ಸುದ್ದಿಮೂಲ ವಾರ್ತೆ
ಮೈಸೂರು, ಸೆ.10:ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯದ ಬಳಿ ಸ್ವಚ್ಚತೆ ಕಾಪಾಡಿ, ವಾಹನ ನಿಲುಗಡೆ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಭಕ್ತಾದಿಗಳಿಗೆ ಕಲ್ಪಿಸುವಂತೆ ಶಾಸಕ ದರ್ಶನ್ ಧ್ರುವ ನಾರಾಯಣ್ ಅಧಿಕಾರಿಗಳಿಗೆ ಸೂಚಿಸಿದರು.
ಶ್ರೀಕಂಠೇಶ್ವರ ದೇವಾಲಯಕ್ಕೆ ದಿಢೀರ್ ಭೇಟಿ ನೀಡಿ ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳ ಜೊತೆ ದೇವಸ್ಥಾನ ಮತ್ತು ಹೊರಗಡೆ ಹಾಗೂ ಕಪಿಲಾ ನದಿ ವಾಹನ ಪಾರ್ಕಿಂಗ್ ಉದ್ಯಾನವನ ಭಕ್ತಿ ಮಾರ್ಗ ಮತ್ತು ಮುಕ್ತಿ ಮಾರ್ಗ ಸುತ್ತಮುತ್ತ ಎರಡು ಗಂಟೆಗಳ ಕಾಲ ರೌಂಡ್ ಹಾಕಿ ಪರಿಶೀಲಿಸಿದರು.
ಪ್ಲಾಸ್ಟಿಕ್ ಉಪಯೋಗಿಸಿದರೆ ದಂಡ ಹಾಕಬೇಕು. ಕಪಿಲಾ ನದಿಗೆ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಭಕ್ತಾದಿಗಳು ನದಿಗೆ ಬಿಡುವ ಹಳೆ ಬಟ್ಟೆ ಪ್ಲಾಸ್ಟಿಕ್ ಪದಾರ್ಥಗಳನ್ನು ನದಿಗೆ ಹಾಕುವುದನ್ನು ತಡೆಗಟ್ಟಿ ಎಚ್ಚರಿಕೆ ವಹಿಸಬೇಕು ಅದನ್ನು ಹಾಕಲು ಡಸ್ಟ್ ಬಿನ್ ವ್ಯವಸ್ಥೆ ಮಾಡಬೇಕು. ಇರುವ ಪಾರ್ಕಿಂಗ್ ಸ್ಥಳ ಸಾಕಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದಾಗ ಡಾರ್ಮೆಟ್ರಿ ಹಿಂಭಾಗ ಇರುವ ಸ್ಥಳವನ್ನು ಉಪಯೋಗಿಸಿಕೊಳ್ಳುವಂತೆ ಸಲಹೆ ನೀಡಿದರು.
ದೇವಸ್ಥಾನದ ಹಿಂಭಾಗ ಅಕ್ಕ ಪಕ್ಕ ಯಾವುದೇ ವಾಹನ ಪಾರ್ಕಿಂಗ್ ಮಾಡಬಾರದು ಭಕ್ತಾದಿಗಳಿಗೆ ತೊಂದರೆಯಾಗದ ರೀತಿ ಪಾರ್ಕಿಂಗ್ ವ್ಯವಸ್ಥೆ ಇರಬೇಕು. ಆದಷ್ಟು ಬೇಗ ದೇವಸ್ಥಾನದ ಆನೆಯನ್ನು ತರಲು ಪ್ರಯತ್ನಿಸುತ್ತೇವೆ. ಅದಕ್ಕೆ ಸೂಕ್ತ ಸ್ಥಳವನ್ನು ನಿರ್ಮಿಸಿ ನಂತರ ಆನೆಯನ್ನು ತರಿಸಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಶ್ರೀ ಶ್ರೀಕಂಠೇಶ್ವರ ದೇವಾಲಯದ ಇಒ ಜಗದೀಶ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಬ್ಲಾಕ್ ಅಧ್ಯಕ್ಷ ಸಿಎಂ ಶಂಕರ್ ಮಾಜಿ ನಗರಸಭೆ ಅಧ್ಯಕ್ಷ ಶ್ರೀಧರ್, ಮುಖಂಡರಾದ ಎನ್ ಎ ಮಂಜುನಾಥ್ ರವಿಕುಮಾರ್ ಶಿವಪ್ಪ ಗೋವಿಂದ್ ರಾಜ್ ಮತ್ತಿತರರು ಇದ್ದರು.