ಸುದ್ದಿಮೂಲ ವಾರ್ತೆ
ಕೆಜಿಎಫ್, ಮೇ 30: ಇತ್ತೀಚೆಗೆ ಕೆರೆಯಲ್ಲಿ ಈಜಲು ಹೋಗಿ ಮೃತ ಪಟ್ಟಿದ್ದ ತಾಲೂಕಿನ ಗೋಣಮಾಕನಹಳ್ಳಿ ಗ್ರಾಮದ ಇಬ್ಬರು ಮಕ್ಕಳ ಮನೆಗಳಿಗೆ ಶಾಸಕಿ ರೂಪಕಲಾ ಶಶಿಧರ್ ಅವರು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಗೋಣಮಾಕನಹಳ್ಳಿ ಗ್ರಾಮದ 5 ಮಕ್ಕಳು ಸಮೀಪದ ಸೂರಪಲ್ಲಿ ಕೆರೆಯಲ್ಲಿ ಈಜು ಕಲಿಯಲು ಹೋಗಿದ್ದು ಇವರಲ್ಲಿ ಲೋಕೇಶ್ವರಿ(12) ಕಾರ್ತಿಕ್ (14) ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ವಿಷಯ ತಿಳಿದ ನಂತರ ಭಾನುವಾರ ಶಾಸಕಿ ರೂಪ ಕಲಾ ಶಶಿಧರವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ವೇಳೆ ಮಾತನಾಡಿದ ಅವರು, ಬೆಳೆದು ನಿಂತ ಮಕ್ಕಳು ಪೋಷಕರ ಕಣ್ಣ ಮುಂದೆ ಮೃತಪಟ್ಟಿರುವುದು ದುರದೃಷ್ಟಕರ. ಇಬ್ಬರು ಮಕ್ಕಳ ಪೋಷಕರಿಗೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ ಎಂದು ಹೇಳಿದರು.
ಇನ್ನು ಮಳೆಗಾಲದಲ್ಲಿ ಕೆರೆಕುಂಟೆಗಳು ತುಂಬಿದ್ದು ಪೋಷಕರ ತಮ್ಮ ಮಕ್ಕಳ ಬಗ್ಗೆ ಜಾಗೃತಿಯನ್ನು ವಹಿಸಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ನೀರು ತುಂಬಿದ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಸಾರ್ವಜನಿಕರಿಗೆ ಕಿವಿಮಾತು ಮಾತು ಹೇಳಿದರು.
ಇನ್ನು ಇಂತಹ ಘಟನೆಗಳು ನಡೆದಂತೆ ಈಗಾಗಲೇ ಅಧಿಕಾರಿಗಳ ಸಭೆಯನ್ನು ಕರೆದು ಪ್ರತಿಯೊಂದು ಗ್ರಾಮಗಳಿಗೂ ಅಧಿಕಾರಿಗಳು ತೆರಳಿ ಕೆರೆ ಕುಂಟೆಗಳು ಮತ್ತು ವಿದ್ಯುತ್ ತಂತಿಗಳ ಬಗ್ಗೆ ಪೋಷಕರು ಮಕ್ಕಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ಸಾರ್ವಜನಿಕರಿಗೆ ಮನವರಿಕೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.