ಸುದ್ದಿಮೂಲವಾರ್ತೆ
ಸಿರವಾರ: ಏ.೮ ಮಾನ್ವಿ ವಿಧಾನ ಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷದಗಳಾದ ಕಾಂಗ್ರೆಸ್- ಬಿಜೆಪಿ ಪಕ್ಷದಲ್ಲಿ ಟಿಕೆಟಗಾಗಿ ಕಚ್ಚಾಟನಡೆದಿದೆ, ಇನ್ನೂ ಜನರ ಸಮಸ್ಯೆಗೆ ಸ್ಪಂದನೆ ಯಾವಾಗ ಎಂದು ಮಾನ್ವಿ ಕ್ಷೇತ್ರದ ಶಾಸಕ ರಾಜಾ ವೆಂಕಟಪ್ಪ ನಾಯಕ ವ್ಯಂಗ್ಯ ಮಾಡಿದರು.
ಅವರು ಶನಿವಾರ ತಾಲೂಕಿನ ನವಲಕಲ್ ಗ್ರಾಮದ ಶ್ರೀಶಾಂಭವಿ ಪೂಜೆಸಲ್ಲಿಸಿ ನಂತರ ಮಾತನಾಡಿ ಮತದಾರರ ಭೇಟಿ ನೀಡಲಾಗುತ್ತದೆ ಪಂಚರತ್ನ ಯೋಜನೆ ಕರಪತ್ರ ಹಾಗೂ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿಕೆ ಹಾಗೂ ನಾಮಪತ್ರ ಸಲ್ಲಿಸಲು ಜನರಿಗೆ ಆಹ್ವಾನ ನೀಡಲಾಗುತ್ತದ ಎಂದು ನವಲಕಲ್, ನಾರಬಂಡಿ, ವಡವಟ್ಟಿ, ಕುರುಕುಂದಾ, ಕಸನದೂಡ್ಡಿ, ಹೀರಾ, ಹುಡಾ, ಬುದ್ದಿನ್ನಿ, ಚಿಂಚರಕಿ ಗ್ರಾಮಗಳಿಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಟಿ. ಮಲ್ಲಿಕಾರ್ಜುನ ಪಾಟೀಲ್ , ಜಂಬುನಾಥ ಯಾದವ್, ರಾಜಾ ಆದರ್ಶ ನಾಯಕ, ಪಿ.ರವಿಕುಮಾರ್, ಯಂಕೋಬ್, ವಿಕ್ರಮ್ ಪಾಟೀಲ್ ಸೇರಿದಂತೆ ಅನೇಕರು ಇದ್ದರು.