ಸುದ್ದಿಮೂಲ ವಾರ್ತೆ ಲಿಂಗಸೂಗೂರು, ಜ.13:
ರೈತರ ಬಹುದಿನಗಳ ಬೇಡಿಕೆಯಾದ ತೊಗರಿ ಖರೀದಿ ಕೇಂದ್ರವನ್ನು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆೆ ಪ್ರಾಾಂಗಣದಲ್ಲಿ ಶಾಸಕ ಮಾನಪ್ಪ ವಜ್ಜಲ್ ಅವರು ತೊಗರಿ ಖರೀದಿ ಕೇಂದ್ರ ಮಂಗಳವಾರ ಉದ್ಘಾಾಟಿಸಿದರು.
ಕೇಂದ್ರ ಸರಕಾರದ ಬೆಂಬಲ ಯೋಜನೆಯಡಿ ನೊಡ್ ಸಂಸ್ಥೆೆಯ 2025 -26ನೇ ಸಾಲಿನ ಎ್.ಎ.ಕ್ಯೂ. ಗುಣಮಟ್ಟದ ತೊಗರಿ ಕೇಂದ್ರ ಇಂದಿನಿಂದ ಕಾರ್ಯಾರಂಭ ಮಾಡಿದ್ದು, ತಾಲೂಕಿನ ರೈತರು ನಿಯಮಾನುಸಾರ ದಾಖಲಾತಿಗಳ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿ ಶಾಂತಯುತವಾಗಿ ತಮ್ಮ ಬೆಳೆಯನ್ನು ಇಲ್ಲಿ ಮಾರಾಟ ಮಾಡಬಹುದು. ಅಧಿಕಾರಿಗಳು ರೈತರೊಂದಿಗೆ ಅನುಚಿತವಾಗಿ ವರ್ತಿಸದೇ ಗ್ರಾಾಮೀಣ ಪ್ರದೇಶದಿಂದ ಬರುವ ರೈತರ ಮಾಲನ್ನು ಸಕಾಲದಲ್ಲಿ ತೆಗೆದುಕೊಳ್ಳಬೇಕು. ಎಂದು ಶಾಸಕ ವಜ್ಜಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಅಮರೇಶ ಹೆಸರೂರು, ಮುದಗಲ್ ಬಿಜೆಪಿ ಮಂಡಲ ಅಧ್ಯಕ್ಷರಾದ ಹುಲ್ಲೇಶ ಸಾಹುಕಾರ , ಮುಖಂಡರಾದ ಗಿರಿಮಲ್ಲನಗೌಡ,ನಿರ್ದೇಶಕರಾದ ಮಹಾದೇವಯ್ಯ ಸ್ವಾಾಮಿ, ಅಯ್ಯಪ್ಪ ಮಾಳೂರು, ಭೀಮಣ್ಣ ಹಿರೇಮನಿ ಸೇರಿದಂತೆ ಇತರರು ಇದ್ದರು.

