ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.19
ಮಾನ್ವಿಿ, ಲಿಂಗಸುಗೂರು, ಮಸ್ಕಿ ತಾಲೂಕುಗಳನ್ನು ಒಳಗೊಂಡಂತೆ ಸಿಂಧನೂರು ಜಿಲ್ಲಾ ಕೇಂದ್ರವನ್ನಾಾಗಿ ರಚಿಸುವಂತೆ ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಮನವಿ ಮಾಡಿದ್ದಾಾರೆ. ಅವರು ಸದನದಲ್ಲಿ ಚುಕ್ಕೆೆ ಗುರುತಿಲ್ಲದ ಪ್ರಶ್ನೆೆ ರಾಯಚೂರು ಜಿಲ್ಲೆೆಯ ಸಿಂಧನೂರು ತಾಲೂಕು ಸುಮಾರು 2.4 ಲಕ್ಷ ಮತದಾರರು ಹಾಗೂ ಅಂದಾಜು 3 ಲಕ್ಷಕ್ಕಿಿಂತ ಅಧಿಕ ಜನಸಂಖ್ಯೆ ಹೊಂದಿದ್ದು, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮುಂದುವರಿಯುತ್ತಿಿದೆ. ರಾಯಚೂರು ಜಿಲ್ಲಾಾ ಕೇಂದ್ರದಿಂದ ಸುಮಾರು 90 ಕಿ.ಮೀ ದೂರದಲ್ಲಿದ್ದು, ಜನರು ಜಿಲ್ಲಾಾ ಕೇಂದ್ರಕ್ಕೆೆ ಅಲೆದಾಡುವುದು ಕಷ್ಟಕರವಾಗಿದೆ.
ಮಾನ್ವಿ, ಲಿಂಗಸುಗೂರು ಹಾಗೂ ಮಸ್ಕಿ ತಾಲೂಕು ಕೇಂದ್ರಗಳು ಸಿಂಧನೂರು ತಾಲೂಕು ಕೇಂದ್ರದಿಂದ ಕೇವಲ 50 ಕಿ.ಮೀ ಅಂತರದಲ್ಲಿರುವದು ಸರ್ಕಾರದ ಗಮನಕ್ಕೆ ಬಂದಿದೆಯೇ? ಹಾಗಿದ್ದಲ್ಲಿ ಮಾನ್ವಿ, ಲಿಂಗಸುಗೂರು, ಮಸ್ಕಿ ತಾಲೂಕುಗಳನ್ನು ಒಳಗೊಂಡಂತೆ ಸಿಂಧನೂರು ಜಿಲ್ಲಾಾ ಕೇಂದ್ರವನ್ನಾಾಗಿ ಮಾಡುವ ಪ್ರಸ್ತಾಾವನೆ ಸರ್ಕಾರದ ಮುಂದಿದೆಯೇ? ಹಾಗಿದ್ದಲ್ಲಿ ಯಾವ ಹಂತದಲ್ಲಿದೆ ಮಾಹಿತಿಯನ್ನು ನೀಡುವಂತೆ ಕಂದಾಯ ಸಚಿವರಿಗೆ ಕೇಳಿದ್ದಾಾರೆ.
ಪರಿಷತ್ ಶಾಸಕರ ಪ್ರಶ್ನೆಗೆ ಕಂದಾಯ ಸಚಿವ ಕೃಷ್ಣಬೈರೇಗೌಡ ಲಿಖಿತ ಉತ್ತರಿಸಿ ಮಾತನಾಡಿ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕನ್ನು ನೂತನ ಜಿಲ್ಲಾ ಕೇಂದ್ರವನ್ನಾಗಿ ಸೃಜಿಸುವ ಸಂಬಂಧದ ಕೋರಿಕೆಗಳು ಸ್ವೀಕೃತವಾಗಿರುತ್ತವೆ. ಸದರಿ ಕೋರಿಕೆಗಳನ್ನು ಪರಿಗಣಿಸಲು ಸೂಕ್ತವಾಗಿದ್ದಲ್ಲಿ ಸರ್ಕಾರಕ್ಕೆೆ ವಿವರವಾದ ಪ್ರಸ್ತಾಾವನೆ ಸಲ್ಲಿಸುವಂತೆ ಕಲಬುರಗಿ ವಿಭಾಗದ ಪ್ರಾಾದೇಶಿಕ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, ಸದರಿಯವರಿಂದ ಯಾವುದೇ ವರದಿ/ಪ್ರಸ್ತಾಾವನೆ ಸ್ವೀಕೃತಗೊಂಡಿರುವುದಿಲ್ಲ ಎಂದು ಸದನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಉತ್ತರಿಸಿದ್ದಾರೆ.
ಪರಿಷತ್ನಲ್ಲಿ ಶಾಸಕರ ಪ್ರಶ್ನೆ ಸಿಂಧನೂರು ಜಿಲ್ಲಾ ಕೇಂದ್ರ ಮಾಡಿ – ಬಸನಗೌಡ ಬಾದರ್ಲಿ

