ಸುದ್ದಿಮೂಲ ವಾರ್ತೆ
ಹೊಸಕೋಟೆ, ಆ. 10 : ತಾಲೂಕಿನಲ್ಲಿ ಒಟ್ಟು 1.18 ಲಕ್ಷ ಮನೆಗಳಿದ್ದು, ಇದರಲ್ಲಿ 77 ಸಾವಿರ ಮನೆಯ ಮಾಲೀಕರು ಗೃಹಜ್ಯೋತಿ ಕಾರ್ಯಕ್ರಮದಡಿ ನೋಂದಾಯಿಸಿಕೊಂಡು ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ತಾಲೂಕುಮಟ್ಟದ ಗೃಹ ಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗದವರು ಶೀಘ್ರವೇ ನೋಂದಣಿ ಮಾಡಿಕಕೊಂಡು ಯೋಜನೆಯ ಫಲ ಪಡೆಯಬೇಕು ಎಂದರು.
ಬೆಸ್ಕಾಂನ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್ ಮಾತನಾಡಿ, ಈ ಮೊದಲು ವಿದ್ಯುತ್ ಬಿಲ್ ಕಟ್ಟದೇ ಇದ್ದಾಗ ಸಿಬ್ಬಂದಿ ಮುಲಾಜಿಲ್ಲದೆ ಮನೆಯ ವಿದ್ಯುತ್ ಸಂಪರ್ಕ ಕಟ್ ಮಾಡುತ್ತಿದ್ದರು.ಆ ವೇಳೆ ಮನೆಯವರು ರಾತ್ರಿ ವಿದ್ಯುತ್ ಸಂಪರ್ಕವಿಲ್ಲದೆ ಕಷ್ಟ ಅನುಭವಿಸುವ ಜತೆಗೆ ಅಕ್ಕ
ಪಕ್ಕದರಿಂದ ಅವಮಾನಕ್ಕೆ ಗುರಿಯಾಗುತ್ತಿದ್ದರು. ಆದರೆ, ಸರ್ಕಾರದ ಗೃಹ ಲಕ್ಷ್ಮೀ ಯೋಜನೆಯಿಂದ ಇನ್ನು ಮುಂದೆ ಯಾರೂ ಸಹ ಸಮಸ್ಯೆ ಅನುಭವಿಸಬೇಕಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿ.ವಿ.ಬೈರೇಗೌಡ, ಡಾ.ಎಚ್.ಎಂ. ಸುಬ್ಬರಾಜು, ಅರುಣ್ಕುಮಾರ್, ವಿಜಯ್ಕುಮಾರ್, ಪಾರ್ವತಮ್ಮ, ರಮಾ, ಹೇಮಲತಾ, ನವಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶೋಭಾ,ಬೆಸ್ಕಾಂ ಅಧಿಕಾರಿ ಸಹಾಯಕ ಕಾರ್ಯನಿರ್ವಹಣಾ ಇಂಜಿನಿಯರ್ ಪುಟ್ಟಸ್ವಾಮಿ ಇನ್ನಿತರರು ಹಾಜರಿದ್ದರು.