ಸುದ್ದಿಮೂಲ ವಾರ್ತೆ ಬಳಗಾನೂರು, ಜ.11:
ಪಟ್ಟಣದ ಹಿರೇಹಳ್ಳಕ್ಕೆೆ ನಾರಾಯಣನಗರ ಕ್ಯಾಾಂಪ್, ಹಾಗೂ ಸಾಗರಕ್ಯಾಾಂಪಿನ ರೈತರ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸುವ ಹಿನ್ನಲೆಯಲಿ ಸಣ್ಣ ನೀರಾವರಿ ಮತ್ತು ಅಂತರಜಲ ಅಭಿವೃದ್ಧಿಿ ಇಲಾಖೆ ಯೋಜನೆಯಡಿ ತಲಾ 2 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಏತನೀರಾವರಿ ಕಾಮಗಾರಿಗಳಿಗೆೆ ಸಣ್ಣ ನೀರಾವರಿ ಮತ್ತು ಮಾಹಿತಿ ತಂತ್ರಜ್ಞಾಾನ ಇಲಾಖೆ ಸಚಿವ ಎನ್.ಎಸ್ ಭೋಸರಾಜು, ಬೆಂಗಳೂರು ರಾಜ್ಯ ಖಾದಿ ಮತ್ತು ಗಾಮೋದ್ಯೋೋಗ ಮಂಡಳಿ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿಪೂಜೆ ನೆರವೆರಿಸಿದರು.
ರಾಷ್ಟ್ರದ 7 ರಾಜ್ಯಗಳಲ್ಲಿ ಅಂತರಜಲ ಕುಸಿತ ತೀವ್ರ ಪರಿಣಾಮ ಬೀರುತ್ತಿಿದೆ. ಅದರಲ್ಲಿ ಕರ್ನಾಟಕವು ಸೇರಿದೆ, ಇದನ್ನು ಸರಕಾರದ ಗಮನಕ್ಕೆೆ ತಂದು, ರಾಜ್ಯದಹಲವು ಜಿಲ್ಲೆೆಗಳಲ್ಲಿ ಅಂತರಜಲ ಮಟ ಹೆಚ್ಚಿಿಸುವುದು ನಮ್ಮ ಜವಾಬ್ದಾಾರಿಯಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆೆಯಲ್ಲಿ ಚೆಕ್ಡ್ಯಾಾಂ, ಬ್ರಿಿಜ್ಕಂಬ್ಯಾಾರೇಜು, ನಿರ್ಮಾಣ ಸೇರಿ ಇತರೆ ಯೋಜನೆಗಳನ್ನು ರೂಪಿಸಿದೆ. ರೈತರಿಗಾಗಿ,ರೈತರ ಅಭಿವೃದ್ಧಿಿಗಾಗಿ ಪೋಲಾಗುತ್ತಿಿರುವ ನೀರು ಸದ್ಭಳಕೆ ಮಾಡಿಕೊಳ್ಳಲು ಹರಿಯುವ ನೀರನ್ನು ನಿಲ್ಲಿಸುವುದು, ನಿಂತ ನೀರನ್ನು ಇಂಗಿಸುವುದು ಮಹತ್ತರ ನೀರಾವರಿ ಯೋಜನೆಗಳು ಈ ಭಾಗದ ಶಾಸಕ ಆರ್.ಬಸನಗೌಡ ತುರ್ವಿಹಾಳ ಅವರ ರೈತರ ಮೇಲಿನ ಕಾಳಜಿಯಿಂದಾಗಿ ನಿಮಗೆ ತಲುಪಿವೆ. ನಾರಾಯಣ ನಗರಕ್ಯಾಾಂಪ್ನ ಸುಮಾರು 4. ಕಿಲೋಮೀಟರ್ ದೂರದಲ್ಲಿನ ತುಂಗಭದ್ರಎಡದಂಡೆನಾಲೆಯ 65ನೇ ಡಿಸ್ಟ್ರಿಿಬ್ಯೂಟರ್ವರೆಗೆ, ಸಾಗರಕ್ಯಾಾಂಪ್ ಸುಮಾರು 6 ಕೀಲೋಮೀಟರ್ಗಳ ದೂರದ ತುಂಗಭದ್ರ ಎಡದಂಡೆ ನಾಲೆಯ 55 ನೇ ಡಿಸ್ಟ್ರಿಿಬ್ಯೂಟರ್ಗೆವರೆಗೆ ಮಾಡುವ ಕಾಮಗಾರಿ ಇದಾಗಿದ್ದು ಗುತ್ತಿಿಗೆದಾರರು ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಆರ್. ಬಸನಗೌಡ ತುರ್ವಿಹಾಳ ಮಾತನಾಡಿ ಸರಕಾರದ ಗ್ಯಾಾರಂಟಿ ಯೋಜನೆಗಳ ಜನತೆಯ ಮನೆಬಾಗಿಲಿಗೆ ತಲುಪುತ್ತಿಿವೆ. ಕ್ಷೇತ್ರದಲ್ಲಿನ 5 ಎ, ನಾಲೆ ಸೇರಿ ಇತರೆ ಇಂತಹ ಯೋಜನೆಗಳ ಮೂಲಕ ಈ ಭಾಗದ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಿಸಿ ನೆರವಾಗುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆಯ ಮುಖ್ಯಅಭಿಯಂತರ ಎಚ್.ಎಲ್ ವೆಂಕಟೇಶ, ಕಾರ್ಯನಿರ್ವಾಹಕ ಅಭಿಯಂತರ ಬಿ.ಎಸ್ ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೇವೇಂದ್ರಪ್ಪ, ಕಾಂಗ್ರೆೆಸ್ ಜಿಲ್ಲಾಾ ಪ್ರಚಾರ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ಯದ್ದಲದಿನ್ನಿಿ, ಪಪಂ ಅಧ್ಯಕ್ಷ ಶಿವುಕುಮಾರ ನಾಯಕ್, ಉಪಾಧ್ಯಕ್ಷ ಮಂಜುನಾಥಸ್ವಾಾಮಿ, ತಾಲ್ಲೂಕಾ ಗ್ರಾಾಮೀಣ ಪ್ರಚಾರ ಸಮಿತಿಯ ಅಧ್ಯಕ್ಷ ಸಂಜಯಕುಮಾರ, ಜೈನ್, ಸೇರಿದಂತೆ ಪಪಂ ಸದಸ್ಯರು, ಜಿಲ್ಲಾಾ, ತಾಲ್ಲೂಕಾ, ನಗರ, ಗ್ರಾಾಮೀಣ ಸೇರಿ ಕಾಂಗ್ರೆೆಸ್ನ ವಿವಿಧ ಸಮಿತಿಯ ಪದಾಧಿಕಾರಿಗಳು, ಪಕ್ಷದ ಮುಖಂಡರು,ರೈತ ಮುಖಂಡರು ಮತ್ತಿಿತರರು ಪಾಲ್ಗೊೊಂಡಿದ್ದರು.
ಕ್ಯಾಾಂಪ್ ರೈತರ ಹಿತಕ್ಕಾಗಿ ಶಾಸಕ ತುರ್ವಿಹಾಳ ಕಾಳಜಿ – ಬೋಸರಾಜು

