ಸುದ್ದಿಮೂಲ ವಾರ್ತೆ
ಸಿರುಗುಪ್ಪ,ಏ.18: ಸಿರುಗುಪ್ಪದ ಅಭಿವೃದ್ಧಿಯ ಹರಿಕಾರರೆಂದೆ ಹೆಸರು ಮಾಡಿದ ನಮ್ಮ ಹೆಮ್ಮೆಯ ಜನಪ್ರಿಯ ಶಾಸಕ ಎಂ.ಎಸ್.ಸೋಮಲಿಂಗಪ್ಪ ವಿಧಾನಸಭಾ ಚುನಾವಣೆಯ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಿಂದ ಆಗಮಿಸಿದ್ದ ಮುಖಂಡರು, ಹಿರಿಯರು, ತಾಯಂದಿರು, ಅಣ್ಣಂದಿರು, ಕಾರ್ಯಕರ್ತರು, ಅಭಿಮಾನಿಗಳು ಬಂದು ತಾಲ್ಲೂಕು ಕ್ರೀಡಾಂಗಣ ದಿಂದ ತಾಲ್ಲೂಕ ಆಡಳಿತ ಕಚೇರಿಯ ವರೆಗೆ 40% ಡಿಗ್ರಿ ಬಿಸಿಲನ್ನು ಲೆಕ್ಕಿಸದೆ ಕಾಲು ನಡುಗೆಯಲ್ಲೇ ಬಂದು ಆಶೀರ್ವಾದಿಸಿದ್ದಕ್ಕೆ ತಮಗೆಲ್ಲರಿಗೂ ಕೋಟಿ ಕೋಟಿ ಹೃದಯದ ಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದರು.