ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.24:
ಸರಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಿಸಿಸುವ ಹಿನ್ನೆೆಲೆಯಲ್ಲಿ, ಹಾಗೂ ಖಾಸಗಿ ಶಾಲೆಗಳಲ್ಲಿ ಸಿಗುವಂತಹ ಶಿಕ್ಷಣ ಸರಕಾರಿ ಶಾಲೆಯಲ್ಲಿ ಎಲ್ಲಾಾಜಾತಿ ಸಮೂಹದ ಮಕ್ಕಳಿಗೆ ಸಿಗುವಂತಾಗಲು ಸರಕಾರಿ ಶಾಲೆಗಳ ಅಭಿವೃದ್ಧಿಿಗಾಗಿ ಕಲಬುರ್ಗಿ ಕಲ್ಯಾಾಣ ಕರ್ನಾಟಕ ಅಭಿವೃದ್ಧಿಿ ಮಂಡಳಿ ಯೋಜನೆಯಡಿ ಸೇರಿ ಇತರೆ ಯೋಜನೆಗಳ ಮೂಲಕ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತಿಿದೆ.
ಇದರ ಸದುಪಯೋಗ ಮಾಡಿಕೊಂಡು ಮಕ್ಕಳಲ್ಲಿನ ಶಿಕ್ಷಣದಗುಣಮಟ್ಟ ಹೆಚ್ಚಿಿಸುವಲ್ಲಿ ಪ್ರತಿಯೋಬ್ಬರು ಸಹಕರಿಸಬೇಕು ಎಂದು ಕರ್ನಾಟಕ ಖಾದಿ ಮತ್ತು ಗ್ರಾಾಮೋದ್ಯೋೋಗ ಮಂಡಳಿ ಅಧ್ಯಕ್ಷ, ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಬಳಗಾನೂರು ಪಪಂ ವ್ಯಾಾಪ್ತಿಿಯ ನಾರಾಯಣನಗರ ಕ್ಯಾಾಂಪಿನಲ್ಲಿ ಕಲಬುರ್ಗಿಕಲ್ಯಾಾಣ ಕರ್ನಾಟಕ ಅಭಿವೃದ್ಧಿಿ ಮಂಡಳಿಯ 2024-25 ನೇಸಾಲಿನ ಮೈಕ್ರೋೋ ಅಕ್ಷರ ಆವಿಷ್ಕಾಾರ ಯೋಜನೆಯಡಿ 21.86 ಲಕ್ಷರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಭೋಜನಾಲಯ ಉದ್ಘಾಾಟಿಸಿ ಮಾತನಾಡಿದರು.
ಪಟ್ಟಣದ ಸರ್ವತೋಮುಖ ಅಭಿವೃದ್ಧಿಿಗಾಗಿ ವಿವಿಧ ಅಭಿವೃದ್ಧಿಿ ಯೋಜನೆಗಳು ಸೇರಿ ಬಸ್ನಿಲ್ದಾಾಣ, ರಸ್ತೆೆ ಸುಧಾರಣೆ ಬೀದಿದೀಪ ಅಡಿವಡಿಸಲು ಅನುದಾನ ಬಿಡುಗಡೆಗೊಳಿಸಿದ್ದು, ಸಾರ್ವಜನಿಕರು ಸಹಕಾರ ನೀಡಿ, ಪಟ್ಟಣದ ಅಭಿವೃದ್ದಿಗೆ ಮುಂದಾಗಾದಾಗ ಮಾತ್ರ ಪಟ್ಟಣ ಅಭಿವೃದ್ಧಿಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ, ಪಪಂಸದಸ್ಯಹುಸೇನ್ಬಾಷಾ, ಮುಖ್ಯಗುರು ರಮೇಶ ಕುಚಬಾಳ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಾಲೆ ನಿರ್ಮಾಣಕ್ಕೆೆ ಸ್ಥಳ ನೀಡಿದ ಭೂದಾನಿ ಸತ್ಯನಾರಾಯಣ, ಪಪಂ ಉಪಾಧ್ಯಕ್ಷ ಮಂಜುನಾಥಸ್ವಾಾಮಿ, ಪಪಂ ಮುಖ್ಯಾಾಧಿಕಾರಿ ಗೋಪಾಲನಾಯ್ಕ್, ಪಿಎಸ್ಐ ಎರಿಯಪ್ಪ ಅಂಗಡಿ, ಸಿಆರ್ಪಿ ಗಜಾನಂದ, ಅಂಗನವಾಡಿ ಮೇಲ್ವಿಿಚಾರಕಿ ಶಾಂತಾ, ಸೇರಿದಂತೆ ಪಪಂ ಸದಸ್ಯರು, ಪಟ್ಟಣ ಹಾಗೂ ಕ್ಯಾಾಂಪಿನ ಮುಖಂಡರು ಮತ್ತಿಿತರರು ಪಾಲ್ಗೊೊಂಡಿದ್ದರು.
ಗಮನ ಸೆಳೆದ ಶಾಸಕ : ಮಕ್ಕಳ ಸಾಲಿನಲ್ಲಿ ನಡುವೆ ಪುಷ್ಪ ಹಾಕಿಸಿಕೊಂಡು ಸ್ವಾಾಗತಿಸಿಕೊಂಡ ಶಾಸಕ ಆರ್.ಬಸನಗೌಡ ತುರ್ವಿಹಾಳ ಕಾರ್ಯಕ್ರಮದಲ್ಲಿ ಗಣ್ಯರ ಸನ್ಮಾಾನಕ್ಕಾಾಗಿ ಬಳಸುವ ವೆಚ್ಚದಲ್ಲಿ ಮಕ್ಕಳಿಗೆ ನೋಟ್ಬುಕ್-ಪೆನ್ ವಿತರಿಸಲು ಕಾರ್ಯಕ್ರಮದ ಆಯೋಜಕರಿಗೆ ಸೂಚಿಸಿದ್ದರಂತೆ. ಕಾರ್ಯಕ್ರಮದಲ್ಲಿ ಅದೇರೀತಿ ಮಕ್ಕಳಿಗೆ ನೋಟ್ಬುಕ್-ಪೆನ್ ವಿತರಿಸಿ ಅವರೊಂದಿಗೆ ಪೋಟೊ ತೆಗೆಸಿಕೊಂಡು ಮಕ್ಕಳ ಕೈಕುಲಕಿ ಶುಭಕೋರಿ ಗಮನ ಸೆಳೆದರು.
ಅಭಿವೃದ್ಧಿಗೆ ಸಹಕರಿಸಿ – ಶಾಸಕ ಆರ್.ಬಸನಗೌಡ ತುರ್ವಿಹಾಳ

