ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.01:
ಸಂವಿಧಾನ ಸಂರಕ್ಷಣಾ ಪಡೆ ದೇವದುರ್ಗ ಆಯೋಜಿಸಿದ್ದ ಸಂವಿಧಾನ ಜಾಗೃತಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮಕ್ಕೆೆ ಎಂಎಲ್ಸಿಿ ಎ.ವಸಂತಕುಮಾರ ಪಟ್ಟಣದ ಜೆಪಿ ವೃತ್ತದಲ್ಲಿ ಚಾಲನೆ ನೀಡಿದರು.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನೂರಾರು ಸಂಖ್ಯೆೆಯಲ್ಲಿ ಸೇರಿದ ಜನರು ಜೈಭೀಮ ಎಂಬ ಘೋಷಣೆಗಳು ಕೂಗಿದರು. ಕಾಂಗ್ರೆೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಪಾಟೀಲ್ ಇಟಗಿ ಸೇರಿದಂತೆ ಪಕ್ಷದ ಮುಖಂಡರು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊೊಂಡರು. ಬೆಳಿಗ್ಗೆೆ 9.30ಕ್ಕೆೆ ಒಬ್ಬರಂತೆ ಮಧ್ಯಾಾಹ್ನಹೊತ್ತಿಿಗೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ನೂರಾರು ಭೀಮ ಅನುಯಾಯಿಗಳು, ವಿವಿಧ ಸಂಘಟನೆ ಮುಖಂಡರು ಜಾಥಾದಲ್ಲಿ ಪಾಲ್ಗೊೊಂಡರು. ಜೆಪಿ ವೃತ್ತದಿಂದ ಆರಂಭವಾದ ಕಾಲ್ನಡಿಗೆ ಜಾಥಾ ರಾಜ್ಯ ಹೆದ್ದಾರಿ ಬಸ್ ನಿಲ್ದಾಾಣ, ಎಪಿಎಂಸಿ, ಬಾಬು ಜಗಜೀವನರಾವ್ ವೃತ್ತ ಮಾರ್ಗವಾಗಿ ಡಾ.ಬಿ.ಆರ ಅಂಬೇಡ್ಕರ್ ವೃತ್ತಕ್ಕೆೆ ಆಗಮಿಸಿ ಮಾಲಾರ್ಪಣೆ ಪೂಜೆ ಸಲ್ಲಿಸಿದರು. ನಂತರ ಅಂಬೇಡ್ಕರ್ ವೃತ್ತದಿಂದ ಪ್ರಮುಖ ರಸ್ತೆೆ ಮಾರ್ಗವಾಗಿ ಬಾಪೂಜಿ ಓಣಿ, ಭಗತ್ಸಿಂಗ್, ಕಟ್ಟಗರ್ ಕಟ್ಟಿಿ, ಗಾಂಧಿ ವೃತ್ತ, ಬಸವೇಶ್ವರ ವೃತ್ತದಿಂದ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮ ಸಾರ್ವಜನಿಕ ಕ್ಲಬ್ವರೆಗೆ ಕಾಲ್ನಡಿಗೆ ಜಾಥಾ ಅದ್ದೂರಿ ಜರುಗಿತು. ಜೆಪಿ ವೃತ್ತದಿಂದ ವೇದಿಕೆವರೆಗೆ ಬರೋಬ್ಬರಿ ಮೂರು ಕಿಮೀ ಕಾಲ್ನಡಿಗೆ ಜಾಥಾ ಜರುಗಿತು.
ಎಲ್ಲಿ ನೋಡಿದರಲ್ಲಿ ನೀಲಿ ಧ್ವಜಗಳು : ಪಟ್ಟಣದಲ್ಲಿ ಸೋಮವಾರ ನಡೆದ ಸಂವಿಧಾನ ಜಾಗೃತಿ ಕಾಲ್ನಡಿಗೆ ಜಾಥಾದಲ್ಲಿ ಎಲ್ಲಿ ನೋಡಿದರಲ್ಲಿ ನೀಲಿ ಧ್ವಜಗಳು ಹಾರಾಡಿದವು. ಪ್ರತಿಯೊಬ್ಬರ ಕೈಯಲ್ಲಿ ನೀಲಿ ಧ್ವಜಗಳು ಮೇಲೆ ಹಾರಾಡಿದ ದೃಶ್ಯಗಳು ನೋಡುಗರ ಗಮನಸೆಳೆದವು. ಸಂವಿಧಾನ ಜಾಗೃತಿ ಕಾಲ್ನಡಿಗೆ ಜಾಥಾದಲ್ಲಿ ನೀಲಿ ಧ್ವಜಗಳ ಜೊತೆ ಸಂವಿಧಾನದ ಪೀಠಿಕೆಗಳು ಕೈಯಲ್ಲಿಡಿದುಕೊಂಡು ಮನುವಾದಿಗಳ ವಿರುದ್ಧ ಘೋಷಣೆಗಳು ಕೂಗಿದರು. ಸಂವಿಧಾನ ಮುಟ್ಟಕ್ಕೆೆ ಬಂದರೆ ಸುಟ್ಟು ಹಾಕುತ್ತೇವೆ ಎಂದು ಕೆಲ ಮುಖಂಡರು ಆಕ್ರೋೋಶ ವ್ಯಕ್ತಪಡಿಸಿದರು.
ಟ್ರಾಾಫಿಕ್ ಕಿರಿಕಿರಿ : ಜೆಪಿ ವೃತ್ತ ರಾಜ್ಯ ಹೆದ್ದಾರಿ ರಸ್ತೆೆ ಮೂಲಕ ಸಂವಿಧಾನ ಜಾಗೃತಿ ಕಾಲ್ನಡಿಗೆ ಜಾಥಾ ಜರುಗಿದ ಹಿನ್ನೆೆಲೆ ಕೆಲಕಾಲ ಟ್ರಾಾಫಿಕ್ ಸಮಸ್ಯೆೆಯಿಂದ ವಾಹನ ಚಾಲಕರು, ಬೈಕ್ ಸವಾರರು, ಪಾದಚಾರಿಗಳು ಟ್ರಾಾಫಿಕ್ ಸಮಸ್ಯೆೆ ಎದುರಿಸಿದರು. ಜಾಲಹಳ್ಳಿಿ, ಕಲಬುರಗಿ, ಶಹಾಪೂರು ಸೇರಿದಂತೆ ಇತರೆ ತಾಲೂಕಿಗೆ ತೆರಳುವ ಬಸ್ ಖಾಸಗಿ ವಾಹನಗಳು ಟ್ರಾಾಫಿಕ್ ಸಮಸ್ಯೆೆ ಉಂಟಾಯಿತು. ಸ್ಥಳದಲ್ಲಿದ್ದ, ಪೊಲೀಸ್ ಸಿಬ್ಬಂದಿಗಳು ಟ್ರಾಾಫಿಕ್ ನಿಯಂತ್ರಣ ಮಾಡಲು ಹರಸಾಹಸ ಪಡುವಂತಾಯಿತು. ಬಸ್ ನಿಲ್ದಾಾಣ ಮಾರ್ಗದಲ್ಲಿ ಕಿರಿದಾದ ರಸ್ತೆೆ ಇರುವುದರಿಂದ ಒಂದಕ್ಕೊೊಂದು ವಾಹನಗಳು ಮೂಲ ಸ್ಥಳಕ್ಕೆೆ ತೆರಳಲು ಕೆಲಹೊತ್ತು ಸಮಸ್ಯೆೆ ಎದುರಿಸಿದರು.
ಕಾಲ್ನಡಿಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಎಂಎಲ್ಸಿ ಎ.ವಸಂತಕುಮಾರ ಚಾಲನೆ: ಮೂರು ಕಿಮೀ ಅದ್ದೂರಿ ಜಾಥಾ: ಹಾರಾಡಿದ ನೀಲಿ ಧ್ವಜಗಳು : ಕೆಲಕಾಲ ಟ್ರಾಫಿಕ್ ಸಮಸ್ಯೆ

