ಸುದ್ದಿಮೂಲ ವಾರ್ತೆ
ಯಾದಗಿರಿ ಮೇ, 30: ಗುರುಮಠಕಲ್.ಗುರುಮಠಕಲ್ ಮತಕ್ಷೇತ್ರವು ಹಿಂದುಳಿದ ತಾಲೂಕಾ ಎಂಬ ಹಣೆಪಟ್ಟಿ ಅಳಿಸುವ ನಿಟ್ಟಿನಲ್ಲಿ ಮತಕ್ಷೇತ್ರದ ಅಭಿವೃದ್ಧಿಗಾಗಿ ನಾನು ಹಲವು ಕನಸನ್ನು ಕಂಡಿದ್ದೇನೆ.ಅವುಗಳ ಸಾಕಾರಕ್ಕಾಗಿ ಯಾವುದೇ ರಾಜಕಾರಣಿಗಳ ಒತ್ತಾಯಕ್ಕೆ ಮಣಿಯದೆ ನನ್ನ ಜೊತೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಕೈಜೋಡಿಸುವಂತೆ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಶಾಸಕ ಶರಣಗೌಡ ಕಂದಕೂರ ಅವರು, ಈ ಮತಕ್ಷೇತ್ರದ ಸ್ಥಳೀಯನಾದ ನನ್ನನ್ನು ಆಯ್ಕೆ ಮಾಡಿದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕಿದೆ. ಜಿಡ್ಡುಗಟ್ಟಿದ ಆಡಳಿತ ಯಂತ್ರದ ವೇಗ ಹೆ ಚುರುಕಾಗಿ ಕರ್ತವ್ಯ ನಿರ್ವಹಿಸುವಲ್ಲಿ ಅಧಿಕಾರಿಗಳು ತೋರುವ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸುಮಾರು 30 ಕ್ಕೂ ಹೆಚ್ಚು ಇಲಾಖೆಗಳ ಆಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಆಯಾ ಇಲಾಖೆಗಳ ಬೇಡಿಕೆ,ಸಿಬ್ಬಂದಿಗಳ ಕೊರತೆ ಮತ್ತು ಇದುವರೆಗೂ ಕೈಗೊಂಡ ಕಾಮಗಾರಿ ಮತ್ತು ಕೆಲಸಗಳ ವರದಿಯನ್ನು ಸಲ್ಲಿಸುವಂತೆ 10 ದಿನಗಳ ಕಾಲಾವಕಾಶ ನೀಡಿದರು.
ಸ್ವಾತಂತ್ರ ಬಂದು 75 ವರ್ಷಗಳು ಗತಿಸಿದರೂ ಇನ್ನೂ ಶುದ್ಧ ಕುಡಿಯುವ ನೀರು ಕೊಡುವಲ್ಲಿ ಸರಕಾರಗಳು ವಿಫಲವಾಗಿವೆ ಕಾರಣ ಪ್ರತಿ ಹಳ್ಳಿಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ರಿಪೇರಿ ಮತ್ತು ಪೈಪ್ ಲೈನ್ ದುರಸ್ತಿ ಸೇರಿದಂತೆ ಶುದ್ದ ಕುಡಿಯುವ ನೀರಿಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದರು. ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅನಪೂರ ಗ್ರಾಮದ ಕಲುಷಿತ ನೀರು ಪ್ರಕರಣವನ್ನು ಉಲ್ಲೇಖಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ,,ಚರಂಡಿ,ಸ್ವಚ್ಛತೆ ಬಗ್ಗೆ ಗಮನ ನೀಡುವಂತೆ ತಿಳಿಸಿ ಪಿಡಿಒಗಳ ಬಗ್ಗೆ ದೂರುಗಳು ಬರುತ್ತದ್ದು,ತಮ್ಮ ಕಾರ್ಯವೈಖರಿಯನ್ನು ಬದಲಾಯಿಸಿಕೊಳ್ಳುವಂತೆ ಎಚ್ಚತಿಕೆ ನೀಡಿದರು.
ಕಂದಾಯ ಇಲಾಖೆಯ ಕಛೇರಿಯಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು ಸೂಕ್ತ ಕ್ರಮಕೈಗೊಳ್ಳುವಂತೆ ತಹಸೀಲ್ದಾರ ಅವರಿಗೆ ಸೂಚಿಸಿದರು.
ಮಾನವೀಯ ಮೌಲ್ಯಗಳೊಂದಿಗೆ ಸಾರ್ವಜನಿಕರೊಂದಿಗೆ ವರ್ತಿಸಲು ಪುರಸಭೆ ಅಧಿಕಾರಿಗಳಿಗೆ ಸೂಚಿಸಿದ ಅವರು,ಕಾಮಗಾರಿಗಳನ್ನು ಪರಿಶೀಲನೆಯ ನಂತರ ಹಣ ಬಿಡುಗಡೆಗೊಳಿಸುವಂತೆ ತಿಳಿಸಿದರು.
ಮಳೆಗಾಲದಲ್ಲಿ ಚೇಳು ಮತ್ತು ಹಾವು ಕಡಿತದ ಪ್ರಕರಣಗಳು ಬರುವ ಸಾಧ್ಯತೆಗಳಿದ್ದು,ಪ್ರತಿ ಆರೋಗ್ಯಕೇಂದ್ರದ್ಲಿ ಸೂಕ್ತ ಔಷಧಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.ಅಂಬ್ಯುಲೆನ್ಸ,ಸಿಬ್ಬಂದಿಗಳ ವರ್ತನೆಯನ್ನು ಬದಲಾಯಿಸಿಕೊಳ್ಳುವಂತೆತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ,ಶಿಕ್ಷಣ, ಆಹಾರ ,ಕಲ್ಯಾಣ ಕರ್ನಾಟಕ ಸಾರಿಗೆ ,ಅಬಕಾರಿ ,ಜೆಸ್ಕಾಂ,ಒಳಚರಂಡಿ,ಸಮಾಜ ಕಲ್ಯಾಣ,ತೋಟಗಾರಿಕಾ, ಪಶುಸಂಗೋಪನಾ,ಬಿಸಿಯೂಟ,ಸಹಕಾರ ,ಕೃಷಿ ,ಮಾರುಕಟ್ಟೆ,ಕಾರ್ಮಿಕ,ಕೈಗಾರಿಕಾ,ಲೋಲೋಪಯೋಗಿ,ಪಂಚಾಯತ್ ರಾಜ್,ಕೆಕೆಆರ್ ಡಿಬಿ,ಸಣ್ಣ ನೀರಾವರಿ ಇಲಾಖೆ ಗಳಿಗೆ ಸಂಬಂಧಿಅಇದ ಅಧಿಕಾರಿಗಳಿಂದ ಮಾಹಿತಿಪಡೆದರು.