ಸುದ್ದಿಮೂಲ ವಾರ್ತೆ ಮುದ್ದೇಬಿಹಾಳ, ೆ.24:
ಸರ್ಕಾರಿ ವಸತಿಯುಕ್ತ ಪದವಿ ಕಾಲೇಜಿನ ವೆಬ್ಸೈಟ್ ಶಾಸಕ ಸಿ.ಎಸ್. ನಾಡಗೌಡ ಮಂಗಳವಾರ ಉದ್ಘಾಾಟನೆ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕ ನಾಡಗೌಡ, ಕಾಲೇಜಿಗೆ ಈಗಾಗಲೇ ಆಲಮಟ್ಟಿಿ ಮುಖ್ಯ ರಸ್ತೆೆಯಿಂದ ಸಂಪರ್ಕ ಕಲ್ಪಿಿಸುವ ಸಿಸಿ ರೋಡ್ ಮಾಡಲಾಗಿದ್ದು ಸಿ.ಟಿ ಬಸ್ ವ್ಯವಸ್ಥೆೆ ಕಲ್ಪಿಿಸಲಾಗಿದೆ. ಶೀಘ್ರವೇ ಸರ್ಕಾರದ ಜೊತೆಗೆ ಮಾತನಾಡಿ ಹಾಸ್ಟೆೆಲ್ಗಳನ್ನು ಬರುವ ಶೈಕ್ಷಣಿಕ ವರ್ಷದಿಂದ ಪ್ರಾಾರಂಭಿಸಲಾಗುವುದೆಂದು ತಿಳಿಸಿದರು.
ಕಾಲೇಜಿನ ಪ್ರಾಾಚಾರ್ಯ ಎಸ್.ಎಲ್.ಪಾಟೀಲ ಮಾತನಾಡಿ, ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಾರ್ಥಿಗಳಿಗೆ ಸನ್ 2026-27ನೇ ಸಾಲಿನ ಕಾಲೇಜಿನ ಪ್ರವೇಶಾತಿ ಆರಂಭವಾಗಿದ್ದು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಕಾಲೇಜಿನ ಮಂಜುಳಾ ಕಟಗೇರಿ,ಮಹೇಶ್ವರಿ ಹಿರೇಮಠ, ರೇವಣಸಿದ್ದಪ್ಪ ಅಮ್ಮಣ್ಣಿಿ, ಅನೀಲಕುಮಾರ ಡಿಗ್ಗೆೆ, ಸಿಬ್ಬಂದಿ ಇದ್ದರು.
ಪ್ರವೇಶಾತಿಗೆ ಶಾಸಕ ನಾಡಗೌಡ ಚಾಲನೆ : ಸರ್ಕಾರಿ ವಸತಿಯುಕ್ತ ಕಾಲೇಜಿನ ವೆಬ್ಸೈಟ್ ಉದ್ಘಾಟನೆ

