ಸುದ್ದಿಮೂಲ ವಾರ್ತೆ
ಹೊಸಕೋಟೆ, ಜೂ 20 : ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದಲ್ಲಿ ಮಾದಿಗ ಸಮುದಾಯದ ಯುವ ಪಡೆಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಎರಡನೇ ಬಾರಿಗೆ ಗೆಲ್ಲಿಸಿದ್ದು, ಮತದಾರರ ಋಣ ತೀರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೊಸಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಚಿಂತನೆ ನಡೆಸಲಾಗಿದೆ. ಪ್ರತಿಯೊಬ್ಬ ಅಧಿಕಾರಿಗಳು ಹಾಗೂ ನಾಗರೀಕರ ಸಹಕಾರ ಅತ್ಯಗತ್ಯ ಎಂದರು.
ಪ್ರಮುಖವಾಗಿ ನಮ್ಮ ಕಾರ್ಯಕರ್ತರು ಸಹ ಧರ್ಮಾತೀತವಾಗಿ ದುಡಿದು ನನ್ನ ಗೆಲುವಿಗೆ ಶ್ರಮಿಸಿದ್ದಾರೆ. ಅವರಿಗೂ ನಾನು ಕೃತಜ್ಷತೆಸಲ್ಲಿಸುತ್ತೇನೆ. ಪಾರದರ್ಶಕ ಆಡಳಿತ ನನ್ನ ಕನಸಾಗಿದ್ದು ಮುಂದಿನ 5 ವರ್ಷಗಳಲ್ಲಿ ಅದನ್ನು ನನಸಾಗಿಸುತ್ತೇನೆ ಎಂದರು.
ಮಾತಂಗ ಫೌಂಡೇಷನ್ ಉಪಾಧ್ಯಕ್ಷ ಡಾ.ಹೆಚ್.ಎಂ.ಸುಬ್ಬರಾಜ್ ಮಾತನಾಡಿ, ದಲಿತ
ಕಾಲೋನಿಗಳಿಗೆ ತೆರಳಿ ಸಮಸ್ಯೆಗಳನ್ನು ಆಲಿಸಿ, ಬಗೆಹರಿಸುವ ಮಾತನ್ನು ನೀಡಿ ಕಾಂಗ್ರೆಸ್ ಸಂಘಟನೆ ಮಾಡುವ ಮೂಲಕ ಗೆಲುವಿಗೆ ಸಹಕಾರ ನೀಡಿದ್ದೇವೆ. ಅವರು ಕ್ಷೇತ್ರವನ್ನು ಅಭಿವೃದ್ಧಿಯ ಮೂಲಕ ಉತ್ತುಂಗಕ್ಕೆ ಕೊಂಡೊಯ್ಯಲಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಕಂಬಳೀಪುರ ಗ್ರಾಪಂ ಮಾಜಿ ಅಧ್ಯಕ್ಷ ರಮೇಶ್, ಮಾದಿಗ ಯುವ ಪಡೆಯ ಕಾರ್ಯಕರ್ತರಾದ ಡಿ.ಎಂ.ಮುನಿರಾಜು, ಶೆಟ್ಟಿಹಳ್ಳಿ ಯಲ್ಲಪ್ಪ, ಮುನಿಯಪ್ಪ, ಸೂಪ ನಾರಾಯಣಸ್ವಾಮಿ, ಗುರಪ್ಪ, ಗುಟ್ಟಹಳ್ಳಿ ನಾಗರಾಜ್, ಗಿಡ್ಡಪ್ಪನಹಳ್ಳಿ ದೇವರಾಜ್,ಇಂಜನಹಳ್ಳಿ ಲಕ್ಷ್ಮೀ ನಾರಾಯಣ, ಹರೀಶ್ ಚಕ್ರವರ್ತಿ, ತವಟಹಳ್ಳಿ ಮುನಿಯಪ್ಪ ಸೇರಿದಂತೆ ನೂರಾರು ಹಾಜರಿದ್ದರು.