ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.04:
ನಗರದಲ್ಲಿ ಆಯೋಜನೆಗೊಂಡಿದ್ದ ಎರಡು ದಿನಗಳ ರಾಜ್ಯಮಟ್ಟದ ಯುವ ಜನೋತ್ಸವ ಕಾರ್ಯಕ್ರಮ ಗುರುವಾರ ಸಂಜೆ ಸಂಪನ್ನಗೊಂಡಿದ್ದು, ವಿವಿಧ ಏಳು ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸುವ ಮೂಲಕ ಸಂಪನ್ನಗೊಂಡಿತ್ತು.
ಜಾನಪದ ನೃತ್ಯದಲ್ಲಿ ಪ್ರಥಮ ಬಹುಮಾನದ ಯಾದಗಿರಿ ಜಿಲ್ಲೆ ರಾಷ್ಟ್ರಮಟ್ಟಕ್ಕೆೆ ಆಯ್ಕೆೆಯಾಗುವ ಮೂಲಕ ಗಮನ ಸೆಳೆದರೇ, ಜಾನಪದ ಗೀತೆಯಲ್ಲಿ ಮಂಡ್ಯ, ವಿಜ್ಞಾನ ಮೇಳದಲ್ಲಿ ಬಳ್ಳಾಾರಿ, ಕವಿತೆಯಲ್ಲಿ ಉತ್ತರಕನ್ನಡ ಜಿಲ್ಲೆ, ಘೊಷಣೆಯಲ್ಲಿ ಚಿಕ್ಕಮಗಳೂರು, ಕಥೆಯಲ್ಲಿ ಬಾಗಲಕೋಟ್ ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆ ಪ್ರಥಮ ಸ್ಥಾಾನ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆೆ ಆಯ್ಕೆೆಯಾಗಿವೆ.
ಉಳಿದಂತೆಯತೇ ದ್ವೀತಿಯ ಮತ್ತು ತೃತೀಯ ಬಹುಮಾನಗಳು ಸೇರಿದಂತೆಯೇ ಎಲ್ಲ ಬಹುಮಾನಗಳನ್ನು ವಿಜೇತರಿಗೆ ಶಾಸಕ ಚನ್ನಾಾರೆಡ್ಡಿಿ ಪಾಟೀಲ್ ತುನ್ನೂರ ಅವರೇ ಘೋಷಣೆ ಮಾಡುವ ಮೂಲಕ ವಿತರಿಸಿದರು.
ಈ ವೇಳೆ ಮಾತನಾಡಿದ ಶಾಸಕ ತುನ್ನೂರ ಅವರು, ಸೋಲು,ಗೆಲವು ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆಯೇ. ಗೆದ್ದವರು ಹಿಗ್ಗದೇ, ಸೋತವರು ಕುಗ್ಗದೇ ಮುಂದಿನ ಸ್ವರ್ಧೆಗೆ ಅಣಿಯಾಗಬೇಕೆಂದರು.
ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಮಾತನಾಡಿ, ಗಿರಿಜಿಲ್ಲೆಯಲ್ಲಿ ಎರಡು ದಿನ ರಾಜ್ಯದ 31 ಜಿಲ್ಲೆಗಳ ಸಾವಿರಕ್ಕೂ ಅಧಿಕ ಯುವಜನತೆ ಬಂದು ಇಲ್ಲಿ ಸಾಂಸ್ಕ್ರತಿಕ ಲೋಕವನ್ನೇ ಹುಟ್ಟು ಹಾಕುವ ಮೂಲಕ ಕಲೆಯ ಅನಾವರಣವನ್ನೇ ಬಿಚ್ಚಿಿಟ್ಟಿಿದ್ದಿರಿ ಎಂದರು.
ರಾಜ್ಯಮಟ್ಟದ ಈ ಕಾರ್ಯಕ್ರಮದ ಯಶಸ್ಸಿಿಗೆ ಶ್ರಮಿಸಿದ ಪ್ರತಿಯೊಬ್ಬರಿಗೂ ಜಿಲ್ಲಾಡಳಿತದಿಂದ ಅಭಿನಂದನೆ ಸಲ್ಲಿಸಿದರು.
ವೇದಿಕೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. ವಿಜೇತ ತಂಡಗಳ ಹರ್ಷ ಮುಗಿಲು ಮುಟ್ಟಿಿತು.
ಅನ್ಯಾಾಯ, ಅನ್ಯಾಾಯ
ಎಲ್ಲ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಇನ್ನೆೆನು ಕಾರ್ಯಕ್ರಮ ಮುಗಿಸಲು ಮುಂದಾಗುತ್ತಿಿದಂತೆಯೇ ಜಾನಪದ ನೃತ್ಯ ಮತ್ತು ಜಾನಪದ ಗೀತೆಗಳ ಸ್ಪರ್ಧೆಗಳ ಲಿತಾಂಶ ಸಮರ್ಪಕವಾಗಿ ನೀಡಿಲ್ಲ ಎಂದು ಕೆಲವು ಸ್ಪರ್ಧಾಗಳು ವೇದಿಕೆಗೆ ಬಂದು ಇದರಲ್ಲಿ ಅನ್ಯಾಾಯವಾಗಿದೆ. ತೀರ್ಪು ತಪ್ಪಾಾಗಿ ನೀಡಲಾಗಿದೆ. ಮತ್ತೊೊಮ್ಮೆೆ ಪರಿಶೀಲಿಸಿ ಎಂದು ಜಿಲ್ಲಾಡಳಿತಕ್ಕೆೆ ಆಗ್ರಹಿಸಿದ ಘಟನೆ ನಡೆಯಿತು. ಈ ವೇಳೆ ಕೆಲಕಾಲ ಗೊಂದಲ ಉಂಟಾಯಿತು.ಪೊಲೀಸರು ಮಧ್ಯ ಪ್ರವೇಶಿಸಿ ಅವರನ್ನು ವೇದಿಕೆಯಿಂದ ಕೆಳಗಿಳಿಸಿದರು. ಆಗಲೂ ಅವರು ತಮಗಾದ ಅನ್ಯಾಾಯವನ್ನು ಸರಿಪಡಿಸುವಂತೆಯೇ ಒತ್ತಾಾಯಿಸುತ್ತಲೇ ಇದ್ದರು.
ಸಮಸ್ಯೆೆ ಏನು? ಈ ಮುಂಚೆ ನಡೆದ ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ವಿಜೇತ ತಂಡಕ್ಕೇ ಇಲ್ಲೂ ಬಹುಮಾನ ನೀಡಲಾಗಿದೆ ಎಂಬ ಆರೋಪ ಅವರದ್ದಾಗಿತ್ತು.
ರಾಜ್ಯ ಮಟ್ಟದ ಯುವ ಜನೋತ್ಸವ ಆಯೋಜನೆ ಮಾಡಿದ್ದು ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ. ಆದರೇ ತೀರ್ಪು ನೀಡಲು ಬಂದವರು ರಾಜ್ಯ ಮಟ್ಟದ ಹಿರಿಯರು. ಈಗ ಅವರದ್ದು ಏನೇ ಇದ್ದರೂ ಕ್ರೀಡಾ ಆಯುಕ್ತರಿಗೆ ಭೇಟಿ ಮಾಡಿ ದೂರು ಕೊಡಲಿ. ಆಗ ಅವರು ಏನು ಹೇಳುತ್ತಾಾರೆ ನೋಡೊಣ..
-ಹರ್ಷಲ್ ಬೋಯರ್, ಡಿಸಿ ಯಾದಗಿರಿ.

