ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.28:
ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಮಂಡಳಿ ವತಿಯಿಂದ ಕ್ಷೇತ್ರಕ್ಕೆೆ 6 ಕರ್ನಾಟಕ ಪಬ್ಲಿಿಕ್ ಶಾಲೆ (ಕೆಪಿಎಸ್) ಮುಜೂರಾಗಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭವಾಗಲಿದೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.
ತಾಲ್ಲೂಕಿನ ಗೋವೇರಹಳ್ಳಿಿ ಗ್ರಾಾಮದ ಸರಕಾರಿ ಪ್ರಾಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌೌಢಶಾಲೆಯ ಹಿರಿಯ ವಿದ್ಯಾಾರ್ಥಿಗಳ ಸಂಯುಕ್ತಾಾಶ್ರಯದಲ್ಲಿ ಆಯೋಜಿಸಿದ್ದ ಗುರು ನಮನ ಹಾಗೂ ಸ್ನೇಹ ಸಮ್ಮಿಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸ್ಥಳೀಯ ಸರಕಾರಿ ಶಾಲೆಗಳನ್ನು ಉನ್ನತೀಕರಿಸಿ ಎಲ್.ಕೆ.ಜಿ ಯಿಂದ ಪಿಯುಸಿವರೆಗೂ ಉಚಿತ ಸಾರಿಗೆ, ಕಂಪ್ಯೂೂಟರ್ ತರಬೇತಿ, ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮವನ್ನು ಒಂದೇ ಸ್ಥಳದಲ್ಲಿ ಶಿಕ್ಷಣ ದೊರೆಯಲಿದೆ. ಈಗ ಅನುಮೋದನೆ ಗೊಂಡಿರುವ 6 ಶಾಲೆಯ ಜೊತೆಗೆ ಶಿಕ್ಷಣ ಸಚಿವರು 2 ಶಾಲೆ ಮಂಜೂರು ಮಾಡುವ ಭರವಸೆ ನೀಡಿದ್ದಾಾರೆ ಎಂದರು.
ಕೆ.ಎಸ್.ಆರ್.ಟಿ.ಸಿ. ಘಟಕ ವ್ಯವಸ್ಥಾಾಪಕಿ ಎಂ.ಮಂಜುಳಾ, ಎ.ಎಸ್.ಐ. ಎನ್.ರಾಜು, ರಾಜೇಂದ್ರ, ಮಡ್ಡಿಿ ನಾಗರಾಜ್, ಸಲೀಂ, ರಾಜೇಂದ್ರ, ಶಿಕ್ಷಣ ಪ್ರೇೇಮಿ ಹಾಗೂ ಗ್ರಾಾಮದ ಹಿರಿಯರಾದ ಟಪಾಲ್ ಗಣೇಶ್ ಅದ್ಯಕ್ಷತೆ ವಹಿಸಿದ್ದರು. ತೊಗರಿಕಟ್ಟಿಿ ಗ್ರಾಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ಯುವರಾಜ್ ನಾಯ್ಕ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಂ.ರಮೇಶ್, ವೈ.ಕೆಂಚಪ್ಪ, ಹಿರಿಯ ಪ್ರಾಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಟಿ.ಎಂ.ದಯಾನಂದ, ಎಂ.ಬಿ.ಶಿವಾಜಿ, ಡಿ.ರಾಮಣ್ಣ, ಭೋವಿ ಹನುಮಂತಪ್ಪ, ಊರಿನ ಹಿರಿಯರು ಹಾಗೂ ಗ್ರಾಾಮಸ್ಥರು, ಮತ್ತು ಸುತ್ತಮುತ್ತಲಿನ ಗ್ರಾಾಮಗಳ ಗ್ರಾಾಮಸ್ಥರು ಹಾಗೂ ಸಮಸ್ತ ಶಿಷ್ಯವೃಂದದವರು ಸೇರಿದಂತೆ ಆನೇಕರು ಭಾಗವಹಿಸಿದ್ದರು.
ರಾತ್ರಿಿಯವರೆಗೂ ವಿದ್ಯಾಾರ್ಥಿ ವಿದ್ಯಾಾರ್ಥಿನಿಯರಿಂದ ಹಾಗೂ ಹಳೆಯ ವಿದ್ಯಾಾರ್ಥಿಗಳಿಂದ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸ.ಹಿ.ಪ್ರಾಾ.ಶಾಲೆಯ ಹಾಗೂ ಸರಕಾರಿ ಪ್ರೌೌಡಶಾಲೆಯಲ್ಲಿ ಸೇವೆ ಸಲ್ಲಿಸಿದ ಎಲ್ಲಾಾ ನಿವೃತ್ತ ಶಿಕ್ಷಕರಿಗೂ ಹಾಗೂ ವರ್ಗಾವಣೆಗೊಂಡ ಶಿಕ್ಷಕರಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಸನ್ಮಾಾನಿಸಲಾಯಿತು.
ಮುಂದಿನ ಶೈಕ್ಷಣಿಕ ವರ್ಷದಿಂದ 6 ಕೆಪಿಎಸ್ ಶಾಲೆ ಆರಂಭ – ಶಾಸಕಿ ಲತಾ

