ಸುದ್ದಿಮೂಲ ವಾರ್ತೆ
ಕೆಜೆಎಫ್, ಮೇ 5: ಕೇಂದ್ರ ಹಾಗೂ ರಾಜ್ಯದಲ್ಲಿ ವಿರೋಧ ಪಕ್ಷ ಆಡಳಿತದಲ್ಲಿದ್ದರು ಸಹ ಕೆಜಿಎಫ್ ಜನತೆಯ ಸರ್ವಾಂಗೀಣ ಅಭಿವೃದ್ದಿಗಾಗಿ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದು ಕೆಲಸ ಮಾಡಿದ್ದೇನೆ ಎಂದು ಶಾಸಕಿ ರೂಪಕಲಾ ವ್ಯಕ್ತಪಡಿಸಿದರು.
ಪಟ್ಟಣದ ಸಮೀಪದ ಟಿ.ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಬಡಮಾಕನಹಳ್ಳಿ, ಕಂಗಾನಲ್ಲೂರು ಗ್ರಾಮಗಳಿಗೆ
ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಶ್ರೀ ಭಕ್ತಕನಕದಾಸರು ಮತ್ತು ಡಾ,ಬಿಆರ್ ಅಂಬೇಡ್ಕರ್ ಅವರ ಪುಥ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಬಿಜೆಪಿ ಪಕ್ಷ ನಿರುದ್ಯೋಗಿಗಳಿಗೆ ಉದ್ಯೋಗವನ್ನು ನೀಡುತ್ತೇವೆಂದು ಸುಳ್ಳು ಪ್ರಚಾರ ಮಾಡಿ ಯಾವುದೇ ರೀತಿಯ ಉದ್ಯೋಗವಕಾಶ ಕಲ್ಪಿಸಲಿಲ್ಲ. ಬಡವರ ಖಾತೆಯಲ್ಲಿರುವ ಹಣವನ್ನು ಜಪ್ತಿ ಮಾಡಿ ಕಾರ್ಪೋರೇಟ್ ಕಂಪನಿಗಳಿಗೆ ಬ್ಯಾಂಕ್ ಮುಖಾಂತರ ಸಾಲಗಳನ್ನು ನೀಡುತ್ತಿದ್ದಾರೆ ಎಂದರು.
ಕ್ಷೇತ್ರದ ಜನರ ಸುಗಮ ಜೀವನಕ್ಕಾಗಿ ಸತತವಾಗಿ 5 ವರ್ಷಗಳಿಂದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ
ಉಚಿತ ಹೈಮಾಸ್ಕ್ ದೀಪ, ಶುದ್ದನೀರಿನ ಘಟಕ, ಸುಸಜ್ಜಿತ ಆಸ್ಪತ್ರೆ, ಸಿಸಿ ರಸ್ತೆಗಳು, ಕೆಜಿಎಫ್ ಮತ್ತು ವಿಕೋಟೆ ಮುಖ್ಯರಸ್ತೆ, ಆಂಧ್ರ ಗಡಿ ಭಾಗದಲ್ಲಿ ರೈತರಿಗಾಗಿ ಎಪಿಎಂಸಿ ಮಾರುಕಟ್ಟೆಯನ್ನು ನಿರ್ಮಿಸಲು ಜಾಗ ಮೀಸಲು, ಟಿ,ಗೊಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ದೇವರಾಜ ಅರಸ್ ಯೋಜನೆಯಡಿಯಲ್ಲಿ 30 ಜನಕ್ಕೆ ಉಚಿತ ಲೋನ್, ಮತ್ತು ಡಿಸಿಸಿ ಬ್ಯಾಂಕ್ ಮೂಲಕ ಮಹಿಳೆಯರಿಗೆ ಹಾಗೂ ರೈತರಿಗೆ ಶೂನ್ಯ ಬಡ್ಡಿದರಲ್ಲಿ ಉಚಿತ ಸಾಲ ವಿತರಣೆ, ಇನ್ನೂ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಅದ್ಯಕ್ಷ ಪವಿತ್ರಗೋಪಾಲ್, ಉಪಾದ್ಯಕ್ಷ ಶ್ರೀರಾಮಪ್ಪ, ಸದಸ್ಯರಾದ ಮಂಜುನಾಥ, ಚೌಡಪ್ಪ, ಮುನಿವೆಂಕಟಪ್ಪ, ಪದ್ಮಕ್ಕ, ಮುಖಂಡರಾದ ವೆಂಕಟರಾಮ್, ವೆಂಕಟಾಚಲಪತಿ, ನಲ್ಲುರು
ಶಂಕರ್, ನಾಗರಾಜ್, ಕೃಷ್ಣಪ್ಪ ಸೇರಿದಂತೆ 200 ಕ್ಕೂ ಹೆಚ್ಚು ಕಾರ್ಯಕರ್ತರು ಮತ್ತು ಉಪಸ್ಥಿತರಿದ್ದರು.