ಸುದ್ದಿಮೂಲ ವಾರ್ತೆ
ನಂದಗುಡಿ, ಏ.28: ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಗಳು ಅಧಿಕಾರಕ್ಕಾಗಿ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಕೆಲಸಕ್ಕೆ ಮುಂದಾಗಿದೆ. ಅಗತ್ಯ ದಿನ ಬಳಕೆ ವಸ್ತುಗಳನ್ನು ಗಣನೀಯವಾಗಿ ಏರಿಕೆ
ಮಾಡುವುದರ ಮೂಲಕ ಬಡ ಮಧ್ಯಮ ವರ್ಗದವರ ಹಿತಾಸಕ್ತಿ
ಮರೆತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಂದಗುಡಿ ಹೋಬಳಿಯ ಶಿವನಾಪುರದಲ್ಲಿ 2023ರ ರಾಜ್ಯ ವಿಧಾನಸಭಾ ಚುನಾವಣಾ ನಿಮಿತ್ತ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷದ ಪರ ರೋಡ್ ಷೋ ನಡೆಸಿ
ಮತದಾರರನ್ನು ಉದ್ದೇಶಿಸಿ ಮಾತನಾಡಿದರು.
40% ಕಮಿಷನ್ ದಂಧೆಯಲ್ಲಿ ರಾಜ್ಯ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಗತ್ಯ ದಿನ ಬಳಕೆ
ವಸ್ತುಗಳನ್ನು ಗಣನೀಯವಾಗಿ ಏರಿಕೆ ಮಾಡುವುದರ ಮೂಲಕ ಬಡ ಮಧ್ಯಮ ವರ್ಗದವರ ಹಿತಾಸಕ್ತಿ ಮರೆತಿದೆ. ರಾಜ್ಯದ
ಸರ್ವತೋಮುಖ ಅಭಿವೃದ್ಧಿ ಕಾಂಗ್ರೆಸ್ ನೇತೃತ್ವದ ಸರಕಾರದಿಂದ
ಮಾತ್ರ ಸಾಧ್ಯವಾಗುತ್ತದೆ.
ಕಾಂಗ್ರೆಸ್ ಸರಕಾರ ಅಧಿಕಾರಕ್ಕೇರಿದರೆ ಪ್ರತಿ ತಲೆಗೆ 10 ಕೆಜಿ ಅಕ್ಕಿ, 200 ಯೂನಿಟ್ ವಿದ್ಯುತ್, ಗೃಹಿಣಿಯ ಖಾತೆಗೆ 2 ಸಾವಿರ ಆರ್ಥಿಕ ನೆರವು,
ಪದವಿಧರ ನಿರುದ್ಯೋಗಿಗಳಿಗೆ ಮಾಸಿಕ 3 ಸಾವಿರ, ಸರಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತವಾಗಿ ಸಂಚಾರ ನೀಡಲಿದೆ.
ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ವೈಫಲ್ಯಗಳನ್ನು
ಮತದಾರರ ಮನೆ-ಮನೆಗೆ ತಲುಪಿಸಬೇಕು. ಕಾಂಗ್ರೆಸ್ ಪಕ್ಷದ
ಗ್ಯಾರಂಟಿ ಕಾರ್ಡನ್ನು ಪ್ರತಿಯೊಬ್ಬ ಮತದಾರನ ಮನೆಗೆ ತಲುಪಿಸಿ
ನೋಂದಣಿ ಮಾಡಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ
ಮತಗಳ ಅಂತರದಲ್ಲಿ ಗೆಲುವಿಗೆ ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಿವನಾಪುರ ಗ್ರಾಪಂ. ವ್ಯಾಪ್ತಿಯ
ಮೋತಕದಹಳ್ಳಿ, ಕೊರಡಹಳ್ಳಿ, ಗುಳ್ಳೇನಹಳ್ಳಿ, ಕರಪನಹಳ್ಳಿ,
ಎಂ. ಹೊಸಹಳ್ಳಿ, ಡಿ. ಶೆಟ್ಟಹಳ್ಳಿ, ದೊಡ್ಡೇನಹಳ್ಳಿ, ಮಲಿಯಪ್ಪನಹಳ್ಳಿ,
ಬಿಸನಹಳ್ಳಿ, ಸಿ.ಟಿ. ಗೊಲ್ಲಹಳ್ಳಿ, ಭೀಮಾಪುರ ಹಾಗೂ ಶಿವನಾಪುರದಲ್ಲಿ ಶಾಸಕ ಶರತ್ ಬಚ್ಚೇಗೌಡ ರೋಡ್ ಷೋ ನಡೆಸಿ ಕಾಂಗ್ರೆಸ್ ಪಕ್ಷದ
ಪರ ಮತಯಾಚಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ಬಿ. ಗೋಪಾಲ್, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರ್ಗೌಡ, ಟಿಎಪಿಸಿಎಂಎಸ್ ನಿರ್ದೇಶಕ
ರವೀಂದ್ರ, ಜಿಪಂನ ಮಾಜಿ ಸದಸ್ಯ ಕಲ್ಲಪ್ಪ, ತಾಪಂನ ಮಾಜಿ ಅಧ್ಯಕ್ಷ
ಟಿ.ಎಸ್. ರಾಜಶೇಖರ್, ಗ್ರಾಪಂನ ಮಾಜಿ ಅಧ್ಯಕ್ಷರಾದ ದಯನಂದಬಾಬು,
ಉಪಾಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ರವಿಚಂದ್ರ, ಮಂಜುಳ
ಎಸ್ಪಿ ರಾಜಣ್ಣ, ಎಸ್ಎಫ್ಸಿಎಸ್ ನಿರ್ದೇಶಕ ದೊಡ್ಮನೆ ರಮೇಶ್, ಸಮಾಜ ಸೇವಕರಾದ ಕಲ್ಕೆರೆ ಕೆಎಸ್ ಮಹದೇವಯ್ಯ, ಎಂ. ಮಂದೀಪ್ಗೌಡ
ಮುಖಂಡರಾದ ರ್ರೇಗೌಡ, ಎಸ್ಟಿಎಂ ಮುನಿರಾಜ್, ಮಂಜುನಾಥ್
ಹಾಗೂ ಕಾರ್ಯಕರ್ತರು ಇದ್ದರು.