಸಮಿತಿ ಸದಸ್ಯರಾದ ಭೀಮರತಿ, ಹುಸೇನ ಬಾಷಾ ಆರತಿ (ಬೋದ್) ಇದ್ದರು.
ಜಾಲಹಳ್ಳಿಯಲ್ಲಿ 50 ಹಾಸಿಗೆ ಕಟ್ಟಡ ಕಾಮಗಾರಿಗೆ ಅಡಿಗಲ್ಲು ಆರೋಗ್ಯ ಸಂಪತ್ತಿನ ಮುಂದೆ ಯಾವ ಸಂಪತ್ತು ಸಾಟಿ ಇಲ್ಲ : ಶಾಸಕಿ ಕರಿಯಮ್ಮ

